For Quick Alerts
  ALLOW NOTIFICATIONS  
  For Daily Alerts

  ಒಂದು ಗಂಟೆಯ 'ಕಾಲಾ' ಸಿನಿಮಾದ ದೃಶ್ಯ ಲೀಕ್ !

  By Naveen
  |

  ರಜನಿಕಾಂತ್ ನಟನೆಯ 'ಕಾಲಾ' ಸಿನಿಮಾ ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಕರ್ನಾಟಕ ಹೊರತು ಪಡಿಸಿ ಸಿನಿಮಾಗೆ ಎಲ್ಲ ಕಡೆ ದೊಡ್ಡ ಒಪನಿಂಗ್ ಸಿಕ್ಕಿದೆ. ಆದರೆ, ಮತ್ತೊಂದು ಕಡೆ ಸಿನಿಮಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ.

  'ಕಾಲಾ' ಮೊದಲ ವಿಮರ್ಶೆ: 4 ಸ್ಟಾರ್ ಕೊಟ್ಟ ದುಬೈ ವಿಮರ್ಶಕ, ಹೇಗಿದೆ.? 'ಕಾಲಾ' ಮೊದಲ ವಿಮರ್ಶೆ: 4 ಸ್ಟಾರ್ ಕೊಟ್ಟ ದುಬೈ ವಿಮರ್ಶಕ, ಹೇಗಿದೆ.?

  ನಿನ್ನೆ 'ಕಾಲಾ' ಸಿನಿಮಾ ಸಿಂಗಾಪೂರ್ ನಲ್ಲಿ ಬಿಡುಗಡೆಯಾಗಿದೆ. ಈ ವೇಳೆ ಪ್ರವೀಣ್ ಎಂಬ ಒಬ್ಬ ಕಿಡಿಗೇಡಿ ತಮ್ಮ ಮೊಬೈಲ್ ಮೂಲಕ ಫೇಸ್ ಬುಕ್ ಲೈವ್ ಮಾಡಿದ್ದಾನೆ. ಚಿತ್ರಮಂದಿರಲ್ಲಿ ಕುಳಿತು ಸಿನಿಮಾದ ಒಂದು ಗಂಟೆಯ ದೃಶ್ಯವನ್ನು ಆನ್ ಲೈನ್ ನಲ್ಲಿ ಲೀಕ್ ಮಾಡಿದ್ದಾನೆ. ವಿಷಯ ತಿಳಿದ ಕೂಡಲೇ ಆತನನ್ನು ಬಂದಿಸಲಾಗಿದೆ. ಜೊತೆಗೆ ಆತನ ಫೇಸ್ ಬುಕ್ ಪೇಜ್ ನಿಂದ ದೃಶ್ಯವನ್ನು ಡಿಲೀಟ್ ಮಾಡಲಾಗಿದೆ.

  'ಕಾಲಾ' ಚಿತ್ರ ಇಂದು ಭಾರತದಲ್ಲಿ ತೆರೆಗೆ ಬಂದಿದೆ. ಚೆನೈ ಹಾಗೂ ಮುಂಬೈನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ನೋಡಿದ ಫ್ಯಾನ್ಸ್ ತಮ್ಮ ಸಂತಸವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಂಡಿರುವ ರಜನಿಕಾಂತ್ ನಟನೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ.

  English summary
  Super Star Rajinikanth 'Kaala' Tamil movie leaked in online via facebook live stream. Praveen, who leaked has been arrested in singapore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X