For Quick Alerts
  ALLOW NOTIFICATIONS  
  For Daily Alerts

  40 ದೇಶಗಳಲ್ಲಿ ರಜನಿ ಕಬಾಲಿ ಕ್ರೇಜ್ ಸೂಪರ್ ಡಾ

  By ಜೇಮ್ಸ್ ಮಾರ್ಟಿನ್
  |

  ಕಬಾಲಿ ಹಾಗೂ ರಜನಿಕಾಂತ್ ಬ್ರ್ಯಾಂಡ್ ನೇಮ್ ಬಗ್ಗೆ ಈಗಾಗಲೇ ಫಿಲ್ಮಿಬೀಟ್ ನಲ್ಲಿ ಬರೆದಿದ್ದು ಓದಿರಬಹುದು. ಈ ಚಿತ್ರದ ಮೂಲಕ ನಿರ್ದೇಶಕ ಪ ರಂಜೀತ್ ಹಾಗೂ ನಿರ್ಮಾಪಕ ಕಲೈಪುಲಿ ಎಸ್ ಥನು ಅವರು ಗೆದ್ದಿದ್ದಾರೆ. ವಿತರಕರ ಸ್ಥಿತಿಗತಿ ಬಗ್ಗೆ ಸದ್ಯಕ್ಕೆ ಏನೂ ಹೇಳಲು ಬರುವುದಿಲ್ಲ. ಆದರೆ, ಹಿಂದಿ, ತೆಲುಗು, ಮಲಾಯ್ ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತಿದ್ದು, ಥಾಯ್, ಚೀನಿ ಭಾಷೆಯಲ್ಲೂ ಚಿತ್ರ ತೆರೆ ಕಾಣಲಿದೆ.

  ಕಬಾಲಿ ಎಂಬ ಬೆಂಕಿ ರೀಲ್ ಹಾಗೂ ರಿಯಲ್ ವರ್ಲ್ಡ್ ನಲ್ಲಿ ಹಬ್ಬುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಜುಲೈ 12 ಕಬಾಲಿ ಡೇ ಆಗಿ ಮಾರ್ಪಟ್ಟಿದೆ. [ಕಬಾಲಿ 'ಬೆಂಕಿ' ಯಲ್ಲಿ ಚಳಿ ಕಾಯಿಸಿಕೊಂಡ ಸ್ಟಾರ್ ಗಳು]

  #kabaliDay #kabalireview #kabali #kabalifdfs #kabalireview ಸಕತ್ ಟ್ರೆಂಡಿಂಗ್ ನಲ್ಲಿದೆ. ಈ ಬಾರಿ ಕ್ರೇಜ್ ಯುಎಸ್, ಯುಕೆ ಸೀಮಿತವಾಗಿಲ್ಲ, ಸಿಂಗಪುರ, ಫ್ರಾನ್ಸ್, ಮಲೇಶಿಯಾ, ಥಾಯ್ಲೆಂಡ್, ಚೀನಾಕ್ಕೂ ಹಬ್ಬಿದೆ. ಅಫ್ ಕೋರ್ಸ್ ಜಪಾನ್ ನಲ್ಲೂ ರಜನಿ ಫ್ಯಾನ್ಸ್ ಚಿತ್ರಕ್ಕಾಗಿ ಕಾದಿದ್ದಾರೆ.[ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

  ಗೂಗಲ್ ನಲ್ಲಿ ಅಮರ ಗಾಯಕ ಮುಖೇಶ್ ಸ್ಮರಣೆ ಕಂಡು ಬಂದರೆ, ಟ್ವಿಟ್ಟರ್, ಫೇಸ್ ಬುಕ್ ನಲ್ಲಿ #kabali ಟ್ರೆಂಡ್ ಮಾಡುವಲ್ಲಿ ಎಲ್ಲರೂ ಕೈ ಜೋಡಿಸಿದ್ದಾರೆ. ಸೆಲೆಬ್ರಿಟಿಗಳ ಟ್ವೀಟ್ ಗಳು ಇದಕ್ಕೆ ಸಾಥ್ ನೀಡಿದೆ. 40 ದೇಶಗಳಲ್ಲಿ 5,000 ಸ್ಕ್ರೀನ್ ಗಳಲ್ಲಿ ಕಬಾಲಿ ಕ್ರೇಜ್ ಹುಟ್ಟುಕೊಂಡಿದೆ.. ಮುಂದೆ ಓದಿ..

   ರಜನಿ ಕ್ರೇಜ್ ಹೆಚ್ಚಾಗಿದೆ

  ರಜನಿ ಕ್ರೇಜ್ ಹೆಚ್ಚಾಗಿದೆ

  ಕಾಲಿವುಡ್, ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್, ಮಾಲಿವುಡ್ ಅಲ್ಲದೆ ತಮಿಳು ಇರುವೆಡೆಗಳಲ್ಲೆಲ್ಲ ರಜನಿ ಕ್ರೇಜ್ ಹೆಚ್ಚಾಗಿದೆ. ಮಲೇಶಿಯಾ, ಬ್ಯಾಂಕಾಕ್ ಹಾಗೂ ಹಾಂಗ್ ಕಾಂಗ್ ನಲ್ಲಿ ಚಿತ್ರೀಕರಣ ಕಂಡಿರುವ ತೈವಾನಿನ ನಟ ವಿನ್ಸ್ಟನ್ ಚಾವೋ, ರಾಧಿಕಾ ಆಪ್ಟೆ, ಧನ್ಸಿಕಾ, ದಿನೇಶ್ ರವಿ, ಜಾನ್ ವಿಜಯ್ ಅಲ್ಲದೆ ಕನ್ನಡಿಗ ಕಿಶೋರ್ ನಟಿಸಿರುವ ಬಹುಭಾಷಾ ಚಿತ್ರದ ಪ್ರಚಾರದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.

