For Quick Alerts
  ALLOW NOTIFICATIONS  
  For Daily Alerts

  ಅಪ್ಪುಗೆ ಕರ್ನಾಟಕ ರತ್ನ: 'ಗೆಳೆಯ'ನಿಗಾಗಿ ಬೆಂಗಳೂರಿಗೆ ಬಂದಿಳಿದ ಜೂನಿಯರ್ ಎನ್‌ಟಿಆರ್

  |

  ಇಂದು ( ನವೆಂಬರ್ 1 ) ಬೆಂಗಳೂರಿನ ವಿಧಾನಸೌಧದ ಮುಂದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನವನ್ನು ನೀಡಿ ಗೌರವಿಸಲಾಗುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಪ್ರಶಸ್ತಿಯನ್ನು ನೀಡಲಿದ್ದು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸ್ವೀಕರಿಸಲಿದ್ದಾರೆ.

  ಇನ್ನು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಸೂಪರ್ ಸ್ಟಾರ್ ರಜನಿಕಾಂತ್, ಜೂನಿಯರ್ ಎನ್ ಟಿ ಆರ್ ಹಾಗೂ ಇನ್ಫೋಸಿಸ್ ಸುಧಾಮೂರ್ತಿ ಆಗಮಿಸಲಿದ್ದಾರೆ. ಈಗಾಗಲೇ ರಜನಿಕಾಂತ್ ಬೆಂಗಳೂರಿಗೆ ಬಂದಿಳಿದಿದ್ದು ಇದೀಗ ಜೂನಿಯರ್ ಎನ್ ಟಿ ಆರ್ ಸಹ ಬೆಂಗಳೂರಿಗೆ ಬಂದು ತಲುಪಿದ್ದಾರೆ. ಪ್ರೈವೇಟ್ ಜೆಟ್‌ನಲ್ಲಿ ಜೂನಿಯರ್ ಎನ್ ಟಿ ಆರ್ ಅವರು ಬೆಂಗಳೂರಿನ ಎಚ್ ಎ ಎಲ್‌ಗೆ ಬಂದು ತಲುಪಿದ್ದಾರೆ.

  ಜೂನಿಯರ್ ಎನ್‌ ಟಿ ಆರ್ ಅವರನ್ನು ಶಾಸಕ ಮುನಿರತ್ನ ಅವರು ಎಚ್ ಎ ಎಲ್‌ನಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಹೀಗೆ ಜೂನಿಯರ್ ಎನ್ ಟಿ ಆರ್ ತಮ್ಮ ಗೆಳೆಯ ಪುನೀತ್ ರಾಜ್‌ಕುಮಾರ್‌ಗೆ ನೀಡಲಿರುವ ಅತ್ಯುನ್ನತ ಪ್ರಶಸ್ತಿಗೆ ಸಾಕ್ಷಿಯಾಗಲು ಸಿದ್ಧರಾಗಿದ್ದಾರೆ. ಕಾರ್ಯಕ್ರಮ ಸಂಜೆ ನಾಲ್ಕು ಗಂಟೆಗೆ ವಿಜಯ್ ಪ್ರಕಾಶ್ ಗಾಯನದ ಮೂಲಕ ಆರಂಭವಾಗಲಿದ್ದು, ಸಂಜೆ ಐದು ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

