»   » ಕಮಲ್ 'ಉತ್ತಮ ವಿಲನ್' ಕನ್ನಡಕ್ಕೆ ರೀಮೇಕ್ ಆಗುತ್ತಾ?

ಕಮಲ್ 'ಉತ್ತಮ ವಿಲನ್' ಕನ್ನಡಕ್ಕೆ ರೀಮೇಕ್ ಆಗುತ್ತಾ?

Posted By:
Subscribe to Filmibeat Kannada

ಕಮಲ್ ಹಾಸನ್ ಅವರ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಬೆಳ್ಳಿಚುಕ್ಕಿಯಂತೆ ವಿಹರಿಸಲು ಸಿದ್ಧವಾಗಿದ್ದಾರೆ. ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಿರುವ ಉತ್ತಮ ವಿಲನ್ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದ ತೆಲುಗು, ತಮಿಳು ಭಾಷೆಗಳಲ್ಲಿ ತೆರೆಕಾಣುತ್ತಿದೆ.

ಕನ್ನಡಿಗರೇ ಆಗಿರುವ ರಮೇಶ್ ಅರವಿಂದ್ ಚಿತ್ರ ಕನ್ನಡದಲ್ಲೂ ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ರಮೇಶ್ ಹಾಗೂ ಕಮಲ್ ಅಭಿಮಾನಿಗಳು ಹಂಬಲಿಸುತ್ತಿದ್ದಾರೆ. ಬಹುಶಃ ಅವರ ಆಸೆ ಈಡೇರುವ ದಿನಗಳು ದೂರದಲ್ಲಿಲ್ಲ. [ರಮೇಶ್-ಕಮಲ್ ಜೋಡಿಯ 'ಉತ್ತಮ ವಿಲನ್' ಟ್ರೇಲರ್]

ತೆಲುಗು ಉತ್ತಮ ವಿಲನ್ ಚಿತ್ರ ಏಪ್ರಿಲ್ 10ಕ್ಕೆ ತೆರೆಕಾಣುತ್ತಿದೆ. ಟಾಲಿವುಡ್ ನಿರ್ಮಾಪಕ ಸಿ ಕಲ್ಯಾಣ್ ಎಂಬುವವರು ತಮಿಳು ಆವೃತ್ತಿಯ ಡಬ್ಬಿಂಗ್ ಹಕ್ಕುಗಳನ್ನು ಪಡೆದಿದ್ದು, ಚಿತ್ರವನ್ನು ಏ.10ರಂದು ಬಿಡುಗಡೆ ಮಾಡುತ್ತಿದ್ದಾರೆ. ಆ ಬಳಿಕ ತಮಿಳು ಚಿತ್ರ ರಿಲೀಸ್ ಆಗಲಿದೆ.

Kamal Hassan's Uttama Villain to remade in Kannada?

ಕನ್ನಡದಲ್ಲಿ ಉತ್ತಮ ವಿಲನ್ ಚಿತ್ರ ಬಿಡುಗಡೆಯಾಗುತ್ತದೆಯೇ ಎಂಬ ಪ್ರಶ್ನೆ ಸದ್ಯಕ್ಕೆ ಪ್ರಶ್ನೆಯಾಗಿಯೇ ಇದೆ. ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳನ್ನು ನಿಷೇಧಿಸಿರುವ ಕಾರಣ ರಿಮೇಕ್ ಒಂದೇ ಈಗ ಉಳಿದಿರುವ ದಾರಿ. ಮುಂದೊಂದು ದಿನ 'ಉತ್ತಮ ವಿಲನ್' ರೀಮೇಕ್ ಆಗಲಿ ಎಂಬುದೇ ಚಿತ್ರಾಭಿಮಾನಿಗಳ ಒತ್ತಾಸೆ.

ಉತ್ತಮ ವಿಲನ್ ಚಿತ್ರದಲ್ಲಿ ಕಮಲ್ ಅವರು ಎರಡು ಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟನಾಗಿ ಅವರದು ಎರಡು ಭಿನ್ನ ಪಾತ್ರಗಳು. ಇನ್ನೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ಕಮಲ್ ಅವರು ಕೇವಲ ನಟನೆಗಷ್ಟೇ ಸೀಮಿತವಾಗದೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಬರೆದಿರುವುದು.

ಸ್ವತಃ ಈ ವಿಷಯವನ್ನು ರಮೇಶ್ ಅರವಿಂದ್ ಅವರು ಬಹಿರಂಗಪಡಿಸಿದ್ದಾರೆ. ಎಂಟನೇ ಶತಮಾನದಲ್ಲಿದ್ದ ಉತ್ತಮನ್ ಎಂಬ ರಂಗಭೂಮಿ ಕಲಾವಿದನ ಹಾಗೂ 21ನೇ ಶತಮಾನಕ್ಕೆ ಸೇರಿದ ಮನೋರಂಜನ್ ಎಂಬ ಸಿನಿಮಾ ಸೂಪರ್ ಸ್ಟಾರ್ ಪಾತ್ರಗಳಲ್ಲಿ ಕಮಲ್ ಕಾಣಿಸಲಿದ್ದಾರೆ.

ಈ ಎರಡೂ ಪಾತ್ರಗಳಲ್ಲಿ ಕಮಲ್ ಹಾಸನ್ ಪ್ರೇಕ್ಷಕರನ್ನು ಮೈಮರೆಸಲಿದ್ದಾರೆ. ಕಮಲ್ ಜೊತೆಗೆ ದಕ್ಷಿಣ ಭಾರತದ ಇನ್ನೂ ನಾಲ್ಕು ಮಂದಿ ಜನಪ್ರಿಯ ಹೀರೋಗಳು ಚಿತ್ರದಲ್ಲಿರುವುದು ವಿಶೇಷ. ಖ್ಯಾತ ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕೆ ಬಾಲಚಂದರ್ ಸಹ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್)

English summary
Kannada release of 'Uttama Villain' movie really on the cards? The film features an ensemble cast that includes Kamal Hassan, Jayaram, Andrea Jeremiah, Pooja Kumar, Nassar, Parvathi, Parvathy Nair and Urvashi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada