Just In
Don't Miss!
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- News
"ಸಿಬಿಐ, ಇಡಿ ಮೂಲಕ ಮೋದಿ ತಮಿಳುನಾಡನ್ನು ನಿಯಂತ್ರಿಸುವ ಪ್ರಯತ್ನದಲ್ಲಿದ್ದಾರೆ"
- Automobiles
2021ರ ಕ್ರೆಟಾ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ತೆಲುಗು ನಟಿ ಕಾಜಲ್ ಸಂತಾಪ
ಹಿರಿಯ ರಂಗಕರ್ಮಿ, ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಇನ್ನು ನೆನಪು ಮಾತ್ರ. ಗುರುವಾರ(ಮೇ-2) ಬೆಳಗ್ಗೆ ನಿಧನರಾದ ಹಿರಿಯ ರಂಗಭೂಮಿ ಕಲಾವಿದನಿಗೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ದರ್ಶನ್, ಸುದೀಪ್, ದೇವರಾಜ್, ಶ್ರೀನಾಥ್ ಸೇರಿದಂತೆ ಅನೇಕರ ನಟರು ಹಿರಿಯ ರಂಗಕರ್ಮಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಟಾಲಿವುಡ್ ನಟಿ ಕಾಜಲ್ ಅಗರ್ ವಾಲ್ ಹಿರಣ್ಣಯ್ಯ ಅವರನ್ನು ಸ್ಮರಿಸಿದ್ದಾರೆ. ಹಿರಣ್ಣಯ್ಯ ಜೊತೆ ಕಾಜಲ್ ಒಂದು ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದಾರೆ. ಆ ನೆನಪನ್ನು ಈಗ ಹಂಚಿಕೊಂಡಿದ್ದಾರೆ. ಅಷ್ಟಕ್ಕು ಕಾಜಲ್ ಮತ್ತು ಹಿರಣ್ಣಯ್ಯ ಒಟ್ಟಿಗೆ ಅಭಿನಯಸಿದ್ದು 'ಪ್ಯಾರಿಸ್ ಪ್ಯಾರಿಸ್' ಸಿನಿಮಾ. ರಮೇಶ್ ಅರವಿಂದ್ ನಿರ್ದೇಶನದ 'ಪ್ಯಾರೀಸ್ ಪ್ಯಾರೀಸ್' ಸಿನಿಮಾದಲ್ಲಿ ಹಿರಣ್ಣಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಗಜ' ಚಿತ್ರದಲ್ಲಿ ಅಭಿನಯಿಸಿದ ನೆನಪು ಸದಾ ನನ್ನೊಂದಿಗೆ: ನಟ ದರ್ಶನ್ ಸಂತಾಪ
ಆ ಕ್ಷಣವನ್ನು ನೆನಪಿಸಿಕೊಂಡ ಕಾಜಲ್ ಹಿರಿಯ ಕಲಾವಿದನ ನಿಧನಕ್ಕೆ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ."ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಪ್ಯಾರಿಸ್ ಪ್ಯಾರಿಸ್ ಸಿನಿಮಾದಲ್ಲಿ ಅವರ ಜತೆಗೆ ಅಭಿನಯಿಸುವ ಅದ್ಭುತ ಅವಕಾಶ ಸಿಕ್ಕಿತು. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಸಿಗಲಿ" ಎಂದಿದ್ದಾರೆ.
'ಪ್ಯಾರಿಸ್ ಪ್ಯಾರಿಸ್' ಸಿನಿಮಾ ಹಿಂದಿಯ 'ಕ್ವೀನ್' ಚಿತ್ರದ ರಿಮೇಕ್. ಕನ್ನಡದಲ್ಲಿ 'ಬಟರ್ ಫ್ಲೈ' ಹೆಸರಿನಲ್ಲಿ ಸಿನಿಮಾ ತಯಾರಾಗಿದೆ. ಪಾರುಲ್ ಯಾದವ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷ ಅಂದ್ರೆ ಚಿತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ಸಾಲುಗಳನ್ನು ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಈ ಹಾಡಿಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಧ್ವನಿಯಾಗಿದ್ದಾರೆ.