For Quick Alerts
  ALLOW NOTIFICATIONS  
  For Daily Alerts

  ಸತೀಶ್ ನೀನಾಸಂ ಜೊತೆಯಾದ ಜ್ಯೂನಿಯರ್ ರಾಕಿ ಭಾಯ್

  |

  'ಕೆಜಿಎಫ್' ಕನ್ನಡದ ಸೂಪರ್ ಹಿಟ್ ಸಿನಿಮಾ. ಕೇವಲ ಸಿನಿಮಾ ಮಾತ್ರ ಹಿಟ್ ಆಗಿದ್ದಲ್ಲ. ಇಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗು ಈ ಸಿನಿಮಾ ಖ್ಯಾತಿ ತಂದುಕೊಟ್ಟಿದೆ. ಕಲಾವಿದರು, ತಂತ್ರಜ್ಞರು ಸೇರಿದಂತೆ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಲೈಫ್ ಕೊಟ್ಟ ಸಿನಿಮಾ. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಚಿಕ್ಕವನಾಗಿದ್ದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜ್ಯೂನಿಯರ್ ರಾಕಿ ಭಾಯ್ ಈಗ ಏನ್ಮಾಡುತ್ತಿದ್ದಾರೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿದೆ.

  ಜ್ಯೂನಿಯರ್ ರಾಕಿ ಭಾಯ್ ಅಂತಾನೆ ಖ್ಯಾತಿಗಳಿಸಿರುವ ಮಾಸ್ಟರ್ ಅನ್ಮೋಲ್ ಈಗ ನಟ ನಿನಾಸಂ ಸತೀಶ್ ಜೊತೆ ಸೇರಿಕೊಂಡು 'ಬ್ರಹ್ಮಚಾರಿ' ಆಗಿದ್ದಾರೆ. ಹೌದು, ಕ್ವಾಟ್ಲೆ ಸತೀಶ್ ಅಭಿನಯದ 'ಬ್ರಹ್ಮಚಾರಿ' ಚಿತ್ರದಲ್ಲಿ ಅನ್ಮೋಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಚಿತ್ರತಂಡ ಅನ್ಮೋಲ್ ಜೊತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

  ಸತೀಶ್ ನೀನಾಸಂ ಕೈ ಸೇರಿದ ಡಾ.ರಾಜ್ ಮೊಮ್ಮಗನ ಮದುವೆ ಪತ್ರಿಕೆ ಸತೀಶ್ ನೀನಾಸಂ ಕೈ ಸೇರಿದ ಡಾ.ರಾಜ್ ಮೊಮ್ಮಗನ ಮದುವೆ ಪತ್ರಿಕೆ

  'ಕೆಜಿಎಫ್' ಚಿತ್ರದಲ್ಲಿ ಅನ್ಮೋಲ್ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಕಿಚ್ಚ ವಯಸ್ಸಿನಲ್ಲೆ ಮಾಸ್ ಲುಕ್ ನಲ್ಲಿ ಮಿಂಚಿದ್ದ ಅನ್ಮೋಲ್ ಗೆ ಚಿತ್ರಪ್ರಿಯರು ಫಿದಾ ಆಗಿದ್ರು. ಈಗ ಸತೀಶ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಚಿತ್ರೀಕರಣ ಸೆಟ್ ನಲ್ಲಿ ಅನ್ಮೋಲ್ ಜೊತೆ ಫೋಟೋ ಕ್ಲಿಕ್ಕಿಸಿ ಸತೀಶ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  'ಬ್ರಹ್ಮಚಾರಿ' ರೋಮ್ಯಾಂಟಿಕ್ ಕಾಮಿಡಿ ಸಿನಿಮಾ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸತೀಶ್ 'ಬ್ರಹ್ಮಚಾರಿ' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಸತೀಶ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರೀಕರಣದಲ್ಲಿ ಬ್ಯುಸಿ ಇದೆ 'ಬ್ರಹ್ಮಚಾರಿ' ಚಿತ್ರತಂಡ.

  English summary
  Kannada movie KGF's junior rocky bhai Anmol is now acting in the movie 'Brahmachari'. Sathish Ninasam starrer 'Bramhachari' movie.
  Wednesday, May 8, 2019, 17:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X