»   »  ನಿಶ್ಚಿತಾರ್ಥದ ಬಳಿಕ ಚಿರಂಜೀವಿ ಸರ್ಜಾ ಮುಂದಿನ ಸಿನಿಮಾ ಶುರು

ನಿಶ್ಚಿತಾರ್ಥದ ಬಳಿಕ ಚಿರಂಜೀವಿ ಸರ್ಜಾ ಮುಂದಿನ ಸಿನಿಮಾ ಶುರು

Posted By:
Subscribe to Filmibeat Kannada

ನಟ ಚಿರಂಜೀವಿ ಸರ್ಜಾ ಇತ್ತೀಚಿಗಷ್ಟೆ ನಟಿ ಮೇಘನಾ ರಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಖುಷಿಯೊಂದಿಗೆ ಚಿರು ಅವರ ಹೊಸ ಸಿನಿಮಾ ಕೂಡ ಶುರುವಾಗಿದೆ.

ನಿಶ್ಚಿತಾರ್ಥದ ನಂತರ ಮೇಘನಾ ರಾಜ್ ಹೊಸ ಸಿನಿಮಾ ಶುರು

ಚಿರಂಜೀವಿ ಸರ್ಜಾ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿರು ಮುಂದಿನ ಚಿತ್ರವನ್ನು 'ಆ ದಿನಗಳು' ಖ್ಯಾತಿಯ ನಿರ್ದೇಶಕ ಕೆ.ಎಂ.ಚೈತನ್ಯ ನಿರ್ದೇಶನ ಮಾಡಲಿದ್ದಾರೆ. ವಿಶೇಷ ಅಂದರೆ ಇದು ಚಿರು ಮತ್ತು ಕೆ.ಎಂ.ಚೈತನ್ಯ ಕಾಂಬಿನೇಶನ್ ನಲ್ಲಿ ಬರುತ್ತಿರುವ ಹ್ಯಾಟ್ರಿಕ್ ಚಿತ್ರವಾಗಿದೆ. ಈ ಹಿಂದೆ ಚೈತನ್ಯ ನಿರ್ದೇಶನ ಮಾಡಿದ್ದ 'ಆಕೆ' ಮತ್ತು 'ಆಟಗಾರ' ಸಿನಿಮಾದಲ್ಲಿ ಚಿರು ನಾಯಕನಾಗಿದ್ದರು.

ಫೋಟೋ ಆಲ್ಬಂ: ಲೀಲಾ ಪ್ಯಾಲೇಸ್ ನಲ್ಲಿ ಚಿರು-ಮೇಘನಾ 'ರಾಯಲ್' ನಿಶ್ಚಿತಾರ್ಥ

K.M.Chaitanya will be directing a movie to Chiranjeevi Sarja again.

ಈ ಸಿನಿಮಾದ ಮತ್ತೊಂದು ಹೈಲೆಟ್ ಎಂದರೆ ಇದು ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 51ನೇ ಸಿನಿಮಾವಾಗಿದೆ. 'ಚೌಕ' ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಹೊಸ ಚಿತ್ರಕ್ಕೆ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಕೈ ಹಾಕಿದ್ದಾರೆ. ಅಲ್ಲದೆ ಚಿರಂಜೀವಿ ಸರ್ಜಾ ಅವರ 'ಆಟಗಾರ' ಚಿತ್ರ ಕೂಡ ದ್ವಾರಕೀಶ್ ಬ್ಯಾನರ್ ನಲ್ಲಿಯೇ ನಿರ್ಮಾಣವಾಗಿತ್ತು.

English summary
Director K.M.Chaitanya will be directing a movie to Chiranjeevi Sarja again.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X