For Quick Alerts
  ALLOW NOTIFICATIONS  
  For Daily Alerts

  ತೆರೆಯಿಂದ 'ಕಾಣದಂತೆ ಮಾಯವಾಗಿದ್ದ' ಸಿನಿಮಾ ಮತ್ತೆ ಬರ್ತಿದೆ

  |

  ಹಲವು ವಿಶೇಷತೆಗಳಿಂದ ಕೂಡಿರುವ 'ಕಾಣದಂತೆ ಮಾಯವಾದನು' ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಈಗಾಗಲೆ ಅಂದರೆ ಜನವರಿಯಲ್ಲಿ ತೆರೆಗೆ ಬಂದಿದ್ದ ಸಿನಿಮಾ ಬಂದ ವಾರದಲ್ಲಿಯೆ ಕಾಣದಂತೆ ಮಾಯವಾಗಿತ್ತು. ಆದರೀಗ ಮತ್ತೆ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ.

  ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ವಿಕಾಸ್ ಮೊದಲ ಬಾರಿಗೆ ನಾಯಕನಾಗಿ ಮಿಂಚಿರುವ ಸಿನಿಮಾವಿದು. ಚಿತ್ರದಲ್ಲಿ ವಿಕಾಸ್ ಗೆ ನಾಯಕಿಯಾಗಿ ಸಿಂಧು ಲೋಕನಾಥ್ ಕಾಣಿಸಿಕೊಂಡಿದ್ದಾರೆ. ಈಗಾಗಲೆ ರಿಲೀಸ್ ಆಗಿದ್ದ ಈ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಗಿತ್ತು. ಆದರೀಗ ನಿರ್ದೇಶಕರು ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದ್ದಾರೆ.

  ಅಂದ್ಹಾಗೆ ಕಾಣದಂತೆ ಮಾಯವಾಗಿದ್ದ ಈ ಸಿನಿಮಾ ಇದೆ ಶುಕ್ರವಾರ 6ಕ್ಕೆ ತೆರೆಗೆ ಬರುತ್ತಿದೆ. ಈ ಸಿನಿಮಾಗೆ ರಾಜ್ ಪಾತ್ತಿಪಾಟಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಾಯಕ ಲವರ್ ಬಾಯ್ ಆಗಿ, ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಎಮೋಷನ್ ಜೊತೆಗೆ ಹಾರರ್ ಮತ್ತು ಸಸ್ಪೆನ್ಸ್ ಎಲಿಮೆಂಟ್ ಕೂಡ ಚಿತ್ರದ ಹೈಲೆಟ್.

  ಈಗಾಗಲೆ ರಿಲೀಸ್ ಆಗಿರುವ ಹಾಡುಗಳು ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವಿಶೇಷ ಅಂದರೆೆ ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಇನ್ನು ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ.

  English summary
  Vikas starrer Kaanadante Maayavadanu Kannada film re-release on March 6th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X