»   » ಕನ್ನಡಕ್ಕೆ 'ಜಿಲ್' ಖಳನಟ ಕಬೀರ್ ಸಿಂಗ್ ಆಗಮನ

ಕನ್ನಡಕ್ಕೆ 'ಜಿಲ್' ಖಳನಟ ಕಬೀರ್ ಸಿಂಗ್ ಆಗಮನ

Posted By:
Subscribe to Filmibeat Kannada

ಇತ್ತೀಚಿನ ತೆಲುಗು ಚಿತ್ರ 'ಜಿಲ್' (ಗೋಪಿಚಂದ್ ಅಭಿನಯ) ಹಾಗೂ 'ಕಿಕ್' ಸಿನಿಮಾ ಮೂಲಕ ಎಂಟ್ರಿ ಆದ ಖಳ ನಟ ಕಬೀರ್ ಸಿಂಗ್ ಈಗ 3ನೇ ಸಿನಿಮಾ 'ಚಾಲಾಕಿ' ಕನ್ನಡ ಸಿನೆಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ.

ಚೋಟಾ ನಾಯಕ್ ಪಾತ್ರದಲ್ಲಿ ಅಭಿನಯಿಸಿದ ಕಬೀರ್ ಸಿಂಗ್ ಸಿನಿಮಾ 'ಜಿಲ್' ಆಂಧ್ರ ಪ್ರದೇಶದಲ್ಲಿ ಜಯಭೇರಿ ಹೊಡೆಯುತ್ತಾ ಇದೆ. ಕಬೀರ್ ಸಿಂಗ್ ಅವರು ನಾಯಕ ಪ್ರಜ್ವಲ್ ದೇವರಾಜ್ ಜೊತೆ ಅಭಿನಯಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅವರ 25 ನೇ ಸಿನಿಮಾ 'ಚಾಲಾಕಿ'. [ಎಲ್ಲಾ ಇರೋ ಈ ನಟರಿಗೆ ಅದೊಂದು ಮಾತ್ರ ಇಲ್ಲ!]

Kabir Singh makes his debut in Sandalwood

ಈ ಚಿತ್ರಕ್ಕೆ ನಾಯಕಿಯಾಗಿ ಸೋನಮ್ ಶೆಟ್ಟಿ ಆಯ್ಕೆ ಆಗಿದ್ದಾರೆ. ವೇಣುಗೋಪಾಲ್ ಚಿತ್ರದ ನಿರ್ದೇಶಕರು. ಪ್ರವೀಣ್ ಕುಮಾರ್ ಚಿತ್ರದ ನಿರ್ಮಾಪಕರು. ಪಿ ರಾಜನ್ ಅವರ ಛಾಯಾಗ್ರಹಣ, ಪ್ರೇಮ್ ಕುಮಾರ್ ಅವರ ಸಂಗೀತ, ದೀಪು ಅವರ ಸಂಕಲನ (ದೀಪು ಎಸ್ ಕುಮಾರ್ ಅಲ್ಲ) ಬಾಬು ಖಾನ್ ಅವರ ಕಲಾ ನಿರ್ದೇಶನ, ಜಾಲಹಳ್ಳಿ ನರಸಿಂಹ ಅವರ ಮೇಲ್ವಿಚಾರಣೆ ಚಿತ್ರಕ್ಕೆ ಇದೆ.

ತನ್ನದೇ ಆದಂತಹ ಪ್ರೇಕ್ಷಕ ವರ್ಗ, ಅಭಿಮಾನಿ ಬಳಗ ಹೊಂದಿರುವ ಪ್ರಜ್ವಲ್ ದೇವರಾಜ್ ಅವರ ಪಾಲಿಗೆ ಕಳೆದ ವರ್ಷ ಅಷ್ಟೇನು ಆಶಾದಾಯವಾಗಿರಲಿಲ್ಲ. ಈ ಬಾರಿ ಅವರು 'ಚಾಲಾಕಿ' ಚಿತ್ರದ ಮೂಲಕ ಹೊಸ ಹುಮ್ಮಸ್ಸಿನಿಂದ ಬರುತ್ತಿದ್ದಾರೆ. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗಿ]

ಪ್ರೇಮಿಗಳ ಚಾಲಾಕಿ ತನವನ್ನು ಹೇಳುವ ಪಕ್ಕಾ ಮನರಂಜನಾತ್ಮಕ ಚಿತ್ರ ಇದು. ವೇಣುಗೋಪಾಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ. ಭಿನ್ನವಾಗಿರುವ ಈ ಕಥೆಯನ್ನು ಅಷ್ಟೇ ಭಿನ್ನವಾಗಿ ತೆರೆಗೆ ತರುತ್ತೇನೆ ಎಂಬ ಅಖಂಡ ವಿಶ್ವಾಸ ನಿರ್ದೇಶಕರದು. (ಫಿಲ್ಮಿಬೀಟ್ ಕನ್ನಡ)

English summary
Tollywood films villain Kabir Singh makes his debut in Sandalwood. He will be playing the role of a villain in 'Chaalaki' film opposite Prajwal Devaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada