For Quick Alerts
  ALLOW NOTIFICATIONS  
  For Daily Alerts

  'ಕೆಂಡಸಂಪಿಗೆ' ಆಯ್ತು, ಮುಂದೆ 'ಕಾಗೆ ಬಂಗಾರ'.!

  By Harshitha
  |

  ದುನಿಯಾ ಸೂರಿ ನಿರ್ದೇಶನದ 'ಕೆಂಡಸಂಪಿಗೆ' ಇಂದು ರಿಲೀಸ್ ಆಗಿದೆ. ಚಿತ್ರಕ್ಕೆ ಭರ್ಜರಿ ಓಪನ್ನಿಂಗ್ ಸಿಕ್ಕಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಂಡಿದೆ.

  ಒಂದು ಲವ್ ಸ್ಟೋರಿ, ಕ್ರೈಂ ಭಾಷೆಯಲ್ಲಿ ಹೇಳುವುದಾದರೆ ಗಿಣಿ ಮರಿ ಕೇಸ್, ಡ್ರಗ್ ಮಾಫಿಯಾ, ಮರ್ಡರ್ ಕೇಸ್ ಸುತ್ತ ನಡೆಯುವ 7 ದಿನಗಳ ಕಥೆ ಈ 'ಕೆಂಡಸಂಪಿಗೆ'. ಇದೇ ಚಿತ್ರದಲ್ಲಿ ದುನಿಯಾ ಸೂರಿ, 'ಕಾಗೆ ಬಂಗಾರ' ಸಿನಿಮಾದ ಬಗ್ಗೆ ಕೂಡ ಕ್ಲೂ ಕೊಟ್ಟಿದ್ದಾರೆ.

  'ಕೆಂಡಸಂಪಿಗೆ' ಕಥೆಯೊಳಗೆ ಪೊಲೀಸರು ಶಾಮೀಲಾಗಿರುವ 40 ಕೋಟಿ ರೂಪಾಯಿ ಡ್ರಗ್ ಮಾಫಿಯಾ ಹಗರಣದ ಸಣ್ಣ ಎಳೆ ಇದೆ. 'ಕೆಂಡಸಂಪಿಗೆ' ಕ್ಲೈಮ್ಯಾಕ್ಸ್ ಜೊತೆಗೆ 'ಕಾಗೆ ಬಂಗಾರ' ಚಿತ್ರದ ಆರಂಭವನ್ನ ದುನಿಯಾ ಸೂರಿ ತೋರಿಸುವ ಮೂಲಕ ತಮ್ಮ ಮುಂದಿನ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

  ಅಲ್ಲಿಗೆ, ಇನ್ನು ಕೆಲವೇ ದಿನಗಳಲ್ಲಿ 'ಕೆಂಡಸಂಪಿಗೆ' ಮುಂದುವರಿದ ಭಾಗ ಅಂದ್ರೆ, 'ಕಾಗೆ ಬಂಗಾರ' ಚಿತ್ರದ ಶೂಟಿಂಗ್ ಶುರುವಾಗಲಿದೆ. ಸದ್ಯಕ್ಕೆ 'ದೊಡ್ಮನೆ ಹುಡುಗ' ಶೂಟಿಂಗ್ ನಲ್ಲಿ ಬಿಜಿಯಿರುವ ದುನಿಯಾ ಸೂರಿ, ಅದು ಕಂಪ್ಲೀಟ್ ಆದ ಬಳಿಕ 'ಕಾಗೆ ಬಂಗಾರ' ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

  English summary
  Duniya Soori Directorial Kannada Movie 'Kendasampige' has hit the screens today (September 11th). In the climax, Duniya Soori has revealed his directorial next 'Kaage Bangara'. This will be the continuation of 'Kendasampige'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X