For Quick Alerts
  ALLOW NOTIFICATIONS  
  For Daily Alerts

  MH370 ಮಿಸ್ಸಿಂಗ್ ಮಿಸ್ಟರಿ ಬಗ್ಗೆ ಕಮಲ್ ಹಾಸನ್ ಚಿತ್ರ?

  By Rajendra
  |

  ಸಕಲಕಲಾ ವಲ್ಲಭ ಕಮಲ್ ಹಾಸನ್ ಅವರು 'ಉತ್ತಮ ವಿಲನ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ. ಈ ಚಿತ್ರಕ್ಕೆ ಕನ್ನಡಿಗ ರಮೇಶ್ ಅರವಿಂದ್ ಅವರು ಆಕ್ಷನ್ ಕಟ್ ಹೇಳಿದ್ದು, ಇವರಿಬ್ಬರ ಗುರು ಕೀರ್ತಿಶೇಷರಾದ ಕೆ ಬಾಲಚಂದರ್ ಸಹ ಚಿತ್ರದಲ್ಲಿ ಒಂದು ಪಾತ್ರ ಪೋಷಿಸಿದ್ದಾರೆ.

  ಈ ಚಿತ್ರಕ್ಕೆ ಸಬಂಧಿಸಿದ ನಿರ್ಮಾಣ ನಂತರದ ಕಾರ್ಯಗಳು ಭರದಿಂದ ಸಾಗುತ್ತಿವೆ. ಇದರ ಜೊತೆಗೆ 'ಪಾಪನಾಶನಂ' ('ದೃಶ್ಯಂ' ರೀಮೇಕ್) ಹಾಗೂ 'ವಿಶ್ವರೂಪಂ 2' ಚಿತ್ರಗಳಲ್ಲೂ ಕಮಲ್ ತೊಡಗಿಕೊಂಡಿದ್ದಾರೆ. ಇದೀಗ ಅವರ ಹೊಸ ಚಿತ್ರವೊಂದು ನಿಗೂಢವಾಗಿ ಸದ್ದು ಮಾಡುತ್ತಿದೆ.

  ಇತ್ತೀಚೆಗೆ ನಿಗೂಢವಾಗಿ ನಾಪತ್ತೆಯಾದ MH370 ಎಂಬ ಮಲೇಷ್ಯಾ ಏರ್ ಲೈನ್ಸ್ ವಿಮಾನದ ರಹಸ್ಯದ ಮೇಲೆ ಕಮಲ್ ಹಾಸನ್ ಚಿತ್ರ ಮಾಡುವುದಾಗಿ ಸುದ್ದಿ ಬಂದಿದೆ. ಈ ಚಿತ್ರಕ್ಕೆ ನಿರ್ದೇಶಕರಾಗಿ ಬದಲಾಗಿರುವ ಡಾನ್ಸ್ ಮಾಸ್ಟರ್ ಪ್ರಭುದೇವ ಆಕ್ಷನ್ ಕಟ್ ಹೇಳಲಿದ್ದಾರಂತೆ.

  ರಾಜ್ ಕಮಲ್ ಇಂಟರ್ ನ್ಯಾಶನಲ್ ಲಾಂಛನದಲ್ಲಿ ಕಮಲ್ ಅವರು ಸ್ವಂತ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳು ಇನ್ನಷ್ಟೇ ಹೊರಬೀಳಬೇಕು. ಇಷ್ಟಕ್ಕೂ ನಿಗೂಢವಾಗಿ ನಾಪತ್ತೆಯಾದ ವಿಮಾನದ ಕಥೆಯೇನೆಂದರೆ...

  ಮಾರ್ಚ್ 8, 2014ರಲ್ಲಿ ಕೌಲಾಲಂಪುರದಿಂದ ಬೀಜಿಂಗ್ ಗೆ ಪಯಣಿಸುತ್ತಿದ್ದ MH370 ವಿಮಾನ ನಿಗೂಢವಾಗಿ ನಾಪತ್ತೆಯಾಯಿತು. ಇದುವರೆಗೂ ಆ ವಿಮಾನದ ಸುಳಿವು ಸಿಕ್ಕಿಲ್ಲ. ವಿವಿಧ ದೇಶಗಳು ಈ ವಿಮಾನ ಪತ್ತೆ ಕಾರ್ಯಕ್ಕೆ ಕೋಟ್ಯಾಂತರ ರುಪಾಯಿ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ.

  ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಪ್ರೇಕ್ಷಕರಲ್ಲಿ ಹಂತಹಂತಕ್ಕೂ ಕುತೂಹಲ ಕೆರಳಿಸುವಂತೆ ಚಿತ್ರಕಥೆಯನ್ನು ಸಿದ್ಧಮಾಡಿದ್ದಾರಂತೆ. ಶೀಘ್ರದಲ್ಲೇ ಈ ಚಿತ್ರಕ್ಕೆ ಸಂಬಂಧಿಸಿದ ಅಧಿಕೃತ ವಿವರಗಳು ಪ್ರಕಟವಾಗಲಿವೆ.

  ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಕಮಲ್ ಹಾಸನ್ ಈ ಚಿತ್ರದಲ್ಲಿ ಯಾವ ರೀತಿಯ ಪಾತ್ರ ಪೋಷಿಸಲಿದ್ದಾರೆ ಎಂಬುದು ಅಷ್ಟೇ ನಿಗೂಢವಾಗಿದೆ. ಇನ್ನೊಂದು ವಿಶೇಷ ಎಂದರೆ ಈ ಚಿತ್ರದ ಅಂತ್ಯ ಸಹ ಕುತೂಹಲಕಾರಿಯಾಗಿರುತ್ತದೆ ಎಂಬುದು.

  English summary
  Universal star Kamal Haasan is busy with series of films. Kamal starrers “Uttama Villain”, “Papanasam” and “Vishwaroopam”, which have all been wrapped up, are likely to hit the theatres soon.All these films are currently in post-production phase. According to the sources, Kamal’s next is based on the subject of mysterious disappearance of Malaysian Airlines MH 370.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X