For Quick Alerts
  ALLOW NOTIFICATIONS  
  For Daily Alerts

  'ಆ ದಿನಗಳು' ಚಿತ್ರದ ಮೋಡಿ 'ಆಕೆ'ಯಲ್ಲಿ ಮರುಸೃಷ್ಟಿ: ಕೆ.ಎಂ.ಚೈತನ್ಯ

  By Suneel
  |

  ಉತ್ತಮ ಚಿತ್ರ, ಉತ್ತಮ ಪೋಷಕ ನಟ ಪ್ರಶಸ್ತಿಗಳ ಜೊತೆಗೆ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು 'ಆ ದಿನಗಳು' ಚಿತ್ರ, ನಿರ್ದೇಶಕ ಕೆ.ಎಂ.ಚೈತನ್ಯ ಅವರಿಗೆ ತಂದುಕೊಟ್ಟಿತ್ತು. ರೋಮಾಂಚಕಾರಿ ಥ್ರಿಲ್ಲರ್ ಚಿತ್ರ 'ಆಟಗಾರ'ಕ್ಕೆ ಚಿತ್ರಮಂದಿರದಲ್ಲಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡು, ವಿಮರ್ಶಕರಿಂದಲೂ ನಿರೂಪಣೆ ಮತ್ತು ವಿಭಿನ್ನ ಶೈಲಿಯ ಚಿತ್ರವೆಂಬ ಹೊಗಳಿಕೆ ಪಡೆದ ಕೆ.ಎಂ.ಚೈತನ್ಯ ಈಗ 'ಆಕೆ'ಯೊಂದಿಗೆ ಮರಳಿದ್ದಾರೆ.[ಕನ್ನಡದ 'ಆಕೆ'ಗೂ ತಮಿಳಿನ 'ಮಾಯ'ಗೂ ಸಂಬಂಧ! ಸಾಕ್ಷಿ ಇಲ್ಲಿದೆ]

  'ಆಟಗಾರ' ನಂತರ ಕೆ.ಎಂ.ಚೈತನ್ಯ ಆಕ್ಷನ್ ಕಟ್ ಹೇಳಿರುವ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಆಕೆ'. ತಾರಾಬಳಗ, ಮೇಕಿಂಗ್, ಚಿತ್ರಕ್ಕೆ ದುಡಿದಿರುವ ತಂತ್ರಜ್ಞರು ಸೇರಿದಂತೆ ಹಲವು ದೃಷ್ಟಿಯಿಂದ 'ಆಕೆ' ಚಿತ್ರ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ.

  'ಆಕೆ'ಯಲ್ಲಿ 'ಆಟಗಾರ' ಚಿತ್ರದ ನಾಯಕ

  'ಆಕೆ'ಯಲ್ಲಿ 'ಆಟಗಾರ' ಚಿತ್ರದ ನಾಯಕ

  ಕೆ.ಎಂ.ಚೈತನ್ಯ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ಆಟಗಾರ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕ ನಾಗಿ ಅಭಿನಯಿಸಿ ತಮ್ಮ ಹಿಂದಿನ ಚಿತ್ರಗಳಿಗಿಂತ ಹೆಚ್ಚಾಗಿ ಎಲ್ಲರ ಗಮನ ಸೆಳೆದಿದ್ದರು. ಈಗ ಕೆ.ಎಂ.ಚೈತನ್ಯ ಅವರ 'ಆಕೆ' ಚಿತ್ರದಲ್ಲೂ ಚಿರಂಜೀವಿ ಸರ್ಜಾ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದು, ಶರ್ಮಿಳಾ ಮಾಂಡ್ರೆ ಜೊತೆಯಾಗಿದ್ದಾರೆ.

  ತೆಲುಗು ಚಿತ್ರದ ರಿಮೇಕ್ 'ಆಕೆ'

  ತೆಲುಗು ಚಿತ್ರದ ರಿಮೇಕ್ 'ಆಕೆ'

  ತೆಲುಗು ಭಾಷೆಯಲ್ಲಿ ಭಾರಿ ಯಶಸ್ಸು ಕಂಡ 'ಮಾಯ' ಚಿತ್ರಕಥೆಯನ್ನು ಅಳವಡಿಸಿಕೊಂಡು ಕೆ.ಎಂ.ಚೈತನ್ಯ ಕನ್ನಡಲ್ಲಿ 'ಆಕೆ'ಯಾಗಿ ಚಿತ್ರ ರೂಪಿಸಿದ್ದಾರೆ.

  ಬಹುಪಾಲು 'ಆಕೆ' ಚಿತ್ರೀಕರಣ ಬ್ರಿಟನ್ ನಲ್ಲಿ

  ಬಹುಪಾಲು 'ಆಕೆ' ಚಿತ್ರೀಕರಣ ಬ್ರಿಟನ್ ನಲ್ಲಿ

  ಚಿತ್ರದ ಫಸ್ಟ್ ಲುಕ್ ಮತ್ತು ಟ್ರೈಲರ್ ನಿಂದ ಕನ್ನಡ ಸಿನಿಮಾ ರಸಿಕರಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿರುವ 'ಆಕೆ' ಚಿತ್ರವನ್ನು ಬಹುಪಾಲು ಬ್ರಿಟನ್ ನಲ್ಲಿ ಚಿತ್ರೀಕರಿಸಲಾಗಿದೆ.

  ಗುರು ಕಿರಣ್ ಸಂಗೀತ

  ಗುರು ಕಿರಣ್ ಸಂಗೀತ

  ಎರೋಸ್ ಇಂಟರ್ ನ್ಯಾಷನಲ್ ಇದೇ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಕನ್ನಡ ಚಿತ್ರ 'ಆಕೆ'. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅಲ್ಲದೇ 'ಆಕೆ' ಚಿತ್ರ ಕೆ.ಎಂ.ಚೈತನ್ಯ ಅವರೊಂದಿಗಿನ ಗುರುಕಿರಣ್ ಸಂಗೀತ ನಿರ್ದೇಶನದ ಮೊದಲ ಚಿತ್ರವಾಗಿದೆ.

  'ಆಕೆ'ಯಲ್ಲಿ 'ಆ ದಿನಗಳ' ಮೋಡಿ

  'ಆಕೆ'ಯಲ್ಲಿ 'ಆ ದಿನಗಳ' ಮೋಡಿ

  ಬ್ರಿಟಿಷ್ ತಾಂತ್ರಿಕ ಸಿಬ್ಬಂದಿಯೊಂದಿಗೆ ಕೆ.ಎಂ.ಚೈತನ್ಯ ಆಕ್ಷನ್ ಕಟ್ ಹೇಳಿರುವ 'ಆಕೆ' ಚಿತ್ರೀಕರಣ ಬಹುಪಾಲು ಪೂರ್ಣಗೊಂಡಿದ್ದು, ಕೆ.ಎಂ.ಚೈತನ್ಯ 'ಆ ದಿನಗಳು' ಚಿತ್ರದ ಮೋಡಿಯನ್ನು 'ಆಕೆ' ಚಿತ್ರದಲ್ಲೂ ಮಾಡುವ ಭರವಸೆ ಮೂಡಿಸಿದ್ದಾರೆ. ಚಿತ್ರ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಿದ್ದು, ಮೈಸೂರು ಟಾಕೀಸ್ ಜೊತೆಗೂಡಿ ವಿಶ್ವದಾದ್ಯಂತ 'ಆಕೆ'ಯನ್ನು ರಿಲೀಸ್ ಮಾಡಲಾಗುತ್ತದೆಯಂತೆ.

  English summary
  K.M.Chaitanya to recreate 'Aa Dinagalu' Magic in upcoming 'Aake' Movie. 'Aake' is Kannada Actor Chiru Sarja and Kannada Actress Sharmila Mandre Starrer movie directed by K.M.Chaitanya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X