»   » ಲಿಪ್ ಲಾಕ್ ದೃಶ್ಯಕ್ಕಾಗಿ ಸಿಗರೇಟು ಬಿಟ್ಟ ಕಮಲ್ ಹಾಸನ್

ಲಿಪ್ ಲಾಕ್ ದೃಶ್ಯಕ್ಕಾಗಿ ಸಿಗರೇಟು ಬಿಟ್ಟ ಕಮಲ್ ಹಾಸನ್

Posted By:
Subscribe to Filmibeat Kannada

ಅಂಟಿಸಿಕೊಂಡ ಚಟವನ್ನು ಬಿಡುವುದು ಎಷ್ಟು ಕಷ್ಟವೆಂದು ಚಟಕ್ಕೆ ಬಿದ್ದವರಿಗೇ ಗೊತ್ತು. ದಕ್ಷಿಣಭಾರತದ ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಸಿಗರೇಟಿಗೆ ಗುಡ್ ಬೈ ಹೇಳಲು ಪ್ರಮುಖ ಕಾರಣ ಯಾವುದು ಗೊತ್ತೇ ತಾನು ನಟಿಸುವ ಚಿತ್ರದಲ್ಲಿನ ಲಿಪ್ ಲಾಪ್ ದೃಶ್ಯಕ್ಕಾಗಿ.

ಇಂದು ಕಮಲ್ ಹಾಸನ್ ಅವರ 59ನೇ (ನ 7) ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಾ, ಅವರ ಚಿತ್ರಗಳಲ್ಲಿ ಹೆಚ್ಚಾಗಿ ಚುಂಬನ ದೃಶ್ಯಗಳಿರುವುದು ಮಾಮೂಲು ಎನ್ನುವುದು ಎಲ್ಲಾ ಸಿನಿಪ್ರಿಯರಿಗೆ ತಿಳಿದಿರುವ ವಿಚಾರ. ತನ್ನ ಹನ್ನೊಂದನೇ ವಯಸ್ಸಿನಲ್ಲಿ ಸಿಗರೇಟಿನ ದಾಸನಾಗಿದ್ದ ಕಮಲ್ ಹಾಸನ್ ಸಿಗರೇಟಿಗೆ ಗುಡ್ ಬೈ ಹೇಳಲು ಪ್ರಮುಖ ಕಾರಣಗಳಲ್ಲಿ ಲಿಪ್ ಲಾಕ್ ಸೀನುಗಳೂ ಒಂದಂತೆ.

ತನ್ನ ಮಹತ್ವಾಕಾಂಕ್ಷೆಯ ವಿಶ್ವರೂಪಂ 2 ಚಿತ್ರದ ಬಿಡುಗಡೆಯ ತಯಾರಿಯಲ್ಲಿರುವ ಕಮಲ್ ಪತ್ರಕರ್ತರ ಜೊತೆಗೆ ಮಾತನಾಡುತ್ತಾ, ಶೂಟಿಂಗ್ ವೇಳೆ ಸಂಜೆಯ ಸುಮಾರಿಗೆ ಲಿಪ್ ಲಾಕ್ ಸನ್ನಿವೇಶಗಳು ಇರುತ್ತಿದ್ದವು.

ನಾವು ಬೆಳಗ್ಗೆಯಿಂದ ಕಾಫಿ, ಸಿಗರೇಟು ಸೇದಿ ನಂತರ ಅಂತಹ ಸನ್ನಿವೇಶಗಳಲ್ಲಿ ಭಾಗವಹಿಸಿದರೆ ನಾಯಕಿಗೆ ಎಷ್ಟು ತೊಂದರೆಯಾಗ ಬೇಡ ಎಂದು ನಂತರದ ದಿನಗಳಲ್ಲಿ ಅರಿತೆ. ಹಾಗಾಗಿ ಸಿಗರೇಟು ಬಿಡಲು ಲಿಪ್ ಲಾಪ್ ದೃಶ್ಯಗಳೂ ಪ್ರಮುಖ ಕಾರಣ ಎಂದು ಕಮಲ್ ಹಾಸನ್ ಹೇಳುತ್ತಾರೆ.

ತಾನು ಸಿಗರೇಟು ಬಿಟ್ಟಿದ್ದಲ್ಲದೇ ಕಮಲ್ ಹಾಸನ್ ತನ್ನ ಅಭಿಮಾನಿಗಳಿಗೆ ಮತ್ತು ಯುವ ಜನತೆಗೆ 'ಸಿಗರೇಟು ಸೇದಬೇಡಿ, ಇದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ, ಜೊತೆಗೆ ಸಿಗರೇಟು ಬಿಡುವುದರಿಂದ ನಿಮ್ಮ ಗರ್ಲ್ ಫ್ರೆಂಡ್, ಪತ್ನಿಗೂ ತೊಂದರೆಯಾಗುವುದಿಲ್ಲ' ಎನ್ನುವ ಸಂದೇಶವನ್ನು ನೀಡಿದ್ದಾರೆ.

ಕಮಲ್ ಹಾಸನ್ ಅವರ ವಿಶ್ವರೂಪಂ, ಹೇ ರಾಮ್, ದ್ರೋಹಿ ಚಿತ್ರಗಳಲ್ಲೂ ಲಿಪ್ ಲಾಕ್ ಸೀನುಗಳು ಪಡ್ಡೆಗಳನ್ನು ರಂಜಿಸಿದ್ದವು. ಬಹು ನಿರೀಕ್ಷಿತ ವಿಶ್ವರೂಪಂ 2 ಚಿತ್ರದಲ್ಲೂ ಪೂಜಾ ಕುಮಾರ್ ಜೊತೆ ಲಿಪ್ ಲಾಕ್ ಸೀನುಗಳಿವೆ ಎನ್ನುವ ಸುದ್ದಿಯಿದೆ.

ಹೇ ರಾಮ್

ಹಿಂದಿ ಮತ್ತು ತಮಿಳಿನಲ್ಲಿ ಫೆಬ್ರವರಿ 2000ರಲ್ಲಿ ಬಿಡುಗಡೆಯಾಗಿದ್ದ ಹೇ ರಾಮ್ ಚಿತ್ರದಲ್ಲಿ ಕಮಲ್, ಶಾರೂಖ್, ರಾಣಿ ಮುಖರ್ಜಿ, ಗಿರೀಶ್ ಕಾರ್ನಾಡ್ ಪ್ರಮುಖ ಭೂಮಿಕೆಯಲ್ಲಿದ್ದರು. ಕಮಲ್ ಹಾಸನ್ ನಿರ್ಮಿಸಿದ್ದ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದರು.

ರಾಣಿ ಮುಖರ್ಜಿ

ಹೇ ರಾಮ್ ಚಿತ್ರ ಅಷ್ಟೇನೂ ಬಾಕ್ಸಾಫೀಸ್ ನಲ್ಲಿ ಯಶಸ್ಸು ಕಂಡಿರಲಿಲ್ಲ. ಚಿತ್ರಕ್ಕೆ ಕಮಲ್ ಆರಿಸಿದ್ದ ಕಥೆ ಕುತೂಹಲಕಾರಿ ಆಗಿದ್ದರೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ವಿಫಲವಾಗಿತ್ತು. ಆದರೆ ಕಮಲ್ ಹಾಸನ್ ಚಿತ್ರದ ಸನ್ನಿವೇಶವೊಂದರಲ್ಲಿ ರಾಣಿ ಮುಖರ್ಜಿ ಜೊತೆಗಿನ ಲಿಪ್ ಲಾಕ್ ಸನ್ನಿವೇಶಗಳು ಭಾರೀ ಸುದ್ದಿಯಾಗಿದ್ದವು.

ದ್ರೋಹಿ

1996ರಲ್ಲಿ ಬಿಡುಗಡೆಯಾಗಿದ್ದ ತೆಲುಗು ಚಿತ್ರ 'ದ್ರೋಹಿ' ಯಲ್ಲೂ ಕಮಲ್ ಹಾಸನ್ ಗೌತಮಿ ಜೊತೆ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅರ್ಜುನ್ ಸರ್ಜಾ, ಕಮಲ್ ಹಾಸನ್, ಗೌತಮಿ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಶ್ರೀರಾಂ ರಾಘವನ್ ನಿರ್ದೇಶಿಸಿದ್ದರು.

ವಿಶ್ವರೂಪಂ

ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಡಿಟಿಎಚ್ ನಲ್ಲಿ ಬಿಡುಗಡೆಗೊಳಿಸುವ ಕಮಲ್ ಹಾಸನ್ ನಿರ್ಧಾರದಿಂದ ವಿವಾದಕ್ಕೆ ಗುರಿಯಾಗಿತ್ತು. ಜನವರಿ 2013ರಲ್ಲಿ ಬಿಡುಗಡೆಯಾದ ಚಿತ್ರ ವಿವಿಧ ಕಾರಣಗಳಿಂದ ಬಿಡುಗಡೆಯಾದ ನಂತರವೂ ವಿವಾದಕ್ಕೆ ಈಡಾಗಿತ್ತು.

ವಿಶ್ವರೂಪಂ 2

ಬರುವ ವರ್ಷ ಜನವರಿಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ವಿಶ್ವರೂಪಂ 2 ಚಿತ್ರದಲ್ಲಿ ಕಮಲ್ ಹಾಸನ್, ರಾಹುಲ್ ಬೋಸ್, ವಹಿದಾ ರೆಹಮಾನ್, ಪೂಜಾ ಕುಮಾರ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದಲ್ಲೂ ನಾಯಕಿ ಪೂಜಾ ಕುಮಾರ್ ಜೊತೆ ಕಮಲ್ ಹಾಸನ್ ಅವರ ಲಿಪ್ ಲಾಕ್ ಸನ್ನಿವೇಶಗಳಿವೆ.

English summary
Southern Super Star Kamal Hassan quit smoking mainly for lip lock scenes. Kamal also urged youngsters to quit smoking atleast for their girl friends and wifes.
Please Wait while comments are loading...