For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೆ ಸಿದ್ಧವಾಗಿದೆ 'ಕಡಲ ತೀರದ ಭಾರ್ಗವ'

  By ಫಿಲ್ಮಿಬೀಟ್ ಡೆಸ್ಕ್
  |

  ವಿಭಿನ್ನ ಕಥಾಹಂದರ ಹೊಂದಿರುವ 'ಕಡಲ ತೀರದ ಭಾರ್ಗವ' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಸದ್ಯದಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾ ಬಿಡುಗಡೆಗೂ ಟೀಸರ್ ಚಿತ್ರಪ್ರೇಕ್ಷರ ಮುಂದೆ ಬರ್ತಿದೆ. ಹೌದು, ಕಡಲ ತೀರದ ಭಾರ್ಗವ ಸಿನಿಮಾದ ಟೀಸರ್ ಬಿಡುಗಡೆಗೆ ಸಜ್ಜಾಗಿದ್ದು, ಇದೇ ತಿಂಗಳು ಅಭಿಮಾನಿಗಳ ಮುಂದೆ ಬರ್ತಿದೆ.

  ಇದೇ ತಿಂಗಳು 18ರಂದು ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಈ ಟೀಸರ್ ಬಿಡುಗಡೆ ಸಮಯದಲ್ಲಿ ಟ್ರೈಲರ್ ಹಾಗೂ ಚಿತ್ರ‌ ‌ಬಿಡುಗಡೆ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಭರತ್ ಗೌಡ ಹಾಗೂ ವರುಣ್ ರಾಜು ಪಟೇಲ್ ಕಾಣಿಸಿಕೊಂಡಿದ್ದಾರೆ. ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ನಟನೆ ಜೊತೆಗೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  ಏವಕಲ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ವಿಜಯಂ ವಜ್ರ ವೆಂಕ್ಚರ್ಸ್ ಸಹ ನಿರ್ಮಾಣ ಈ ಚಿತ್ರಕ್ಕಿದೆ.

  ಇನ್ನು ಚಿತ್ರದಲ್ಲಿ ನಾಯಕಿಯಾಗಿ ಶೃತಿ ಪ್ರಕಾಶ್ ನಟಿಸಿದ್ದಾರೆ. ಈಟಿವಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಉಡುಪಿ, ಮುರುಡೇಶ್ವರ ಹಾಗೂ ಇನ್ನಿತರ ಕರಾವಳಿಯ ಕಡಲತೀರಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

  ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನೀಡಿದ್ದಾರೆ. ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ, ಉಮೇಶ್ RB ಅವರ ಸಂಕಲನವಿದೆ.

  ಅಂದಹಾಗೆ ಇದು ಸಾಹಿತಿ ಶಿವರಾಮ ಕಾರಂತ ಅವರ ಜೀವನ ಕುರಿತಾದ ಚಿತ್ರವಲ್ಲ ಎನ್ನುವುದನ್ನು ಚಿತ್ರತಂಡ ಸ್ಪಷ್ಟಪಡಿಸಿದೆ.‌ ಕಡಲ ತೀರದಲ್ಲಿ ವಾಸಿಸುವ ನಾಯಕನ ಹೆಸರು ಭಾರ್ಗವ ಅಂತ.‌ ಹಾಗಾಗಿ ಈ ಚಿತ್ರದ ಶೀರ್ಷಿಕೆ 'ಕಡಲ ತೀರದ ಭಾರ್ಗವ' ಎಂದು ಇಡಲಾಗಿದೆ ಎಂದು ಟೈಟಲ್ ಬಗ್ಗೆ ಸ್ಪಷ್ಟಪಡಿಸಿದೆ ಸಿನಿಮಾತಂಡ. ವಿಭಿನ್ನ ಕಥೆಯ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗ್ತಾರಾ ಎಂದು ಕಾದು ನೋಡಬೇಕು.

  English summary
  Kadala Theerada Bhargava movie teaser will release on October 18th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X