For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರಿ ನಿಶ್ಚಿತಾರ್ಥ

  By ಉದಯರವಿ
  |

  ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಪುತ್ರಿ ನಿಶ್ಚಿತಾರ್ಥ ನಿಶ್ಚಯವಾಗಿದೆ. ತಮ್ಮ ಮಗಳು ವಿದ್ಯಾ ನಿಶ್ಚಿತಾರ್ಥವನ್ನು ಇದೇ ಅಕ್ಟೋಬರ್ 30 ರಂದು ಅದ್ದೂರಿಯಾಗಿ ನೆರವೇರಿಸಲು ಸಿದ್ಧತೆಗಳು ಭರದಿಂದ ಸಾಗಿವೆ.

  ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಎಂಎ ಸ್ನಾತಕೋತ್ತರ ಪದವಿ ಮುಗಿಸಿರುವ ವಿದ್ಯಾ ಅವರು ನಾರಾಯಣ್ ಅವರ ಏಕಮಾತ್ರ ಪುತ್ರಿ. ತಮ್ಮ ಮಗಳ ನಿಶ್ಚಿತಾರ್ಥದ ಬಗ್ಗೆ ಮಾತನಾಡಿರುವ ನಾರಾಯಣ್ ಅವರು, "ನಮ್ಮ ಕುಟುಂಬದಲ್ಲಿ ಇದು ಮೊದ ಅತಿದೊಡ್ಡ ಸಂಭ್ರಮದ ಕಾರ್ಯಕ್ರಮ. ಚಿತ್ರೋದ್ಯಮದ ನನ್ನ ಎಲ್ಲಾ ಸ್ನೇಹಿತರನ್ನು ಆಹ್ವಾನಿಸುತ್ತಿದ್ದೇನೆ" ಎಂದಿದ್ದಾರೆ. [ವಿಷ್ಣುವರ್ಧನ್ ಸಾವಿನ ರಹಸ್ಯ ಬಿಚ್ಚಿಟ್ಟ ನಾರಾಯಣ್]

  ಇನ್ನು ವಿದ್ಯಾ ಅವರ ಕೈಹಿಡಿಯುತ್ತಿರುವ ವರನ ಹೆಸರು ಶ್ರೀನಿವಾಸ್. ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿರುವ ಇವರು ಉತ್ತಮ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು ವಿದ್ಯಾ ಅವರಿಗೆ ಅನುರೂಪದ ಜೋಡಿಯಾಗಲಿದ್ದಾರೆ ಎನ್ನುತ್ತವೆ ಮೂಲಗಳು.

  ನಟ, ನಿರ್ದೇಶಕ, ಗೀತಸಾಹಿತಿ, ಸಂಗೀತ ನಿರ್ದೇಶಕ, ಚಿತ್ರಕಥೆ ರಚನೆ...ಹೀಗೆ ಎಲ್ಲ ವಿಭಾಗಗಳಲ್ಲೂ ತಮ ಕೈ ಚಳಕ ತೋರಿಸಿದವರು ನಾರಾಯಣ್ ಅವರು. ಚೈತ್ರದ ಪ್ರೇಮಾಂಜಲಿ ಚಿತ್ರದ ಅವರ ವೃತ್ತಿ ಬದುಕಿನಲ್ಲಿ ವಿಶೇಷ ಸ್ಥಾನಕ್ಕೆ ಪಾತ್ರವಾಗಿರುವುದು ಗೊತ್ತೇ ಇದೆ.

  English summary
  Kannada actor, director, writer, producer, lyricist and music composer S Narayan's daughter engagement has been fixed on 30th October, 2014. Narayan's daughter Vidhya engagement has been held with Srinivas, who is running an educational institution.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X