»   » ತೆಲುಗು 'ಬಿಗ್ ಬಾಸ್'ಗೆ ಯಂಗ್ ಟೈಗರ್ ಸಾರಥಿ

ತೆಲುಗು 'ಬಿಗ್ ಬಾಸ್'ಗೆ ಯಂಗ್ ಟೈಗರ್ ಸಾರಥಿ

Posted By:
Subscribe to Filmibeat Kannada

ಹಿಂದಿ ಮತ್ತು ಕನ್ನಡದಲ್ಲಿ 'ಬಿಗ್ ಬಾಸ್' ಯಶಸ್ಸು ಕಂಡ ಮೇಲೆ ಈಗ ದಕ್ಷಿಣದ ಮತ್ತೆರೆಡು ಭಾಷೆಗಳಲ್ಲಿ 'ಬಿಗ್ ಬಾಸ್' ಕಾರ್ಯಕ್ರಮ ಬರುತ್ತಿದೆ. ತೆಲುಗು ಮತ್ತು ತಮಿಳಿನಲ್ಲಿ 'ಬಿಗ್ ಬಾಸ್' ರಿಯಾಲಿಟಿ ಶೋ ಆರಂಭವಾಗುತ್ತಿದ್ದು, ಕಾರ್ಯಕ್ರಮ ನಿರೂಪಕರು ಕೂಡ ಅಂತಿಮವಾಗಿದ್ದಾರೆ.

ಈಗಾಗಲೇ ಗೊತ್ತಿರುವಾಗೆ, ತಮಿಳಿನಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ 'ಬಿಗ್ ಬಾಸ್' ಹೋಸ್ಟ್ ಮಾಡುತ್ತಿದ್ದಾರೆ. ಮತ್ತೊಂದೆಡೆ ತೆಲುಗಿನಲ್ಲಿ ಜೂನಿಯರ್ ಎನ್.ಟಿ.ಆರ್ ಅಥವಾ ಚಿರಂಜೀವಿ 'ಬಿಗ್ ಬಾಸ್' ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿತ್ತು.

ಈಗ ತೆಲುಗಿನಲ್ಲಿ 'ಬಿಗ್ ಬಾಸ್' ಯಾರಾಗಲಿದ್ದಾರೆ ಎಂಬುದು ಖಚಿತವಾಗಿದೆ. ಯಂಗ್ ಟೈಗರ್ ಎನ್.ಟಿ.ಆರ್ ತೆಲುಗು 'ಬಿಗ್ ಬಾಸ್' ಗೆ ಸಾರಥಿ ಆಗುತ್ತಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮುಂದೆ ಓದಿ....

ತೆಲುಗಿನಲ್ಲಿ ಎನ್.ಟಿ.ಆರ್ 'ಬಿಗ್ ಬಾಸ್'

ತೆಲುಗು 'ಬಿಗ್ ಬಾಸ್' ನಿರೂಪಕರಾಗಿ ಜೂನಿಯರ್ ಎನ್.ಟಿ.ಆರ್ ಆಯ್ಕೆಯಾಗಿದ್ದು, ಪ್ರೋಮೋಶೂಟ್ ಮಾಡಲಾಗಿದೆ. ಇನ್ನು 'ಬಿಗ್ ಬಾಸ್' ನ ಫಸ್ಟ್ ಲುಕ್ ಎನ್ನುವಂತೆ ಸ್ಟೈಲಿಶ್ ಫೋಟೋ ಬಿಡುಗಡೆ ಮಾಡಿದ್ದಾರೆ.

ಕನ್ನಡ 'ಬಿಗ್ ಬಾಸ್'ನಲ್ಲಿ ಸುದೀಪ್, ತಮಿಳಿನಲ್ಲಿ ಕಮಲ್, ತೆಲುಗಿನಲ್ಲಿ ಯಾರು?

ಸ್ಟೈಲಿಶ್ 'ಆಂಕರ್'

'ಬಿಗ್ ಬಾಸ್' ಕಾರ್ಯಕ್ರಮಕ್ಕಾಗಿ ಜೂನಿಯರ್ ಎನ್.ಟಿ.ಆರ್ ಹೊಸ ರೀತಿಯ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ರೆಗ್ಯೂಲರ್ ಸ್ಟೈಲ್ ನಿಂದ ಹೊರ ಬಂದು ಫಾರ್ಮಲ್ ಆಗಿ 'ಬಿಗ್ ಬಾಸ್' ಆಗಿದ್ದಾರೆ.

ಮೊದಲ ಸಲ ಟಿವಿ ಶೋ

ನಾಗಾರ್ಜುನ, ಚಿರಂಜೀವಿ ಅಂತಹ ನಟರು ಈಗಾಗಲೇ ಟಿವಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರೆ, ಜೂನಿಯರ್ ಎನ್.ಟಿ.ಆರ್ ಗೆ ಇದು ಮೊದಲ ಟಿವಿ ಕಾರ್ಯಕ್ರಮ. ಹೀಗಾಗಿ, 'ಬಿಗ್ ಬಾಸ್' ಮೇಲೆ ನಿರೀಕ್ಷೆಗಳು ಹೆಚ್ಚಿವೆ.

ಚಿರು ಬದಲು ಯಂಗ್ ಟೈಟರ್

ಈ ಮೊದಲು ತೆಲುಗು ಭಾಷೆಯ 'ಬಿಗ್ ಬಾಸ್' ಕಾರ್ಯಕ್ರಮ ನಿರೂಪಣೆ ಮಾಡಲು ಮೆಗಾಸ್ಟಾರ್ ಚಿರಂಜೀವಿ ಅವರನ್ನ ಸಂಪರ್ಕಿಸಲಾಗಿತ್ತಂತೆ. ಆದ್ರೀಗ, ಚಿರು 'ಕನ್ನಡದ ಕೋಟ್ಯಾಧಿಪತಿ'ಯ ತೆಲುಗು ವರ್ಷನ್ ನಿರೂಪಣೆ ಮಾಡುತ್ತಿದ್ದಾರೆ. ಹೀಗಾಗಿ, ಚಿರು ಬದಲು ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಗೆ ಈ ಚಾನ್ಸ್ ಸಿಕ್ಕಿದೆ.

ಅತಿ ಹೆಚ್ಚು ಮೊತ್ತ ಪಡೆದ ಎನ್.ಟಿ.ಆರ್

ಎನ್.ಟಿ.ಆರ್ ಅವರು 'ಬಿಗ್ ಬಾಸ್' ನಿರೂಪಣೆ ಮಾಡಲು ಖಾಸಗಿ ವಾಹಿನಿ ದೊಡ್ಡ ಮೊತ್ತವನ್ನ ನೀಡಿದೆಯಂತೆ. ಈ ಮೂಲಕ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಜೂನಿಯರ್ ಎನ್.ಟಿ.ಆರ್ ಎನ್ನಲಾಗುತ್ತಿದೆ.

ತಮಿಳಿನಲ್ಲಿ ಕಮಲ್ ಹಾಸನ್

ಇನ್ನು 'ಬಿಗ್ ಬಾಸ್' ತಮಿಳು ಭಾಷೆಯಲ್ಲಿ ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ನಿರೂಪಣೆ ಮಾಡಲಿದ್ದಾರೆ. ಈಗಾಗಲೆ ಕಮಲ್ ಹಾಸನ್ 'ಬಿಗ್ ಬಾಸ್' ಹೋಸ್ಟ್ ಮಾಡಲಿದ್ದು, ಈಗಾಗಲೇ ಪ್ರೋಮೋ ಪ್ರಸಾರವಾಗುತ್ತಿದೆ.

'ಬಿಗ್ ಬಾಸ್ ರಿಯಾಲಿಟಿ ಶೋ'ಗೆ ಕಮಲ್ ಹಾಸನ್ ನಿರೂಪಕ!

ಯಾವಾಗ 'ಬಿಗ್ ಬಾಸ್' ಶುರು

ತಮಿಳಿನಲ್ಲಿ ಜೂನ್ 25 ರಿಂದ 'ಬಿಗ್ ಬಾಸ್' ಆರಂಭವಾಗುತ್ತಿದ್ದು, ತೆಲುಗು 'ಬಿಗ್ ಬಾಸ್' ಕೂಡ ಬಹುತೇಕ ಜೂನ್ ಅಂತ್ಯಕ್ಕೆ ಪ್ರಸಾರವಾಗುವ ಸಾಧ್ಯತೆಯಿದೆ. ಇನ್ನು ತೆಲುಗು 'ಬಿಗ್ ಬಾಸ್' ಈ ಕಾರ್ಯಕ್ರಮ 'ಸ್ಟಾರ್ ಮಾ' ವಾಹಿನಿಯಲ್ಲಿ ಮೂಡಿ ಬರ್ತಿದ್ರೆ, ತಮಿಳು 'ಬಿಗ್ ಬಾಸ್' ಸ್ಟಾರ್ ವಿಜಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Junior NTR will host the Telugu version of popular reality show, Bigg Boss. It will the actor’s first foray into television

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada