For Quick Alerts
  ALLOW NOTIFICATIONS  
  For Daily Alerts

  'ರಾಮಯ್ಯಾ ವಸ್ತಾವಯ್ಯಾ' ಕರ್ನಾಟಕ ರೈಟ್ಸ್ ಗೆ ಬಂಪರ್

  By ಅನಂತರಾಮು, ಹೈದರಾಬಾದ್
  |

  ಟಾಲಿವುಡ್ ಚಿತ್ರರಂಗದಲ್ಲಿ ಯಂಗ್ ಟೈಗರ್ ಎಂದೇ ಕರೆಸಿಕೊಂಡಿರುವ ಜೂನಿಯರ್ ಎನ್ಟಿಆರ್ ಗಾರು ನಟಿಸಿರುವ ಮತ್ತೊಂದು ಚಿತ್ರ 'ರಾಮಯ್ಯಾ ವಸ್ತಾವಯ್ಯಾ' ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಮೊದಲೇ ಥಿಯೇಟರ್ ಸಮಸ್ಯೆಯಿಂದ ಹೈರಾಣಾಗಿರುವ ಕನ್ನಡ ಚಿತ್ರಗಳ ಮೇಲೆ ಸವಾರಿ ಮಾಡುವುದು ಗ್ಯಾರಂಟಿಯಾಗಿದೆ.

  ತೆಲಂಗಾಣ ಗಲಾಟೆಯಲ್ಲಿ ತೆಲುಗು ಸ್ಟಾರ್ ನಟರ ಫ್ಯಾನ್ಸ್ ಹರಿದು ಹಂಚಿಹೋಗಿದ್ದಾರೆ. ಈ ಸಂದರ್ಭದಲ್ಲಿ ತೆಲುಗು ಸಿನಿಮಾಗಳಿಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆ ಬಂದಿದೆ. ಇದನ್ನು ಮನಗಂಡಿರುವ ಇಲ್ಲಿನ ವಿತರಕರು ಕೋಟಿಗಟ್ಟರೆ ಕೊಟ್ಟು ಚಿತ್ರದ ವಿತರಣೆ ಹಕ್ಕುಗಳನ್ನು ಪಡೆಯುತ್ತಿದ್ದಾರೆ.

  ಜೂ.ಎನ್ಟಿಆರ್ ಅಭಿನಯದ 'ರಾಮಯ್ಯಾ ವಸ್ತಾವಯ್ಯಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕುಗಳು ರು.3.5 ಕೋಟಿಗೆ ಮಾರಾಟವಾಗಿವೆ. ಬೃಂದಾ ಅಸೋಸಿಯೇಟ್ಸ್ ಈ ಚಿತ್ರವನ್ನು ರಾಜ್ಯದಾದ್ಯಂತ ವಿತರಣೆ ಮಾಡುತ್ತಿದೆ.

  ಈ ಹಿಂದೆ ಜೂ.ಎನ್ಟಿಆರ್ ಅಭಿನಯದ ದಮ್ಮು, ಬಾದ್ ಷಾ ಚಿತ್ರಗಳು ರಾಜ್ಯದಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿದ್ದವು. ರಾಮಯ್ಯಾ ವಸ್ತಾವಯ್ಯಾ ಚಿತ್ರದಲ್ಲಿ ಜೂ.ಎನ್ಟಿಆರ್ ಗೆ ಇಬ್ಬರು ಹೀರೋಯಿನ್ ಗಳು. ಒಬ್ಬರು ಸಮಂತಾ ಹಾಗೂ ಇನ್ನೊಬ್ಬ ಬೆಡಗಿ ಶ್ರುತಿ ಹಾಸನ್. ಚಿತ್ರಕ್ಕೆ ಹರೀಷ್ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ.

  ಇದೇ ಅಕ್ಟೋಬರ್ 10ರಂದು ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ಈ ಹಿಂದೆ ಜೂ.ಎನ್ಟಿಆರ್ ಅಭಿನಯದ 'ಬೃಂದಾವನಂ' ಚಿತ್ರ ಸೂಪರ್ ಹಿಟ್ ಆಗಿತ್ತು. ಈಗಲೂ ಅದೇ ರೀತಿಯ ನಿರೀಕ್ಷೆಗಳು ಈ ಚಿತ್ರದ ಮೇಲಿವೆ. ಅಲ್ಲಿ ಹಿಟ್ ಆದರೆ ಇಲ್ಲಿ ರೀಮೇಕ್ ಗ್ಯಾರಂಟಿ ಬಿಡಿ ಎಂಬ ಮಾತುಗಳು ಧಾರಾಳವಾಗಿ ಕೇಳಿಬರುತ್ತಿವೆ. ಜೈ ಕನ್ನಡ ಚಿತ್ರರಂಗ.

  English summary
  Brunda Associates that released Atharintiki Daaredi in Karnataka has bagged Ramayya Vastavayya for a whopping price for Rs.3.5 Crore. Ramayya Vasthavayya is an upcoming Telugu film written and directed by Harish Shankar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X