For Quick Alerts
  ALLOW NOTIFICATIONS  
  For Daily Alerts

  ನಟಿ ಜೂಹಿ ಚಾವ್ಲಾ ಮಗನ ಮಾನವೀಯತೆ ಗುಣಕ್ಕೆ ಭೇಷ್ ಎನ್ನಲೇಬೇಕು

  |
  ರಾಬರ್ಟ್, ಕೋಟಿಗೊಬ್ಬ 3 ಯಲ್ಲಿ ಗೆದ್ದವರಾರು | DARSHAN | SUDEEP | ROBERT | KOTIGOBBA3 | FILMIBEAT KANNADA

  ಬಾಲಿವುಡ್ ಚೆಲುವೆ ಜೂಹಿ ಚಾವ್ಲಾ ಅಂದ್ರೆ ಕನ್ನಡ ಚಿತ್ರರಸಿಕರಿಗೂ ಮರೆಯಲಾಗದ ಮುಖ. ರವಿಚಂದ್ರನ್ ಅವರ ಪ್ರೇಮಲೋಕ, ಕಿಂದರಿಜೋಗಿ, ಶಾಂತಿ ಕ್ರಾಂತಿ ಸಿನಿಮಾಗಳು ಥಟ್ ಅಂತ ನೆನಪಿಗೆ ಬರುತ್ತೆ. ಕನ್ನಡದಲ್ಲಿ ಮಾಡಿದ್ದು ಮೂರ್ನಾಲ್ಕೇ ಚಿತ್ರಗಳಾದರೂ ದಶಕಗಳ ಕಾಲ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ.

  ಉದ್ಯಮಿ ಜಯ್ ಮೆಹ್ತಾ ಅವರೊಂದಿಗೆ ವಿವಾಹವಾಗಿರುವ ಜೂಹಿ ಚಾವ್ಲಾ ಅವರಿಗೆ ಇಬ್ಬರು ಮಕ್ಕಳು. ಇದೀಗ, ಜೂಹಿ ಚಾವ್ಲಾ ಅವರ ಮಗ ಒಂದೊಳ್ಳೆ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  ದಕ್ಷಿಣ ಬ್ರೆಜಿಲ್ ತಲುಪಿದ ಆಸ್ಟ್ರೇಲಿಯಾ ಕಾಳ್ಗಿಚ್ಚು

  ಇತ್ತೀಚಿಗಷ್ಟೆ ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು ಸಂಭವಿಸಿ ಭಾರಿ ಪ್ರಮಾಣದ ನಷ್ಟವಾಗಿತ್ತು. ಅನೇಕ ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿದ್ದವು. ಈ ಘಟನೆಯಿಂದ ಬೇಸರಗೊಂಡಿದ್ದ ಜೂಹಿ ಚಾವ್ಲಾ ಅವರ ಮಗ ಅರ್ಜುನ್ ತಮ್ಮ ಪಾಕೆಟ್ ಹಣವನ್ನು ಆಸ್ಟ್ರೇಲಿಯಾ ಅರಣ್ಯ ಪುನರ್ ಚೇತನಕ್ಕಾಗಿ ದೇಣಿಗೆ ನೀಡಿದ್ದಾರೆ.

  ದಿನನಿತ್ಯದ ಖರ್ಚಿಗಾಗಿ ಸಂಗ್ರಹಿಸಿಕೊಂಡಿದ್ದ 300 ಪೌಂಡ್ (28,000 ರೂಪಾಯಿ) ಗಳನ್ನು ಆಸ್ಟ್ರೇಲಿಯಾಗೆ ದಾನವಾಗಿ ನೀಡಿದ್ದಾರೆ. ಈ ವಿಷಯವನ್ನು ಖುದ್ದು ಜೂಹಿ ಚಾವ್ಲಾ ಹೇಳಿಕೊಂಡಿದ್ದಾರೆ.

  ಆಸ್ಟ್ರೇಲಿಯಾ; ಐದು ದಿನದಲ್ಲಿ 5 ಸಾವಿರ ಒಂಟೆಗಳ ಹತ್ಯೆ

  ಲಂಡನ್ ಬೋರ್ಡಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಜುನ್, ತನ್ನ ಪಾಕೆಟ್ ಹಣವನ್ನು ಆಸ್ಟ್ರೇಲಿಯಾಗೆ ದಾನ ಮಾಡಿರುವುದಾಗಿ ತಾಯಿಯ ಬಳಿ ತಿಳಿಸಿದರಂತೆ. ಈ ಸುದ್ದಿ ಕೇಳಿ ನಿಜಕ್ಕೂ ಖುಷಿಯಾಯಿತು ಎಂದು ಜೂಹಿ ಹೇಳಿದ್ದಾರೆ.

  English summary
  Bollywood Superstar Actress Juhi Chawla son arjun has donated 300 pounds (28 thousand in rupees) to australia bushfires.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X