»   » ಕಮಲ್ ಹಾಸನ್ 'ವಿಶ್ವರೂಪಂ 2' ಬಹುತೇಕ ಸಿದ್ಧ

ಕಮಲ್ ಹಾಸನ್ 'ವಿಶ್ವರೂಪಂ 2' ಬಹುತೇಕ ಸಿದ್ಧ

By: ಶಂಕರ್, ಚೆನ್ನೈ
Subscribe to Filmibeat Kannada
ಅರೆ ಇಸ್ಕಿ ಇನ್ನೂ 'ವಿಶ್ವರೂಪಂ' ಗುಂಗಿನಿಂದಲೇ ಪ್ರೇಕ್ಷಕರು ಹೊರಬಂದಿಲ್ಲ ಆಗಲೇ 'ವಿಶ್ವರೂಪಂ 2' ಸಿದ್ಧವಾಯ್ತಾ? 'ನಟ'ರಾಜ ಕಮಲ್ ಹಾಸನ್ ಅವರ ಸ್ಪೆಷಲ್ ಅಂದ್ರೆ ಇದೇ ರೀ. ಅವರ 'ವಿಶ್ವರೂಪಂ 2' ಚಿತ್ರ ಬಹುತೇಕ ಸಿದ್ಧವಾಗಿದೆ ಎಂಬ ನ್ಯೂಸ್ ಸೋರಿಕೆಯಾಗಿದೆ.

ಕಮಲ್ ಹಾಸನ್ ಅವರ ವಕ್ತಾರರ ಪ್ರಕಾರ, 'ವಿಶ್ವರೂಪಂ 2' ಚಿತ್ರ ಇನ್ನು ಕೇವಲ 15 ದಿನಗಳಲ್ಲಿ ಸಿದ್ಧವಾಗಲಿದೆ. ಆದರೆ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ. ಚಿತ್ರವನ್ನು ಯಾವಾಗ ಬಿಡುಗಡೆ ಮಾಡಬೇಕು ಎಂಬುದನ್ನು ಕಮಲ್ ನಿರ್ಧರಿಸುತ್ತಾರೆ ಎಂದಿದ್ದಾರೆ.

ಚಿತ್ರೀಕರಣ ಮುಗಿದ ಬಳಿಕ ನಿರ್ಮಾಣೇತರ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. 'ವಿಶ್ವರೂಪಂ' ಚಿತ್ರ ಬಿಡುಗಡೆಗೂ ಮುನ್ನವೇ ಭಾಗ 2ರ ಬಗ್ಗೆ ಕಮಲ್ ಪ್ಲಾನ್ ಮಾಡಿದ್ದರಂತೆ ಎಂಬ ಸ್ಫೋಟಕ ಸುದ್ದಿಯೂ ಇದರ ಬೆನ್ನಲ್ಲೇ ಬಂದಿದೆ. ಅದರಂತೆ ಈ ಚಿತ್ರ ಮೂಡಿಬರುತ್ತಿದೆ ಎನ್ನುತ್ತವೆ ಮೂಲಗಳು.

'ವಿಶ್ವರೂಪಂ' ಚಿತ್ರದಲ್ಲಿ ಅಭಿನಯಿಸಿದ್ದ ಪೂಜಾ ಕುಮಾರ್, ಆಂಡ್ರಿಯಾ ಹಾಗೂ ರಾಹುಲ್ ಬೋಸ್ ಭಾಗ 2ರಲ್ಲೂ ಇರುತ್ತಾರೆ. ಚಿತ್ರದಲ್ಲಿ ಹೊಸ ಪಾತ್ರವೊಂದು ಇರುತ್ತದೆ ಎನ್ನಲಾಗಿದ್ದು, ಸದ್ಯಕ್ಕೆ ಅದರ ಬಗ್ಗೆ ಕಮಲ್ ಆಗಲಿ ಚಿತ್ರತಂಡವಾಗಲಿ ತುಟಿಪಿಟಕ್ ಎಂದಿಲ್ಲ.

ಇನ್ನು 'ವಿಶ್ವರೂಪಂ 2' ಚಿತ್ರವನ್ನು ಡಿಟಿಎಚ್ ಮೂಲಕ ಬಿಡುಗಡೆ ಮಾಡುತ್ತಾರೋ ಅಥವಾ ನೇರವಾಗಿ ಥಿಯೇಟರ್ ನಲ್ಲೇ ರಿಲೀಸ್ ಮಾಡುತ್ತಾರೋ ಎಂಬ ಬಗ್ಗೆಯೂ ಇನ್ನೂ ತೀರ್ಮಾನಿಸಿಲ್ಲ. ರು.96 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ ವಿಶ್ವರೂಪಂ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ ರು.120 ಕೋಟಿ ಬಾಚಿತ್ತು. (ಏಜೆನ್ಸೀಸ್)

English summary
According to Kamal Haasan's spokesperson the shoot for Vishwaroopam 2 will be completed over the next 15 days. However release of the film Isn't decided yet. The original cast of Kamal, Pooja Kumar, Andrea and Rahul Bose will appear in the sequel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada