»   » 'ಪಿಕೆ' ಆಮೀರ್ ಆಗೋಕೆ ಓಕೆ ಅಂದವ್ರೆ ಕಮಲ್ ಹಾಸನ್

'ಪಿಕೆ' ಆಮೀರ್ ಆಗೋಕೆ ಓಕೆ ಅಂದವ್ರೆ ಕಮಲ್ ಹಾಸನ್

Posted By:
Subscribe to Filmibeat Kannada

ರಿಲೀಸ್ ಗೂ ಮುನ್ನ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿ, ಬಿಡುಗಡೆಯಾದಮೇಲೆ ವಿವಾದಗಳ ಕೇಂದ್ರ ಬಿಂದುವಾಗಿ ದೇಶಾದ್ಯಂತ ಸುದ್ದಿ ಮಾಡಿದ ಸಿನಿಮಾ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅಭಿನಯದ 'ಪಿಕೆ'.

'ಪಿಕೆ' ಬಗ್ಗೆ ಹಿಂದು ಸಂಘಟನೆಗಳು ಎಷ್ಟೇ ಛೀಮಾರಿ ಹಾಕಿದರೂ, ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದೆ. ಅದರ ರೀಮೇಕ್ ರೈಟ್ಸ್ ಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೀಗಿದ್ದರೂ, ಕೋಟಿಗಟ್ಟಲೆ ದುಡ್ಡು ಕೊಟ್ಟು ಕಾಲಿವುಡ್ ನ ಖ್ಯಾತ ಪ್ರೊಡಕ್ಷನ್ ಸಂಸ್ಥೆ 'ಜೆಮಿನಿ ಪ್ರೊಡಕ್ಷನ್ಸ್', 'ಪಿಕೆ' ರೀಮೇಕ್ ಹಕ್ಕುಗಳನ್ನ ತನ್ನದಾಗಿಸಿಕೊಂಡಿದೆ.

Kamal Hassan in Telugu-Tamil remake of PK

ತಮಿಳು ಮತ್ತು ತೆಲುಗಿನ ರೀಮೇಕ್ ರೈಟ್ಸ್ ಪಡೆದುಕೊಂಡಿರುವ ಸಂಸ್ಥೆ ಆಮೀರ್ ಜಾಗಕ್ಕೆ ಸಕಲಕಲಾವಲ್ಲಭ ಕಮಲ್ ಹಾಸನ್ ರನ್ನ ಫಿಕ್ಸ್ ಮಾಡಿದೆಯಂತೆ! ಹೌದು, ಕಾಲಿವುಡ್ ನಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಬಿಸಿ ಬಿಸಿ ಸುದ್ದಿ ಅಂದ್ರೆ ಇದೆ. 'ಪಿಕೆ' ರೀಮೇಕ್ ನಲ್ಲಿ ಕಮಲ್ ಹಾಸನ್ ಮಿಂಚಲಿದ್ದಾರೆ. [ಧೂಮ್ 3 ದಾಖಲೆ ಧೂಳಿಪಟ, ಪಿಕೆ 600+ ಕೋಟಿ ರು ಗಳಿಕೆ]

'ಪಿಕೆ' ಚಿತ್ರದ ತೆಲುಗು ಮತ್ತು ತಮಿಳು ಅವತರಣಿಕೆಯಲ್ಲಿ ನಟಿಸುವುದಕ್ಕೆ ಕಮಲ್ ಹಾಸನ್ ಓಕೆ ಅಂದಿದ್ದಾರಂತೆ. ಸದ್ಯಕ್ಕೆ ಕಮಲ್ ಹಾಸನ್ ಒಬ್ಬರು ಫೈನಲ್ ಆಗಿದ್ದು, ಬಾಕಿ ತಾರಾಬಳಗದ ಸೆಲೆಕ್ಷನ್ ನಡೆಯುತ್ತಿದೆ. [ಆಮೀರ್ ಖಾನ್ ಜಾಗ ತುಂಬುತ್ತಾರಾ ಪವನ್ ಕಲ್ಯಾಣ್?]

Kamal Hassan in Telugu-Tamil remake of PK

ಹಾಗೆ, ಚಿತ್ರವನ್ನ ಖ್ಯಾತ ನಿರ್ದೇಶಕರ ಕೈಲಿ ಆಕ್ಷನ್ ಕಟ್ ಹೇಳಿಸಬೇಕು ಅಂತಲೂ 'ಜೆಮಿನಿ ಪ್ರೊಡಕ್ಷನ್ಸ್' ನಿರ್ಧರಿಸಿದೆ. ಎಲ್ಲವೂ ಸರಾಗವಾಗಿ ನಡೆದರೆ, ಮೇ ಹೊತ್ತಿಗೆ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ 'ಪಿಕೆ' ಅಬ್ಬರ ಶುರುವಾಗಲಿದೆ. (ಏಜೆನ್ಸೀಸ್)

English summary
Latest buzz in Kollywood is that Gemini Productions has acquired the remake rights of Aamir Khan's PK. Sources have revealed that Kamal Hassan is roped in for the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada