twitter
    For Quick Alerts
    ALLOW NOTIFICATIONS  
    For Daily Alerts

    ಕಮಲ್ ಹಾಸನ್ ಅಭಿನಯದ ಕನ್ನಡ ಚಿತ್ರಗಳು

    By Rajendra
    |

    ಕಲಾವಿದನಿಗೆ ಭಾಷೆಯ ಹಂಗಿಲ್ಲ. ಈ ಮಾತು ನಟ ಕಮಲ್ ಹಾಸನ್ ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಹಾಗಾಗಿಯೇ ಅವರು ಯಾವುದೇ ಭಾಷೆಯಲ್ಲಿ ಅಭಿನಯಿಸಿದರೂ ಕಮಲ್ ಎಲ್ಲೂ ಕಾಣಸಿಗುವುದಿಲ್ಲ. ಅವರ ಪಾತ್ರಗಳು ಮಾತ್ರ ಮನಸ್ಸಿನ ಮೇಲೆ ಅಚ್ಚಳಿಯ ಮುದ್ರೆ ಒತ್ತುತ್ತವೆ.

    ಕಮಲ್ ಅವರು ಬಹುಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ತಮಿಳು ಹೊರತುಪಡಿಸಿದರೆ ಪ್ರಮುಖವಾಗಿ ಮಲಯಾಳಂ, ತೆಲುಗು, ಹಿಂದಿ ಹಾಗೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾಷೆಯ ಹಂಗು ಬೇಡ ಎಂದು ಮೂಕಿ ಚಿತ್ರಗಳಲ್ಲಿ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

    ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಸಿನಿಮಾ ಕ್ಷೇತ್ರದಲ್ಲಿ ಕಮಲ್ ಕೈ ಹಾಕದ ವಿಭಾಗವಿಲ್ಲ. ನಟ, ನಿರ್ದೇಶಕ, ಗಾಯಕ, ನಿರ್ಮಾಪಕ, ಗೀತ ಸಾಹಿತಿ, ಚಿತ್ರಕಥೆ, ಸಂಭಾಷಣೆ, ನೃತ್ಯ ಸಂಯೋಜಕೆ ಹೀಗೆ ಹಲವಾರು ಪ್ರಕಾರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದರು.

    ಕಮಲ್ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೆಲವು ಕನ್ನಡ ಚಿತ್ರಗಳಲ್ಲೂ ಅಭಿನಯಿಸಿ ಅಳಿಲುಸೇವೆ ಸಲ್ಲಿಸಿದ್ದಾರೆ. ಕಮಲ್ ಅಭಿನಯದ ಕನ್ನಡ ಸಿನಿಮಾ ವಿವರಗಳು ಸ್ಲೈಡ್ ಗಳಲ್ಲಿ...ಕಮಲ್ ಅಭಿನಯದ ಯಾವುದಾದರೂ ಕನ್ನಡ ಸಿನಿಮಾ ಬಿಟ್ಟು ಹೋಗಿದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ದಯವಿಟ್ಟು ತಿಳಿಸಿ.

    ಕಮಲ್ ಮೊಟ್ಟ ಮೊದಲ ಕನ್ನಡ ಸಿನಿಮಾ

    ಕಮಲ್ ಮೊಟ್ಟ ಮೊದಲ ಕನ್ನಡ ಸಿನಿಮಾ

    ಬಾಲು ಮಹೇಂದ್ರ ನಿರ್ದೇಶನದ ಈ ಚಿತ್ರ 1977ರಲ್ಲಿ ತೆರೆಕಂಡಿತು. ಮೋಹನ್, ರೋಜಾ ರಮಣಿ, ಶೋಭಾ ಉಳಿದ ಪಾತ್ರವರ್ಗದಲ್ಲಿದ್ದಾರೆ. ಇದೇ ಚಿತ್ರ ಹಿಂದಿ ಭಾಷೆಗೆ ಔರ್ ಏಕ್ ಪ್ರೇಮ್ ಕಹಾನಿ ಎಂಬ ಹೆಸರಲ್ಲಿ ರೀಮೇಕ್ ಆಯಿತು. ಈ ಚಿತ್ರದಲ್ಲಿ ಅಭಿನಯಿಸಬೇಕಾದರೆ ಕಮಲ್ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಆದರೂ ಅವರೇ ಡಬ್ ಮಾಡಿರುವುದು ವಿಶೇಷ. ಮೋಹನ್ ಅವರ ಚೊಚ್ಚಲ ಚಿತ್ರ. ಚೆನ್ನೈನಲ್ಲಿ 140 ದಿನಗಳ ಕಾಲ ಪ್ರದರ್ಶನ ಕಂಡ ಚಿತ್ರ.

    ಸೂಪರ್ ಸ್ಟಾರ್ ರಜನಿ ಜೊತೆ ತಪ್ಪಿದ ತಾಳ

    ಸೂಪರ್ ಸ್ಟಾರ್ ರಜನಿ ಜೊತೆ ತಪ್ಪಿದ ತಾಳ

    ಕೆ ಬಾಲಚಂದರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ 1978ರಲ್ಲಿ ತೆರೆಕಂಡಿತು. ಕಮಲ್ ಜೊತೆ ರಜನಿಕಾಂತ್, ಸರಿತಾ ಸಹ ಅಭಿನಯಿಸಿದ್ದಾರೆ. ಕತ್ತಿಗೆ ಸೈಕಲ್ ಚೈನ್ ಸುತ್ತಿಕೊಂಡ ದೇವು ಪಾತ್ರದಲ್ಲಿ ರಜನಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಕಮಲ್ ಅವರದು ಅತಿಥಿ ಪಾತ್ರ ಎಂಬುದು ವಿಶೇಷ.

    ಶ್ರೀಪ್ರಿಯಾ ಜೊತೆ ಮರಿಯಾ ಮೈ ಡಾರ್ಲಿಂಗ್

    ಶ್ರೀಪ್ರಿಯಾ ಜೊತೆ ಮರಿಯಾ ಮೈ ಡಾರ್ಲಿಂಗ್

    ಈ ಚಿತ್ರ ತೆರೆಕಂಡದ್ದು 1980ರಲ್ಲಿ. ಕಮಲ್ ಅವರಿಗೆ ಜೋಡಿಯಾಗಿ ಶ್ರೀಪ್ರಿಯಾ ಅಭಿನಯಿಸಿದ್ದಾರೆ. ದುರೈ ನಿರ್ದೇಶನದ ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ಸಂಯೋಜಿಸಿದ್ದಾರೆ.

    ಬಳಿಕ ಬಂದ ಬೆಂಕಿಯಲ್ಲಿ ಅರಳಿದ ಹೂವು

    ಬಳಿಕ ಬಂದ ಬೆಂಕಿಯಲ್ಲಿ ಅರಳಿದ ಹೂವು

    ಚಂದುಲಾಲ್ ಜೈನ್ ನಿರ್ದೇಶನದ ಈ ಚಿತ್ರ ತೆರೆಕಂಡದ್ದು 1983ರಲ್ಲಿ. ಕೆ ಬಾಲಚಂದರ್ ನಿರ್ಮಿಸಿ ಚಿತ್ರಕಥೆಯನ್ನೂ ರಚಿಸಿದ್ದಾರೆ. ಸುಹಾಸಿನಿ, ಪವಿತ್ರಾ, ಶರತ್ ಬಾಬು ಪಾತ್ರವರ್ಗದಲ್ಲಿದ್ದು ಎಂ.ಎಸ್.ವಿಶ್ವನಾಥನ್ ಸಂಗೀತ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಕಮಲ್ ಅವರದು ಅತಿಥಿ ಪಾತ್ರ. "ಮುಂದೆ ಬನ್ನಿ ಸ್ವಾಮಿ ಮುಂದೆ ಬನ್ನಿ..." ಎಂದು ಹಾಡುತ್ತಾ ಕಮಲ್ ಬಸ್ ಕಂಡಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ಚಿತ್ರದ ಮತ್ತೊಂದು ಜನಪ್ರಿಯ ಗೀತೆ "ತಾಳಿ ಕಟ್ಟುವ ಶುಭವೇಳೆ".

    ಎಲ್ಲಾ ಭಾಷೆಗೆ ಸಲ್ಲುವ ಪುಷ್ಪಕ ವಿಮಾನ

    ಎಲ್ಲಾ ಭಾಷೆಗೆ ಸಲ್ಲುವ ಪುಷ್ಪಕ ವಿಮಾನ

    ಈ ಚಿತ್ರವನ್ನು ಕನ್ನಡ ಚಿತ್ರದ ಪಟ್ಟಿಗೆ ಸೇರಿಸಲು ಮುಖ್ಯ ಕಾರಣ. ಇದನ್ನು ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಪಂಚತಾರಾ ಹೋಟೆಲ್ ನಲ್ಲಿ ಚಿತ್ರೀಕರಿಸಿರುವುದು ಒಂದು ಕಾರಣ. ಚಿತ್ರದಲ್ಲಿ ಲೋಕನಾಥ್, ಮನದೀಪ್ ರಾಯ್, ಟೀನು ಆನಂದ್ ಅಭಿನಯಿಸಿರುವುದು ಮತ್ತೊಂದು ಕಾರಣ. 1987ರಲ್ಲಿ ತೆರೆಕಂಡ ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಈ ಮೂಕಿ ಚಿತ್ರ ಬ್ಲ್ಯಾಕ್ ಬಸ್ಟರ್ ಚಿತ್ರ ಎನ್ನಿಸಿಕೊಂಡಿದೆ. ಅಂದಿನ ಕಾಲಕ್ಕೆ ರು.35 ಲಕ್ಷ ಬಜೆಟ್ ನಲ್ಲಿ ನಿರ್ಮಿಸಿದ ಚಿತ್ರವಿದು.

    ರಮೇಶ್ ಜೊತೆ ರಾಮ ಶಾಮ ಭಾಮ

    ರಮೇಶ್ ಜೊತೆ ರಾಮ ಶಾಮ ಭಾಮ

    ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ನಿರ್ಮಾಪಕ ಕೆ.ಮಂಜು. ಚಿತ್ರ ತೆರೆಕಂಡದ್ದು ಡಿಸೆಂಬರ್ 9, 2005. ತಮಿಳಿನ ಸತಿ ಲೀಲಾವತಿ ಚಿತ್ರದ ರೀಮೇಕ್. ಗುರುಕಿರಣ್ ಸಂಗೀತವಿರುವ ಚಿತ್ರದ ಪಾತ್ರವರ್ಗದಲ್ಲಿ ಶ್ರುತಿ, ಡೈಸಿ ಬೋಪಣ್ಣ, ಊರ್ವಶಿ, ಅನಿರುದ್ಧ್ ಅಭಿನಯಿಸಿದ್ದಾರೆ. 19 ವರ್ಷಗಳ ಬಳಿಕ ಕಮಲ್ ಅಭಿನಯ ಮತ್ತೊಂದು ಕನ್ನಡ ಚಿತ್ರ. ರಮೇಶ್ ನಿರ್ದೇಶನದ ಚೊಚ್ಚಲ ಚಿತ್ರ.

    English summary
    Kamal Haasan has worked in over 200 films, including over 170 as the main lead. He has acted in six Kannada films, Kokila, Benkiyalli Aralida Hoovu, Maria, My Darling, Pushpaka Vimana and Rama Shama Bhama. 
    Thursday, January 31, 2013, 18:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X