For Quick Alerts
  ALLOW NOTIFICATIONS  
  For Daily Alerts

  ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದ ಗಂಗಾ ಕುಲಕರ್ಣಿ ನ್ಯಾಯಾಲಯದಲ್ಲೇ ಆತ್ಮಹತ್ಯೆ

  By ಫಿಲ್ಮ್ ಡೆಸ್ಕ್
  |

  ಚಿತ್ರ ಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದ ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ಕೋರ್ಟ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು(ಅಕ್ಟೋಬರ್ 29) ವಿಷ ಸೇವಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

  K Kalyan ಜೀವನದಲ್ಲಿ ಕಲಹ ಎಬ್ಬಿಸಿದ್ದ Ganga Kulkarni ಆತ್ಮಹತ್ಯೆ | Kannada

  ಗಂಗಾ ಕುಲಕರ್ಣಿ, ಕೆ.ಕಲ್ಯಾಣ್ ದಾಂಪತ್ಯ ಕಲಹಕ್ಕೆ ಕಾರಣರಾಗಿ, ವಿಚ್ಛೇದನದ ಹಂತ ತಲುಪಿತ್ತು. ಈ ಕುರಿತು ಕೆ.ಕಲ್ಯಾಣ್ ದೂರು ದಾಖಲಿಸಿದ್ದರು. ತನ್ನ ಪತ್ನಿಯೊಂದಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ಹೇಳಿಕೊಂಡಿದ್ದರು. ವಿಚಾರಣೆ ಬಳಿಕ ಇದರ ಹಿಂದೆ ಶಿವಾನಂದ ವಾಲಿ ಎಂಬ ವ್ಯಕ್ತಿ ಹಾಗೂ ಮನೆ ಕೆಲಸ ಮಾಡಿಕೊಂಡಿದ್ದ ಗಂಗಾ ಕುಲಕರ್ಣಿ ಕೈವಾಡವಿದೆ ಎಂದು ತಿಳಿದುಬಂದಿತ್ತು.

  ಪ್ರೇಮಕವಿ ಕೆ.ಕಲ್ಯಾಣ್ ಬಾಳಲ್ಲಿ ಮತ್ತೆ ಸಂತಸ: ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿಪ್ರೇಮಕವಿ ಕೆ.ಕಲ್ಯಾಣ್ ಬಾಳಲ್ಲಿ ಮತ್ತೆ ಸಂತಸ: ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿ

  ಶಿವಾನಂದ ವಾಲಿ ಜೊತೆ ಸೇರಿ ಗಂಗಾ, ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಅವರ ತವರು ಮನೆಯ ಆಸ್ತಿ ಲಪಟಾಯಿಸಲು ಹೊಂಚು ಹಾಕಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು. ಅಲ್ಲದೇ ಯುವಕನೊಬ್ಬನಿಗೆ ಕೆಲಸ ಕೊಡಿಸುವುದಾಗಿ ಮೂರು ಲಕ್ಷ ರೂಪಾಯಿ ದೋಚಿದ್ದರು. ಈ ಸಂಬಂಧ 2016ರಲ್ಲಿ ಕುಷ್ಟಗಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

  ಕೆ.ಕಲ್ಯಾಣ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಶಿವಾನಂದ ವಾಲಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಗಂಗಾ ತಲೆಮರೆಸಿಕೊಂಡಿದ್ದರು. ಆದರೆ ಇಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಷ್ಟಗಿ ನ್ಯಾಯಾಲಯಕ್ಕೆ ಗಂಗಾ ಕುಲಕರ್ಣಿ ಹಾಜರಾಗಿದ್ದರು. ಈ ವೇಳೆ ಕೋರ್ಟ್ ಆವರಣದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  English summary
  Famous Lyricist K Kalyan Family Dispute Case accused Ganga Kulkari commits suicide at Kushtagi court,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X