For Quick Alerts
  ALLOW NOTIFICATIONS  
  For Daily Alerts

  'ಜಂಗಲ್ ಜಾಕಿ' ರಾಜೇಶ್ ಮತ್ತೆ ಮಾನಸಿಕ ಅಸ್ವಸ್ಥ

  By Rajendra
  |

  ಹಳ್ಳಿ ಹೈದ ಪ್ಯಾಟೆಗೆ ಬಂದ ಹಾಗೂ 'ಜಂಗಲ್ ಜಾಕಿ' ಚಿತ್ರದ ನಾಯಕ ನಟ ರಾಜೇಶ್ ಮತ್ತೆ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. "ರಾಜೇಶ್ ಹುಚ್ಚನಂತೆ ವರ್ತಿಸುತ್ತಿದ್ದಾನೆ" ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.

  ಈ ಹಿಂದೆಮ್ಮೊಯೂ ಇದೇ ರೀತಿ ರಾಜೇಶ್ ಮಾನಸಿಕವಾಗಿ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಬಳಿಕ ಸರಿಹೋಗಿದ್ದ. ಈತ ಅಭಿನಯಿಸಿದ್ದ 'ಜಂಗಲ್ ಜಾಕಿ' ಎಂಬ ಬಿಡುಗಡೆಯಾಗುತ್ತದೋ ಇಲ್ಲವೋ ಎಂದು ಆತ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿ ಹುಚ್ಚನಂತಾಗಿದ್ದ.

  ಬಳಿಕ ಜಂಗಲ್ ಜಾಕಿ ಚಿತ್ರವೂ ಬಿಡುಗಡೆಯಾಯಿತು, ಮಠನೂ ಸೇರಿತು. ರಾಜೇಶ್ ಗೆ ಇನ್ನೊಂದು ಚಿತ್ರದಲ್ಲಿ ಅವಕಾಶ ಬಂದು. ಅದು ಲವ್ ಈಸ್ ಪಾಯಿಸನ್. ಈ ಚಿತ್ರದ ಶೂಟಿಂಗ್ ಶೇ.50ರಷ್ಟು ಮುಗಿದಿದೆ. ಉಳಿದ ಭಾಗದ ಚಿತ್ರೀಕರ್ಣ ನೆನೆಗುದಿಗೆ ಬಿದ್ದಿದೆ.

  ಖಿನ್ನನಾಗಿ ಅಸ್ವಸ್ಥನಾದ ಜಂಗಲ್ ಜಾಕಿ

  ಖಿನ್ನನಾಗಿ ಅಸ್ವಸ್ಥನಾದ ಜಂಗಲ್ ಜಾಕಿ

  ಇದೇ ಕೊರಗಿನಲ್ಲಿ ರಾಜೇಶ್ ಮತ್ತೆ ಮಾನಸಿಕವಾಗಿ ಖಿನ್ನನಾಗಿ ಅಸ್ವಸ್ಥನಾಗಿದ್ದಾನೆ ಎನ್ನಲಾಗಿದೆ. ಆರ್ಥಿಕ ತೊಂದರೆಯಿಂದ ಚಿತ್ರವನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ನಿರ್ಮಾಪಕ ಕೆ ಸೋಮಶೇಖರ್ ಹೇಳುತ್ತಿದ್ದಾರೆ. ಈ ಚಿತ್ರದ ನಿರ್ದೇಶಕರು ನಂದನ ಪ್ರಭು.

  ಬಿಗ್ ಬಾಸ್ ರಿಯಾಲಿಟಿ ಶೋಗೆ ಆಹ್ವಾನ

  ಬಿಗ್ ಬಾಸ್ ರಿಯಾಲಿಟಿ ಶೋಗೆ ಆಹ್ವಾನ

  ಏತನ್ಮಧ್ಯೆ ಸುದೀಫ್ ನಿರೂಪಿಸುತ್ತಿರುವ ಈಟಿವಿ ಕನ್ನಡದ ಬಿಗ್ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ಪಾಲ್ಗೊಳ್ಳಲು ರಾಜೇಶ್ ಗೆ ಕರೆಬಂದಿದೆ. ರಾಜೇಶ್ ಸಹ ಮುಂಬೈಗೆ ಹೋಗಿದ್ದರು. ಆದರೆ ಅಲ್ಲೂ ಅವರು ಹುಚ್ಚುಚ್ಚಾಗಿ ಆಡಲು ಶುರು ಮಾಡಿದ ಬಳಿಕ ಕಾರ್ಯಕ್ರಮದ ನಿರ್ವಾಹಕರು ರಾಜೇಶ್ ನನ್ನು ಮನೆಗೆ ಕಳುಹಿಸಿದ್ದಾರೆ ಎಂಬ ಸುದ್ದಿ ಇದೆ.

  ಅರ್ಧಕ್ಕೆ ನಿಂತ ಲವ್ ಈಸ್ ಪಾಯಿಸನ್

  ಅರ್ಧಕ್ಕೆ ನಿಂತ ಲವ್ ಈಸ್ ಪಾಯಿಸನ್

  ರಾಜೇಶ್ ವಿಧಿ ಇಲ್ಲದೆ ತಮ್ಮ ಸರಗೂರು ಸಮೀಪದ ಬಳ್ಳೆ ಹಾಡಿಗೆ ವಾಪಸ್ಸಾಗಿದ್ದಾರೆ. ಅತ್ತ ಲವ್ ಈಸ್ ಪಾಯಿಸನ್ ಚಿತ್ರ ಅರ್ಧಕ್ಕೆ ನಿಂತದ್ದು, ಇತ್ತ ಬಿಗ್ ಬಾಸ್ ಅವಕಾಶ ತಪ್ಪಿದ್ದು ರಾಜೇಶ್ ನನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸಿವೆ. ಇದರ ಪರಿಣಾಮ ಅವರು ಮತ್ತೆ ಮಾನಸಿಕ ಅಸ್ವಸ್ಥ.

  ಎಲ್ಲಾ ಬಣ್ಣದ ಲೋಕದ ಸಹವಾಸ

  ಎಲ್ಲಾ ಬಣ್ಣದ ಲೋಕದ ಸಹವಾಸ

  ಒಟ್ಟಾರೆಯಾಗಿ ಎಲ್ಲೋ ಹಾಡಿಯಲ್ಲಿ ಆರಾಮವಾಗಿ ಇರಬೇಕಾಗಿದ್ದ ಈತ ಬಣ್ಣದ ಲೋಕದ ಸಹವಾಸಕ್ಕೆ ಸಿಕ್ಕಿ ಈಗ ಈ ರೀತಿಯಾಗಿದ್ದಾನೆ. ಹಳ್ಳಿ ಹೈದ ಪ್ಯಾಟೆಗೆ ಬಂದ ಕಾರ್ಯಕ್ರಮದಲ್ಲಿ ರು. 10 ಲಕ್ಷ ಬಹುಮಾನ ಗೆದ್ದಿದ್ದ. ಈಗ ಈ ಗಿರಿಜನ ಹೈದನ ಬದುಕು ಬರಡಾಗಿದೆ.

  ಹೆಂಗಿದ್ದ ಹಳ್ಳಿ ಹೈದ ಹೆಂಗಾದ

  ಹೆಂಗಿದ್ದ ಹಳ್ಳಿ ಹೈದ ಹೆಂಗಾದ

  ಇನ್ನೊಂದು ಮೂಲದ ಪ್ರಕಾರ ಕೊಡಗು ಜಿಲ್ಲೆಯ ಕುಟ್ಟಾದ ಕಾವ್ಯಳನ್ನು ರಾಜೇಶ ಮದುವೆಯಾದ ಬಳಿಕ ಹೀಗಾದ ಎನ್ನುತ್ತಾರೆ. ಹೆಂಡಗಿಯೊಂದಿಗೆ ಜಗಳ, ಮನಸ್ತಾಪ, ಅನುಮಾನ ಇದ್ದೇ ಇತ್ತು. ಹೆಂಗಿದ್ದ ಹಳ್ಳಿ ಹೈದ ಹೆಂಗಾದ.

  English summary
  'Jungle Jackie' Rajesh again admits To KR Hospital in Mysore. A few days ago Rajesh fell ill and was admitted to the hospital for treatment. It is discovered that he has become mentally sickRajesh the tribal boy from rural Karnataka made a good name from 'Halli Hydha Pyateg Bandha' reality show with Aishwarya as his counterpart. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X