For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಕಾಲಾ ?

  By Pavithra
  |

  ರಜನಿಕಾಂತ್ ಅಭಿನಯದ ಕಾಲಾ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಬೆಂಗಳೂರಿನ ಹಲವಾರು ಮಲ್ಟಿಫ್ಲೆಕ್ಸ್ ಹಾಗೂ ಚಿತ್ರಮಂದಿರಗಳಿಗೆ ಭೇಟಿ ನೀಡಿ ಸಿನಿಮಾ ಪ್ರದರ್ಶನ ಮಾಡದಂತೆ ಮನವಿ ಮಾಡುತ್ತಿದ್ದಾರೆ. ಆದರೆ ಕನ್ನಡ ಸಿನಿಮಾರಂಗದಲ್ಲಿ ಹಿರಿಯ ನಿರ್ಮಾಪಕ ಹಾಗೂ ವಿತರಕರಾಗಿರುವ ಕನಕಪುರ ಶ್ರೀನಿವಾಸ್ ಕಾಲಾ ಚಿತ್ರದ ಪ್ರದರ್ಶನದ ಹಕ್ಕನ್ನು ಖರೀದಿ ಮಾಡಿದ್ದು ಪ್ರದರ್ಶನ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

  ಈ ಬಗ್ಗೆ ಕನಕಪುರ ಶ್ರೀನಿವಾಸ್ ಅವರನ್ನ ಕೇಳಿದರೆ ಹೌದು ನಾನು ಕರ್ನಾಟಕದಲ್ಲಿ ಕಾಲಾ ಚಿತ್ರದ ಪ್ರದರ್ಶನದ ಹಕ್ಕನ್ನು ಖರೀದಿ ಮಾಡಿದ್ದೇನೆ. ಚಿತ್ರದ ಯಾವ ಯಾವ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತದೆ ಎಂದು ಇನ್ನು ನಿರ್ಧಾರ ಮಾಡಿಲ್ಲ ಹತ್ತು ಚಿತ್ರದಲ್ಲಾದರೂ ಬಿಡುಗಡೆ ಆಗಬಹುದು ನೂರು ಚಿತ್ರಮಂದಿರದಲ್ಲಾದರೂ ಪ್ರದರ್ಶನವಾಗಬಹುದು. ಚಿತ್ರಮಂದಿರದ ಮಾಲೀಕರು ನನ್ನ ಬಳಿ ಉತ್ತಮ ಬಾಂದವ್ಯ ಹೊಂದಿರುವುದರಿಂದ ಸಿನಿಮಾ ಬಿಡುಗಡೆ ಆಗುತ್ತೆ. ಎಂದಿದ್ದಾರೆ.

  'ಕಾಲಾ' ಬಿಡುಗಡೆ ಮಾಡದಿರುವುದೇ ಸೂಕ್ತ: ಸಿಎಂ ಕುಮಾರಸ್ವಾಮಿ'ಕಾಲಾ' ಬಿಡುಗಡೆ ಮಾಡದಿರುವುದೇ ಸೂಕ್ತ: ಸಿಎಂ ಕುಮಾರಸ್ವಾಮಿ

  ಈ ಹಿಂದೆ ಭಜರಂಗಿ ಬಾಯಿಜಾನ್, ಬಾಹುಬಲಿ ಚಿತ್ರವನ್ನ ರಾಜ್ಯದಲ್ಲಿ ಬಿಡುಗಡೆ ಮಾಡಿ ಯಶಸ್ಸು ಗಳಿಸಿದ್ದರು ಕನಕಪುರ ಶ್ರೀನಿವಾಸ್. ಲೈಕಾ ಪ್ರೊಡಕ್ಷನ್ಸ್ ಅವರೇ ಕರ್ನಾಟಕದಲ್ಲಿಯೂ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿ ಸಾಕಷ್ಟು ವಿತರಕರನ್ನು ಚಿತ್ರ ರಿಲೀಸ್ ಮಾಡಲು ಮುಂದಾಗಿದ್ದರು. ನಂತರ ರಾಕ್ ಲೈನ್ ವೆಂಕಟೇಶ್ ಚಿತ್ರವನ್ನ ಬಿಡುಗಡೆ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಅದೆಲ್ಲಾ ವಿಚಾರಕ್ಕೂ ತೆರೆ ಬಿದ್ದು ಸದ್ಯ ಕನಕಪುರ ಶ್ರೀನಿವಾಸ್ ಚಿತ್ರವನ್ನ ರಿಲೀಸ್ ಮಾಡಲಿದ್ದಾರೆ.

  ಇನ್ನು ಕರ್ನಾಟಕದ ಚಿತ್ರಮಂದಿರ ಮಾಲೀಕರಿಗೆ ಕಾಲಾ ಚಿತ್ರ ಬಿಡುಗಡೆ ಮಾಡಲು ಮನಸ್ಸಿದ್ದರೂ ಕೂಡ ಕನ್ನಡ ಪರ ಸಂಘಟನೆಕಾರರಿಂದ ಗಲಾಟೆಗಳಾಗುವ ಭಯ ಹೆಚ್ಚಾಗಿ ಕಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಊರ್ವಶಿ ಚಿತ್ರಮಂದಿರದಲ್ಲಿಯೂ ನಾಳೆ ಜುರಾಸಿಕ್ ವರ್ಲ್ಡ್ ಹಾಗೂ ಫಾಲನ್ ಕಿಂಗ್ಡಮ್ ಚಿತ್ರ ಪ್ರದರ್ಶನ ಮಾಡಲು ತಯಾರಿ ಮಾಡಿಕೊಂಡಿದ್ದಾರಂತೆ.

  English summary
  Leading producer and distributor Kanakapura Srinivas is set to release Kaala in Karnataka despite facing threats from pro-Kannada groups, which have called for a ban on the film over Rajinikanth's pro-Tamil Nadu stand in the Cauvery issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X