  ವೆಸ್ಟೆಂಡ್ ಹೊಟೇಲ್‌ನಲ್ಲಿ ಎನ್‌ಟಿಆರ್ ವಿಶ್ರಾಂತಿ

  ವೆಸ್ಟೆಂಡ್ ಹೊಟೇಲ್‌ನಲ್ಲಿ ಎನ್‌ಟಿಆರ್ ವಿಶ್ರಾಂತಿ

  ಇನ್ನು ಬೆಂಗಳೂರಿಗೆ ಬಂದಿಳಿದ ಜೂನಿಯರ್ ಎನ್ 'ಟಿ ಆರ್ ಅವರಿಗೆ ಸಚಿವರಾದ ಡಾ. ಸುಧಾಕರ್ ಹಾಗೂ ಮುನಿರತ್ನ ಹೂಗುಚ್ಛ ಹಾಗೂ 'ಅಪ್ರೈಂಟೈಸ್ಡ್ ಟು ಎ ಹಿಮಾಲಯನ್ ಮಾಸ್ಟರ್' ಎಂಬ ಬುಕ್ ನೀಡಿ ಸ್ವಾಗತಿಸಲಾಗಿದೆ. ಅಲ್ಲಿಂದ ಜೂನಿಯರ್ ಎನ್‌ಟಿಆರ್ ಅವರನ್ನು ನೇರವಾಗಿ ತಾಜ್ ವೆಸ್ಟ್ ಎಂಡ್ ಹೊಟೇಲ್‌ಗೆ ಕರೆದುಕೊಂಡು ಹೋಗಲಾಗಿದ್ದು, ಎನ್ ಟಿ ಆರ್ ಅಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ನಂತರ ವಿಧಾನಸೌಧದ ಕಡೆ ಪ್ರಯಾಣ ಬೆಳೆಸಲಿದ್ದಾರೆ.

  ಅಪ್ಪುಗಾಗಿ ಕನ್ನಡ ಹಾಡು ಹಾಡಿದ್ದ ಎನ್ ಟಿ ಆರ್

  ಅಪ್ಪುಗಾಗಿ ಕನ್ನಡ ಹಾಡು ಹಾಡಿದ್ದ ಎನ್ ಟಿ ಆರ್

  ಇನ್ನು ಈ ಹಿಂದೆ ಜೂನಿಯರ್ ಎನ್ ಟಿ ಆರ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಎಂಬ ಹಾಡಿಗೆ ದನಿ ನೀಡಿದ್ದರು. ಇದು ಜೂನಿಯರ್ ಎನ್ ಟಿ ಆರ್ ಕಂಠದಲ್ಲಿ ಮೂಡಿಬಂದ ಎರಡನೇ ಹಾಡು ಹಾಗೂ ಏಕೈಕ ಕನ್ನಡ ಹಾಡಾಗಿದೆ.

  ಅಪ್ಪು ನಿಧನ ಹೊಂದಿದ್ದಾಗ ಭಾವುಕರಾಗಿದ್ದ ಎನ್ ಟಿ ಆರ್

  ಅಪ್ಪು ನಿಧನ ಹೊಂದಿದ್ದಾಗ ಭಾವುಕರಾಗಿದ್ದ ಎನ್ ಟಿ ಆರ್

  ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿ ತಿಳಿದ ಕೂಡಲೇ ಜೂನಿಯರ್ ಎನ್ ಟಿ ಆರ್ ಬೆಂಗಳೂರಿಗೆ ಆಗಮಿಸಿ ಪುನೀತ್ ಅಂತಿಮ ದರ್ಶನ ಪಡೆದಿದ್ದರು. ಅಪ್ಪು ಪಾರ್ಥಿವ ಶರೀರ ನೋಡಿ ಕಣ್ಣೀರು ಇಟ್ಟಿದ್ದ ಎನ್ ಟಿ ಆರ್ ಅಪ್ಪು ಮುಖ ಮುಟ್ಟಿ ಗೆಳೆಯನಿಗೆ ಅಂತಿಮ ವಿದಾಯ ಹೇಳಿದ್ದರು. ಅಷ್ಟೇ ಅಲ್ಲದೇ ಅಪ್ಪು ನಿಧನದ ನಂತರ ನಡೆದಿದ್ದ ಆರ್ ಆರ್ ಆರ್ ಪ್ರಚಾರದ ಸಂದರ್ಭದಲ್ಲಿ ಪುನೀತ್ ಇಲ್ಲದ ಕರ್ನಾಟಕ ನಂಗೆ ಶೂನ್ಯ ಎಂದು ಎನ್ ಟಿ ಆರ್ ಗೆಳೆಯ ಗೆಳೆಯ ಹಾಡನ್ನು ಹಾಡಿ ಪುನೀತ್ ಅವರನ್ನು ನೆನಪಿಸಿಕೊಂಡಿದ್ದರು. ಇನ್ನು ಜೂನಿಯರ್ ಎನ್ ಟಿ ಆರ್ ಮನೆಯಲ್ಲಿ ಪುನೀತ್ ರಾಜ್‌ಕುಮಾರ್ ಫೋಟೊ ಇರುವ ಚಿತ್ರ ಕೂಡ ಇತ್ತೀಚೆಗಷ್ಟೆ ವೈರಲ್ ಆಗಿತ್ತು.

  English summary
  Jr NTR arrived to Bengaluru to grace the Karnataka Ratna to Puneeth Rajkumar event
  Tuesday, November 1, 2022, 15:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X