twitter
    For Quick Alerts
    ALLOW NOTIFICATIONS  
    For Daily Alerts

    ವಿರೋಧದ ಮಧ್ಯೆಯೂ ಕಾಲಾ ಚಿತ್ರ ಪ್ರದರ್ಶನ ಶುರು

    By Pavithra
    |

    ರಜನಿಕಾಂತ್ ಕಾವೇರಿ ನೀರಿನ ವಿಚಾರವಾಗಿ ನೀಡಿರುವ ಹೇಳಿಕೆಯನ್ನು ಖಂಡಿಸಿ ರಾಜ್ಯದಲ್ಲಿ ಎಲ್ಲಿಯೂ ರಜನಿಕಾಂತ್ ಸಿನಿಮಾ ಬಿಡುಗಡೆ ಆಗಬಾರದೆಂದು ಕನ್ನಡ ಪರ ಸಂಘಟನಾಕಾರರು ನಿನ್ನೆ ಪೂರ್ತಿ ಹೋರಾಟ ಮಾಡಿದ್ದರು. ಪೊಲೀಸರ ಬಿಗಿ ಬಂದುಬಸ್ತಿನಲ್ಲಿ ರಾಜ್ಯದ ಹಲವೆಡೆ ಸಿನಿಮಾ ಪ್ರದರ್ಶನವಾದರೆ ಮತ್ತೆ ಕೆಲವಡೆ ಅರ್ಧಕ್ಕೆ ಪ್ರದರ್ಶನ ನಿಲ್ಲಿಸಲಾಗಿತ್ತು.

    ಆದರೆ ಇಂದು ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಎಲ್ಲೆಡೆ ಪ್ರದರ್ಶನವಾಗುತ್ತಿದೆ. ನಗರದ ಭೂಮಿಕಾ ಚಿತ್ರಮಂದಿರದಲ್ಲಿ ಬೆಳಗ್ಗೆ ಚಿತ್ರ 10.30ಕ್ಕೆ ಪ್ರದರ್ಶನವಾಗುತ್ತಿದೆ. ಭೂಮಿಕಾ‌ ಥಿಯೇಟರ್‌ನಲ್ಲಿ ಕಾಲಾ ಪೋಸ್ಟರ್ ರಾರಾಜಿಸುತ್ತಿವೆ. ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಭೂಮಿಕಾ ಚಿತ್ರಮಂದಿರಕ್ಕೆ ಬಿಗಿ ಪೋಲಿಸ್ ಬಂದೋಬಸ್ತ್ ‌ನೀಡಲಾಗಿದೆ.

    ಇನ್ನು ಕನ್ನಡ ಪರ ಹೋರಾಟಗಾರರ ಮುತ್ತಿಗೆ ನಂತರ 8 ಗಂಟೆ ಮೇಲಿನ ಪ್ರದರ್ಶನ ಕ್ಯಾನ್ಸಲ್ ಮಾಡಿದ್ದ ಮಂತ್ರಿ ಮಾಲ್ ನಲ್ಲಿ ಇಂದು ಬೆಳಗ್ಗೆ 9-45 ರಿಂದ ಕಾಲಾ ಚಿತ್ರ ಪ್ರದರ್ಶನ ಆರಂಭವಾಗಿದೆ. ಇಂದು ಒಟ್ಟು 5 ಶೋಗಳ ಪ್ರದರ್ಶನ ಮಾಡಲಾಗುತ್ತಿದೆ.

    ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ 'ಕಾಲಾ' ಶೋ ಶುರು.! ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ 'ಕಾಲಾ' ಶೋ ಶುರು.!

    Kaala movie is released in Bangalore today(JUNE 8)

    ಭದ್ರತೆ ನಿಟ್ಟಿನಲ್ಲಿ ಮಂತ್ರಿ ಮಾಲ್ ಸುತ್ತ ಬ್ಯಾರಿಕೇಡ್ ಹಾಕಲಾಗಿದೆ. ಮಂತ್ರಿ ಮಾಲ್ ಸುತ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ‌ ತೆಗೆದುಕೊಳ್ಳಲಾಗಿದೆ. ನಿನ್ನೆಗಿಂತಲೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ.

    ಇನ್ನು ಬುಕ್ ಮೈ ಶೋ ನಲ್ಲಿ ಆನ್ ಲೈನ್ ಬುಕ್ಕಿಂಗ್ ಆರಂಭವಾಗಿದ್ದು 45 ಕ್ಕೂ ಹೆಚ್ಚು ಮಲ್ಟಿಫೆಕ್ಸ್ ಹಾಗೂ ಚಿತ್ರಮಂದಿರದಲ್ಲಿ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಕೆಲವು ಕಟೆ ಮೂರು ಶೋ ಗಳಿದ್ದರೆ ಮತ್ತೆ ಕೆಲವು ಕಡೆಗಳಲ್ಲಿ ಆರು ಶೋ ಹಾಕಲಾಗಿದೆ. ಇನ್ನು ವಿಶೇಷ ಎಂದರೆ ಕಾಲಾ ಚಿತ್ರಕ್ಕೆ ಕ್ಯಾನ್ಸಲೇಷನ್ ಆಫರ್ ಕೂಡ ನೀಡಲಾಗ್ತಿದೆ.

    English summary
    Despite the controversy the Kaala movie is released in Bangalore today(JUNE 8) Kaala Cinema Booking Open at over 45 centers at Book My Show.
    Friday, June 8, 2018, 10:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X