»   » ಗೆದ್ದ ವಾಣಿಜ್ಯ ಮಂಡಳಿ: ಸ್ಟಾರ್ ಹೋಟೆಲ್ ಗಳಲ್ಲಿ 'ಕಬಾಲಿ' ಕ್ಯಾನ್ಸಲ್.!

ಗೆದ್ದ ವಾಣಿಜ್ಯ ಮಂಡಳಿ: ಸ್ಟಾರ್ ಹೋಟೆಲ್ ಗಳಲ್ಲಿ 'ಕಬಾಲಿ' ಕ್ಯಾನ್ಸಲ್.!

Posted By:
Subscribe to Filmibeat Kannada

ಕಡೆಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೆಲುವಿನ ನಗೆ ಬೀರಿದೆ. ಸ್ಟಾರ್ ಹೋಟೆಲ್ ಗಳಲ್ಲಿ 'ಕಬಾಲಿ' ಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನಿರಾಕರಿಸಿರುವುದರಿಂದ ಪ್ರದರ್ಶಕರು ನಿಟ್ಟುಸಿರು ಬಿಟ್ಟಿದ್ದಾರೆ.

'ಕಬಾಲಿ' ಚಿತ್ರದ ಮಲ್ಟಿಪ್ಲೆಕ್ಸ್ ವಿತರಣೆ ಹಕ್ಕು ಪಡೆದಿದ್ದ ಲಹರಿ ಆಡಿಯೋ ಸಂಸ್ಥೆ, ಮಲ್ಟಿಪ್ಲೆಕ್ಸ್ ಗಳ ಜೊತೆಗೆ ಫೈವ್ ಸ್ಟಾರ್ ಹೋಟೆಲ್ ಗಳಲ್ಲೂ 'ಕಬಾಲಿ' ಪ್ರದರ್ಶನ ಮಾಡುವುದಕ್ಕೆ ಸಕಲ ತಯಾರಿ ಮಾಡಿಕೊಂಡಿತ್ತು. ['ಕಬಾಲಿ' ಕ್ರೇಜ್: ಸೂಪರ್ ಸುಪ್ರೀಂ ಐಡಿಯಾ ಮಾಡಿದ ಲಹರಿ ವೇಲು]

 'Kabali' shows cancelled in 5 star Hotels, Bengaluru

ಕುಮಾರಕೃಪ ರಸ್ತೆಯಲ್ಲಿ ಇರುವ ಲಲಿತ್ ಅಶೋಕ್, ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ಮತ್ತು ಜೆ.ಡಬ್ಲ್ಯೂ.ಮ್ಯಾರಿಯೆಟ್, ಏರ್ ಪೋರ್ಟ್ ರಸ್ತೆಯಲ್ಲಿ ಇರುವ ಕ್ರೌನ್ ಪ್ಲಾಜಾ ಹೋಟೆಲ್ ಗಳಲ್ಲಿ 'ಕಬಾಲಿ' ಪ್ರದರ್ಶನ ಮಾಡಲು ಲಹರಿ ವೇಲು ಸಿದ್ಧತೆ ಮಾಡಿಕೊಂಡಿದ್ದರು.

ಲಹರಿ ವೇಲು ರವರ ಈ ನಡೆ ಕಾನೂನುಬಾಹಿರ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಾದ ಮಾಡಿತ್ತು. ಸಿನಿಮಾಟೋಗ್ರಫಿ ನಿಯಮದ ಪ್ರಕಾರ ಸೆನ್ಸಾರ್ ಮಾಡಲ್ಪಟ್ಟ ಚಿತ್ರಗಳು ಎನ್.ಒ.ಸಿ ಸ್ಥಳದಲ್ಲಿ ನಿರ್ಮಾಣಗೊಂಡ ಚಿತ್ರಮಂದಿರದ ಆವರಣದಲ್ಲಿ ಮಾತ್ರ ಚಿತ್ರ ಪ್ರದರ್ಶನ ಮಾಡಬೇಕು.

 'Kabali' shows cancelled in 5 star Hotels, Bengaluru

ಯಾವುದೇ ಪರವಾನಗಿ ಪಡೆಯದೆ ಫೈವ್ ಸ್ಟಾರ್ ಹೋಟೆಲ್ ನಲ್ಲಿ 'ಕಬಾಲಿ' ಪ್ರದರ್ಶನ ಮಾಡಲು ಲಹರಿ ವೇಲು ಮುಂದಾಗಿದ್ದರಿಂದ, ಅದಕ್ಕೆ ಅನುಮತಿ ನೀಡದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಿಲ್ಲಾ ದಂಡಾಧಿಕಾರಿಗಳಿಗೆ ಪತ್ರ ಬರೆದಿತ್ತು. [5 ಸ್ಟಾರ್ ಹೋಟೆಲ್ ನಲ್ಲಿ 'ಕಬಾಲಿ' ಶೋ ಖಂಡಿಸಿದ ಸಾರಾ ಗೋವಿಂದು]

ಫಿಲ್ಮ್ ಚೇಂಬರ್ ಮನವಿ ಪುರಸ್ಕರಿಸಿರುವ ಜಿಲ್ಲಾ ದಂಡಾಧಿಕಾರಿಗಳು ಸ್ಟಾರ್ ಹೋಟೆಲ್ ಗಳಲ್ಲಿ 'ಕಬಾಲಿ' ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ.

 'Kabali' shows cancelled in 5 star Hotels, Bengaluru

ಇದರಿಂದ ಬೇಸರವಾಗಿದ್ದರೂ, ''ಇದು ಗೆಲುವು ಅಂತಲೇ ನಾನು ಭಾವಿಸುತ್ತೇನೆ. ಕನ್ನಡ ಚಿತ್ರರಂಗಕ್ಕೆ ನಾನು ಸದಾ ಒಳಿತನ್ನೇ ಬಯಸುತ್ತೇನೆ. ಹೊಸ ಆಲೋಚನೆ ನಾವು ಮಾಡಿದ್ದೆವು. ಅದಕ್ಕೆ ಈ ಬಾರಿ ಹಿನ್ನಡೆ ಆಗಿದೆ. ಮುಂದೊಂದು ದಿನ ಅದಕ್ಕೆ ಪುರಸ್ಕಾರ ದೊರೆಯುತ್ತದೆ ಎಂಬ ವಿಶ್ವಾಸ ಇದೆ'' ಅಂತ 'ಫಿಲ್ಮಿಬೀಟ್ ಕನ್ನಡ' ಗೆ ಲಹರಿ ವೇಲು ಪ್ರತಿಕ್ರಿಯೆ ನೀಡಿದರು.

ಒಟ್ನಲ್ಲಿ, ಸ್ಟಾರ್ ಹೋಟೆಲ್ ಗಳಲ್ಲಿ 'ಕಬಾಲಿ' ಶೋ ಕ್ಯಾನ್ಸಲ್ ಆಗಿರುವುದು ಪಕ್ಕಾ ನ್ಯೂಸ್. ಹಾಗಾದ್ರೆ, ಈಗಾಗಲೇ 'ಬುಕ್ ಮೈ ಶೋ' ಮೂಲಕ ಬುಕ್ ಮಾಡಿರುವವರ ಕಥೆ ಏನು.? ಎಂಬ ಪ್ರಶ್ನೆಗೆ 'ಹಣ ವಾಪಸ್ ನೀಡುತ್ತಿದ್ದೇವೆ' ಎಂಬ ಉತ್ತರ ಲಹರಿ ವೇಲು ಕಡೆಯಿಂದ ಬಂತು.

English summary
DC of Bengaluru as turned down to give permission for arranging Super Star Rajinikanth starrer 'Kabali' shows in 4 Five Star Hotels, Bengaluru. Hence, All shows in respective Hotels have been cancelled. For those who have already booked the tickets, money will be refunded.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada