»   » ಪುನೀತ್ ಜೊತೆ ಡ್ಯುಯೆಟ್ ಸಾಂಗ್ ಹಾಡ್ತಾರಂತೆ ಕಾಜಲ್

ಪುನೀತ್ ಜೊತೆ ಡ್ಯುಯೆಟ್ ಸಾಂಗ್ ಹಾಡ್ತಾರಂತೆ ಕಾಜಲ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ಅವರ ಬಿಗ್ ಬಜೆಟ್ ನ ಸಿನಿಮಾ 'ಚಕ್ರವ್ಯೂಹ' ದಿನದಿಂದ ದಿನಕ್ಕೆ ಭಾರಿ ಸುದ್ದಿ ಮಾಡುತ್ತಿದೆ. ಪುನೀತ್ ಅವರಿಗೆ ವಿರುದ್ಧವಾಗಿ ವಿಲನ್ ರೋಲ್ ನಲ್ಲಿ ತಮಿಳಿನ ಖ್ಯಾತ ನಟ ಅರುಣ್ ವಿಜಯ್ ಕಾಣಿಸಿಕೊಂಡು ಸುದ್ದಿ ಆಯ್ತು.

ಆಮೇಲೆ ತೆಲುಗು ಯಂಗ್ ಟೈಗರ್ ಜೂನಿಯರ್ NTR ಅವರು ಹಾಡುವ ಮೂಲಕ ಸಿನಿಮಾ ಸುದ್ದಿ ಆಯ್ತು. ಇದೀಗ ಈ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ತೆಲುಗು-ತಮಿಳಿನ ಖ್ಯಾತ ನಟಿ ಕಾಜಲ್ ಅಗರ್ ವಾಲಾ ಅವರು.[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]

Kajal Aggarwal to make her singing debut in kannada after NTR

ಹೌದು NTR ಅವರು ಹಾಡಿದ ಬೆನ್ನಲ್ಲೇ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾದ ನಟಿ ಕಾಜಲ್ ಅವರು 'ಚಕ್ರವ್ಯೂಹ' ಸಿನಿಮಾದ ಹಾಡೊಂದಕ್ಕೆ ತಮ್ಮ ಧ್ವನಿ ನೀಡುತ್ತಿದ್ದಾರೆ.

ನಟಿ ಕಾಜಲ್ ಅವರನ್ನು ಚಿತ್ರತಂಡ ಸಂಪರ್ಕಿಸಿದಾಗ ಅವರು ಹಾಡಲು ಬಹಳ ಉತ್ಸುಕತೆಯಿಂದ ಒಪ್ಪಿಕೊಂಡಿದ್ದಾರೆ. ಕಾಜಲ್ ಅವರು ನಿರ್ಮಾಪಕ ಎನ್.ಕೆ ಲೋಹಿತ್ ಅವರ ಒಳ್ಳೆಯ ಗೆಳತಿ. ಹಾಗಾಗಿ ನಟಿಯನ್ನು ಸಂಪರ್ಕಿಸಿದಾಗ ಬಹಳ ಖುಷಿಯಿಂದ ಹಾಡಲು ಒಪ್ಪಿಕೊಂಡರಂತೆ.[ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಂತೆ ತಮಿಳಿನ ವಿಕ್ರಂ]

Kajal Aggarwal to make her singing debut in kannada after NTR

ಕಾಜಲ್ ಅವರ ಕಂಠ ಸುಮಧುರವಾಗಿದ್ದರೂ ಕೂಡ ಇದೇ ಮೊದಲ ಬಾರಿಗೆ ಅವರು ಹಾಡುತ್ತಿದ್ದು, ಪುನೀತ್ ಅವರ 'ಚಕ್ರವ್ಯೂಹ' ದಿಂದ ಈ ನಟಿಯ ಕೌಶಲ್ಯ ಬೆಳಕಿಗೆ ಬರಲಿದೆಯಂತೆ.

ಇನ್ನು ಈ ಡ್ಯುಯೆಟ್ ಸಾಂಗ್ ಗೆ ಕಾಜಲ್ ಅವರ ಜೊತೆ ಪುನೀತ್ ಅವರು ಹಾಡುವ ಮೂಲಕ ಸಾಥ್ ನೀಡಿದ್ದು, ಈಗಾಗಲೇ ಪುನೀತ್ ಭಾಗದ ಹಾಡಿನ ರೆಕಾರ್ಡಿಂಗ್ ಕೂಡ ಮುಗಿದಿದೆ.[ಪುನೀತ್-ನಂದ ಕಿಶೋರ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ!]

ತಮಿಳು-ತೆಲುಗು ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ನಟಿ ಕಾಜಲ್ ಅವರು ಈ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಜನವರಿ 7 ರಿಂದ ಹಾಡುಗಳ ಚಿತ್ರೀಕರಣಕ್ಕೆ ಪುನೀತ್, ರಚಿತಾ ರಾಮ್, ನಿರ್ದೇಶಕ ಸರವಣನ್ ಅವರು ಚಿತ್ರತಂಡದೊಂದಿಗೆ ಪೋರ್ಚುಗಲ್ ಗೆ ತೆರಳಲಿದ್ದಾರೆ.

English summary
Telugu Actress Kajal Aggarwal is here to take up one such crazy task. The long-legged beauty is all set to croon in Kannada for the first time, for the film Chakravyuha, which marks Powerstar Puneeth Rajkumar's 25th film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada