»   » ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟ 'ಕಾಫಿತೋಟ' ಸಿನಿಮಾ

ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟ 'ಕಾಫಿತೋಟ' ಸಿನಿಮಾ

Posted By:
Subscribe to Filmibeat Kannada
Kaafi Thota : Director TN Seetharam Talks About His Movie | Filmibeat Kannada

ಟಿ.ಎನ್.ಸೀತಾರಾಮ್ ನಿರ್ದೇಶನದ 'ಕಾಫಿತೋಟ' ಚಿತ್ರ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. 'ಕಾಫಿತೋಟ' ಒಂದು ಮರ್ಡರ್ ಮಿಸ್ಟರಿ ಸಿನಿಮಾವಾಗಿದ್ದು, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಸಿಗುತ್ತಿದೆ.

'ಕಾಫಿತೋಟ' ಚಿತ್ರದ ಖ್ಯಾತ ಪತ್ರಿಕೆಗಳ ವಿಮರ್ಶೆ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಲಭ್ಯ

ಆಗಸ್ಟ್ 18ಕ್ಕೆ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ. ಬೆಂಗಳೂರಿನ 'ಅನುಪಮ' ಚಿತ್ರಮಂದಿರ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಈ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

'Kaafi Thota' movie running successfully

ಚಿತ್ರದಲ್ಲಿ ಮೈಥಿಲಿ ಪಾತ್ರವನ್ನು ಮಾಡಿರುವ ನಟಿ ರಾಧಿಕ ಚೇತನ್, ನಿರಂಜನ್ ಪಾತ್ರವನ್ನು ಮಾಡಿರುವ ರಘು ಮುಖರ್ಜಿ ಮತ್ತು ಚಾರ್ಲಿ ಪಾತ್ರಧಾರಿ ರಾಹುಲ್ ಮೂರು ಜನರ ನಟನೆ ಗಮನ ಸೆಳೆಯುತ್ತದೆ.

ವಿಮರ್ಶೆ: ಕುತೂಹಲಭರಿತ 'ಕಾಫಿತೋಟ'ದಲ್ಲಿ ಥ್ರಿಲ್ಲಿಂಗ್ ಜರ್ನಿ

ಅಂದಹಾಗೆ, ಕಾಫಿತೋಟ' ನಿರ್ದೇಶಕ ಸೀತಾರಾಮ್ ಅವರ ಸ್ಟೈಲ್ ಆಫ್ ಸಿನಿಮಾ. ಅವರ ಧಾರಾವಾಹಿಗಳನ್ನು ನೋಡಿ ಇಷ್ಟಪಟ್ಟ ಜನರಿಗೆ ಈ ಸಿನಿಮಾ ಕೂಡ ಇಷ್ಟ ಆಗುತ್ತದೆ. 'ಕಾಫಿತೋಟ' ಮರ್ಡರ್ ಮಿಸ್ಟರಿ ಕಥೆ ಆಧರಿಸಿದ್ದರೂ ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಚಿತ್ರ. ಹಾಗಾಗಿ ಕುಟುಂಬ ಸಮೇತ ಸಿನಿಮಾ ನೋಡಬಹುದು.

English summary
T.N.Seetharam's 'Kaafi Thota' movie running successfully

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada