»   » ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ: ಕಮಲ್ ಹಾಸನ್ ಬೇಸರ.!

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ: ಕಮಲ್ ಹಾಸನ್ ಬೇಸರ.!

Posted By:
Subscribe to Filmibeat Kannada

ಸಿನಿಮಾ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗಿಸುವುದು ಕಡ್ಡಾಯ ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿತ್ತು. ಅದರ ಅನುಸಾರ ದೇಶದ ಎಲ್ಲ ಚಿತ್ರಮಂದಿರಗಳಲ್ಲೂ, ಎಲ್ಲ ಶೋಗಳಲ್ಲೂ ರಾಷ್ಟ್ರಗೀತೆ ಮೊಳಗಿಸಲಾಗುತ್ತಿದೆ.

ಆದ್ರೆ, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗುವಾಗ ಜನರು ಎದ್ದು ನಿಂತು ಗೌರವ ನೀಡುವುದಿಲ್ಲ ಎಂಬ ಆರೋಪ ಎಲ್ಲೆಡೆ ಚರ್ಚೆಯಾಗುತ್ತಿತ್ತು. ಇದೀಗ, ಈ ಬಗ್ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ''ಚಿತ್ರ ವೀಕ್ಷಣೆಗಾಗಿ ಚಿತ್ರಮಂದಿರಕ್ಕೆ ತೆರಳುವ ಪ್ರೇಕ್ಷಕರು ದೇಶಭಕ್ತಿ ತೋರಲು ಎದ್ದು ನಿಲ್ಲಬೇಕಿಲ್ಲ. ಅದನ್ನು ಕಡ್ಡಾಯ ಮಾಡುವುದು ಸರಿಯಲ್ಲ ಎಂದಿದೆ.

Kamal Haasan Tweet on national anthem in cinema halls

ಈ ಬಗ್ಗೆ ನಟ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದು, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗಿಸುವ ಬಗ್ಗೆ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಮಲ್ ಹಾಸನ್, ನಮ್ಮ ದೇಶಭಕ್ತಿಯನ್ನ ಒತ್ತಾಯವಾಗಿ ನಿರೂಪಿಸುವುದು ಬೇಡವೆಂದಿದ್ದಾರೆ.

ಕಮಲ್ ಹಾಸನ್ ಹೇಳಿದ್ದೇನು?

''ಸಿಂಗಪೂರ್‌ನಲ್ಲಿ ಪ್ರತಿನಿತ್ಯ ನಡುರಾತ್ರಿ ಅವರ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುತ್ತಾರೆ. ಅದೇ ರೀತಿ ದೂರದರ್ಶನದಲ್ಲೂ ಪ್ರಸಾರ ಮಾಡಿ. ಎಲ್ಲೆಂದರಲ್ಲಿ ನಮ್ಮ ದೇಶಭಕ್ತಿಯನ್ನು ನಿರೂಪಿಸಿಕೊಳ್ಳಬೇಕೆಂದು ಒತ್ತಾಯ ಮಾಡಬೇಡಿ'' - ಕಮಲ್ ಹಾಸನ್, ನಟ

English summary
Kamal Haasan tweet on national anthem in cinema halls: ‘Don’t force or test my patriotism at random places’.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X