»   » ಬಣ್ಣದ ಲೋಕಕ್ಕೆ ಜ್ವಾಲಾ ಗುತ್ತಾ ತಂಗಿ ಇನ್ಸಿ ಗುತ್ತಾ

ಬಣ್ಣದ ಲೋಕಕ್ಕೆ ಜ್ವಾಲಾ ಗುತ್ತಾ ತಂಗಿ ಇನ್ಸಿ ಗುತ್ತಾ

By: ಅನಂತರಾಮು, ಹೈದರಾಬಾದ್
Subscribe to Filmibeat Kannada
Jwala Gutta sister Insi Gutta
ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುತ್ತಾ ಬೆಳ್ಳಿತೆರೆಗೆ ಅಡಿಯಿಡುತ್ತಿರುವುದು ಗೊತ್ತೇ ಇದೆ. ತೆಲುಗಿನ 'ಗುಂಡೆ ಜಾರಿ ಗಲ್ಲಂತಯ್ಯಿಂದಿ' ಚಿತ್ರದಲ್ಲಿ ಜ್ವಾಲಾ ಐಟಂ ಸಾಂಗ್ ಮಾಡುತ್ತಿದ್ದಾರೆ. ಇದೀಗ ಆಕೆಯ ತಂಗಿಯೂ ಅಕ್ಕನ ಹಿಂದೆಯೇ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲು ಅಣಿಯಾಗಿದ್ದಾರೆ. ಈಕೆಯ ಹೆಸರು ಇನ್ಸಿ ಗುತ್ತಾ.

ವಿಶೇಷ ಎಂದರೆ ಬೆಳ್ಳಿತೆರೆಗೆ ಮೊದಲು ಅಡಿಯಿಟ್ಟಿದ್ದು ಜ್ವಾಲಾ ಆದರೂ ತಂಗಿಯ ಚಿತ್ರ ಮೊದಲು ಬಿಡುಗಡೆಯಾಗುತ್ತಿದೆ. ಈಕೆ ಅಭಿನಯಿಸುತ್ತಿರುವ ಚಿತ್ರದ ಹೆಸರು 'ಬ್ಯಾಕ್ ಬೆಂಚ್ ಸ್ಟುಡೆಂಟ್'. ಈ ಚಿತ್ರ ಇದೇ ವಾರ ತೆರೆಗೆ ಅಪ್ಪಳಿಸುತ್ತಿದೆ. ಮಾಸ್ ಕಮ್ಯುನಿಕೇಷನ್ ನಲ್ಲಿ ಪದವಿ ಪಡೆದಿರುವ ಇನ್ಸಿಗೆ ಸಿನಿಮಾಗಳೆಂದರೆ ಮೊದಲಿಂದಲೂ ತುಂಬಾ ಖಯಾಲಿ ಇತ್ತಂತೆ.

ಅಕ್ಕ ಬೆಳ್ಳಿತೆರೆಗೆ ಬರಲು ತಂಗಿ ಇನ್ಸಿಯೇ ಕಾರಣ ಎನ್ನುತ್ತವೆ ಮೂಲಗಳು. ಆದರೆ ಇನ್ಸಿ ನಟಿಯಾಗಬೇಕು ಎಂದು ಚಿತ್ರರಂಗಕ್ಕೆ ಬರಲಿಲ್ಲವಂತೆ. ಸಹಾಯಕ ನಿರ್ದೇಶಕಿಯಾಗಲು ಬಂದವರಂತೆ. ಆದರೆ ಚಿತ್ರದ ನಿರ್ದೇಶಕರು ಈಕೆಗೆ ಒಂದು ಪಾತ್ರ ಕೊಟ್ಟಿದ್ದಾರೆ. ಅದಕ್ಕೆ ಹೇಳಿ ಮಾಡಿಸಿದ ಮುಖ ಎಂಬ ಕಾರಣಕ್ಕೆ.

'ಬ್ಯಾಕ್ ಬೆಂಚ್ ಸ್ಟುಡೆಂಟ್' ಚಿತ್ರ ಇದೇ ಮಾರ್ಚ್ 15ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ತಾಪಸಿ ಪನ್ನು ಮಾಜಿ ಪ್ರಿಯಕರ ಮಹತ್ ರಾಘವೇಂದ್ರ ಪರಿಚಯವಾಗುತ್ತಿದ್ದಾರೆ. ಪಿಯಾ ಬಾಜ್ ಪೇಯಿ, ಅರ್ಚನಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. (ಏಜೆನ್ಸೀಸ್)

English summary
Jwala Gutta sister Insi Gutta is ready to make her Tollywood debut. She will be seen in a role in Madhura Sridhar's upcoming film Back Bench Student. Mahath Raghavendra and Pia Bajpayee in the lead roles in this film. Insi plays Mahath Raghavendra's friend in the film.
Please Wait while comments are loading...