For Quick Alerts
  ALLOW NOTIFICATIONS  
  For Daily Alerts

  ಪ್ರೇಮಕವಿ ಕೆ.ಕಲ್ಯಾಣ್ ಬಾಳಲ್ಲಿ ಮತ್ತೆ ಸಂತಸ: ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿ

  By ಫಿಲ್ಮ್ ಡೆಸ್ಕ್
  |

  ಚಿತ್ರ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯ ಕಲಹ ಸುಖಾಂತ್ಯ ಕಂಡಿದೆ. ಕಲ್ಯಾಣ್ ಪತ್ನಿ ಅಶ್ವಿನಿ ಬೆಳಗಾವಿ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.

  ಅಕ್ಟೋಬರ್ 17 ರಂದು ಕಲ್ಯಾಣ್ ದಂಪತಿ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಪತ್ನಿ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಈ ಮೂಲಕ ಸಾಹಿತಿ ಕಲ್ಯಾಣ್ ಕುಟುಂಬದಲ್ಲಿ ಎದ್ದಿದ್ದ ಬಿರುಗಾಳಿ ತಣ್ಣಗಾಗಿದೆ.

  ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತೇನೆ: ಕೆ. ಕಲ್ಯಾಣ್ ಪತ್ನಿ ಅಶ್ವಿನಿವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತೇನೆ: ಕೆ. ಕಲ್ಯಾಣ್ ಪತ್ನಿ ಅಶ್ವಿನಿ

  ವಿಚ್ಛೇದನ ಅರ್ಜಿ ವಾಪಸ್ ಪಡೆದು ಮತ್ತೆ ಕಲ್ಯಾಣ್ ಜೊತೆ ಜೀವನ ನಡೆಸುವುದಾಗಿ ಅಶ್ವಿನಿ ಹೇಳಿದ್ದರು. ಮಾತಿನಂತೆ ಅರ್ಜಿ ವಾಪಸ್ ಪಡೆದು ಮತ್ತೆ ಪತಿಯ ಜೊತೆ ಸಂತೋಷದ ಜೀವನ ಪ್ರಾರಂಭಿಸಿದ್ದಾರೆ. ಅಕ್ಟೋಬರ್ 3ರಂದು ಕೆ ಕಲ್ಯಾಣ್ ಪತ್ನಿ ತಮ್ಮ ಪತಿಯ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಂತರ ವಿಚ್ಛೇದನ ನೀಡುವ ಸಲುವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

  ಮನೆಯ ಕೆಲಸದಾಕೆ ಗಂಗಾ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಪೊಲೀಸ್ ಆ ಬಗ್ಗೆ ತನಿಖೆ ಕೈಗೊಂಡಾಗ ಸತ್ಯ ಬಯಲಿಗೆ ಬಂದಿದೆ. ಮನೆಕೆಲಸದಾಕೆ ಗಂಗಾ ಮತ್ತು ಶಿವಾನಂದ ವಾಲಿ ಎಂಬ ಮಂತ್ರವಾದಿ ಕಲ್ಯಾಣ್ ಪತ್ನಿ ಅಶ್ವಿಯವರನ್ನು ವಂಚಿಸಿ, ವಶೀಕರಣ ಮಾಡಿದ್ದರು. ಅಲ್ಲದೆ ಆ ಮಂತ್ರವಾದಿ ಅಶ್ವಿನಿ ತಂದೆ-ತಾಯಿಗೆ ಸೇರಿದ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದರಂತೆ.

  ಅನಿರುದ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು | Oneindia Kannada

  ಈ ಪ್ಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ವಾಲಿಯನ್ನು ಬಂಧಿಸಲಾಗಿತ್ತು. ಇಂದು (ಅ.22) ಶಿವಾನಂದ ವಾಲಿ ಜಾಮೀನು ಪಡೆದು ಹೊರಬಂದಿದ್ದಾರೆ. 50 ಸಾವಿರ ರೂಪಾಯಿ ಶ್ಯುರಿಟಿಯ ಮೇಲೆ ಷರತ್ತು ಬದ್ಧ ಜಾಮೀನು ನೀಡಿದೆ. ಇನ್ನೂ ಮತ್ತೋರ್ವ ಆರೋಪಿ ಮನೆ ಕೆಲಸದಾಕೆ ಗಂಗಾ ತಲೆಮರೆಸಿಕೊಂಡಿದ್ದಾರೆ.

  English summary
  lyricist k.kalyan's wife ashwini withdraw divorce application.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X