  ಬ್ರಾಂಡ್ ನೇಮ್ ವಿಸ್ತರಣೆ ಫಲ

  ಬ್ರಾಂಡ್ ನೇಮ್ ವಿಸ್ತರಣೆ ಫಲ

  ಟೀ ಶರ್ಟ್, ಕಾಫಿ ಕಪ್, ಕಾರಿನ ಮೇಲೆ ಸ್ಟಿಕ್ಕರ್ ಅಲ್ಲದೆ ವಿಮಾನದಲ್ಲೂ ಕಬಾಲಿ ಹವಾ ಸೃಷ್ಟಿಯಾಗಿತ್ತು. ಕಂಪನಿಗಳು ರಜೆ ನೀಡಿದ್ದು, ಟಿಕೆಟ್ ಗೆ ಐನೂರಿಂದ ಸಾವಿರಾರು ರುಪಾಯಿ ವೆಚ್ಚ ಇರುವುದು, ಹಾಲಿನ ಬದಲು ಕೋಕಾಕೋಲಾ ಅಭಿಶೇಕ ಉಫ್ ಕ್ರೇಜ್ ಅಂದರೆ ಇದು ಎಂದು ತಮಿಳರು ಕುಣಿದಾಡುತ್ತಿದ್ದಾರೆ.

  ಜಪಾನಿನ ರಜನಿ ಫ್ಯಾನ್ ಹಿಡೆತೊಶಿ ಯಸುದಾ

  ಜಪಾನಿನ ರಜನಿ ಫ್ಯಾನ್ ಹಿಡೆತೊಶಿ ಯಸುದಾ ಸದ್ಯ ಚೆನ್ನೈನಲ್ಲಿದ್ದು ರಜನಿ ಚಿತ್ರವನ್ನು ಮೊದಲ ದಿನವೇ ನೋಡಲು ಜಪಾನ್ ನಿಂದ ಬರುತ್ತಾರೆ. ರಜನಿ ಡೈಲಾಗ್ ಹೊಡೆದಿದ್ದು ಹೀಗೆ

  40 ದೇಶಗಳಲ್ಲಿ ರಜನಿ ಕಬಾಲಿ ಹಬ್ಬ ಆಚರಣೆ

  ಜುಲೈ 22ರಂದು 40 ದೇಶಗಳಲ್ಲಿ ರಜನಿ ಕಬಾಲಿ ಹಬ್ಬ ಆಚರಣೆ

  ಪ್ಯಾರೀಸ್ ನಲ್ಲಿ ರಜನಿ ಫ್ಯಾನ್ ಹವಾ

  ಪ್ಯಾರೀಸ್ ನಲ್ಲಿ ರಜನಿ ಫ್ಯಾನ್ ಹವಾ ಹೇಗಿದೆ ನೋಡಿ

  ಯುಎಸ್ ನಲ್ಲಿ ಕಬಾಲಿ ಕ್ರೇಜ್

  ಯುಎಸ್ ನಲ್ಲಿ ಕಬಾಲಿ ಕ್ರೇಜ್ ಬಗ್ಗೆ ಟ್ವೀಟ್

  ಅಲ್ ಮುಲ್ಲಾ ಜಂಕ್ಷನ್

  ದುಬೈನ ಅಲ್ ಮುಲ್ಲಾ ಜಂಕ್ಷನ್ ನಲ್ಲಿ ರಜನಿ ಕಬಾಲಿ ಕಟೌಟ್

  ಇಂಗ್ಲೆಂಡಿನಲ್ಲಿ ಕಬಾಲಿ ಪ್ರೀಮಿಯರ್ ಶೋ

  ಇಂಗ್ಲೆಂಡಿನಲ್ಲಿ ಕಬಾಲಿ ಪ್ರೀಮಿಯರ್ ಶೋ ಬಗ್ಗೆ ಟ್ವೀಟ್

  ಮಧುರ್ ಭಂಡಾರ್ಕರ್ ರಿಂದ ಮುಂಬೈ ಕ್ರೇಜ್ ಬಗ್ಗೆ

  ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಮುಂಬೈ ಚಿತ್ರಮಂದಿರದಲ್ಲಿ ಕ್ರೇಜ್ ಬಗ್ಗೆ ವಿಡಿಯೋ

  English summary
  Rajinikanth's Kabali finally releases to packed theaters across the world on Friday. From US to Malaysia, Singapore to Japan, fans have been thronging the theatres to catch the earliest show possible of the superstar's new film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X