»   » ವಿಶ್ವರೂಪಂ ಡಿಟಿಎಚ್ ಪ್ರಸಾರ ದಿನಾಂಕ ಬಹಿರಂಗ

ವಿಶ್ವರೂಪಂ ಡಿಟಿಎಚ್ ಪ್ರಸಾರ ದಿನಾಂಕ ಬಹಿರಂಗ

By: ಶಂಕರ್, ಚೆನ್ನೈ
Subscribe to Filmibeat Kannada

ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಇಷ್ಟೊತ್ತಿಗೆ ನಟ ಕಮಲ್ ಹಾಸನ್ ಅವರ ಭಾರಿ ಬಜೆಟ್ ಚಿತ್ರ 'ವಿಶ್ವರೂಪಂ' ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಡಿಟಿಎಚ್ ಪ್ರಸಾರಕ್ಕೆ ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಚಿತ್ರ ವಿವಾದಕ್ಕೆ ಗುರಿಯಾಯಿತು.

ಏಕಕಾಲಕ್ಕೆ ಚಿತ್ರಮಂದಿರ ಹಾಗೂ ಡಿಟಿಎಚ್ ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಹಲವು ವಾದ-ವಿವಾದ, ಚರ್ಚೆಗಳ ಬಳಿಕ ಜ.25ಕ್ಕೆ ತೆರೆಕಾಣುತ್ತಿದೆ. ಆದರೆ ಡಿಟಿಎಚ್ ಪ್ರಸಾರ ಯಾವಾಗ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.


'ವಿಶ್ವರೂಪಂ' ಚಿತ್ರ ಡಿಟಿಎಚ್ ನಲ್ಲಿ ಫೆಬ್ರವರಿ 2ಕ್ಕೆ ಬಿಡುಗಡೆಯಾಗುತ್ತಿದೆ. ಹಿಂದಿ, ತೆಲುಗು ಹಾಗೂ ತಮಿಳು ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ. ಡಿಟಿಎಚ್ ಪಾಲುದಾರರು ಯಾರು ಎಂಬುದನ್ನು ಶೀಘ್ರದಲ್ಲೇ ತಿಳಿಸುತ್ತೇನೆ ಎಂದಿದ್ದಾರೆ ಕಮಲ್.

ಈಗಾಗಲೆ ಡಿಟಿಎಚ್ ಸೇವೆಗಾಗಿ ಮುಂಗಡ ಹಣ್ಣ ಸಲ್ಲಿಸಿರುವವರಿಗೆ ಮರುಪಾವತಿ ಮಾಡಲಾಗಿದೆ. ಗ್ರಾಹಕರ ಕೋರಿಕೆಯ ಮೇರೆಗೆ ಅವರ ಹಣವನ್ನು ಹೊಂದಾಣಿಕೆ ಮಾಡುವುದು ಅಥವಾ ಅವರಿಗೆ ಹಿಂತಿರುಗಿಸುವ ವ್ಯವಸ್ಥೆಯನ್ನು ಡಿಟಿಎಚ್ ಸಂಸ್ಥೆಗಳ ಮೂಲಕ ಮಾಡಲಾಗಿದೆ ಎಂದಿದ್ದಾರೆ ಕಮಲ್.

ಸದಾ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವ ಕಮಲ್ ಹಾಸನ್ ಈಗ ತಮ್ಮ ಮಹತ್ವಾಕಾಂಕ್ಷಿ ಚಿತ್ರವನ್ನು ಡಿಟಿಎಚ್ ಮೂಲಕ ಇದೇ ಮೊದಲ ಬಾರಿಗೆ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸುಮಾರು ರು.120 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಮಲ್ ಹಾಸನ್ ಗೆ ಜೊತೆಯಾಗಿ ಪೂಜಾ ಕುಮಾರ್, ಉಪೇಂದ್ರ, ಆಂಡ್ರಿಯಾ ಜೆರೆಮಯ್ಯಾ, ರಾಹುಲ್ ಬೋಸ್, ಜೈದೀಪ್ ಅಹ್ಲಾವತ್ ಮುಂತಾದವರಿದ್ದಾರೆ.

English summary
The DTH release date of Kamal Haasan's Vishwaroopam has been put off to February 2. All three versions (Hindi, Tamil and Telugu) will be premiered on the same day, February 2.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada