twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ವಿರುದ್ಧ ಮತ್ತೆ ಗುಡುಗಿದ ವಾಟಾಳ್ ನಾಗರಾಜ್: ಡಬ್ಬಿಂಗ್ ಪರ ಹೋರಾಟಗಾರರ ಆಕ್ರೋಶ

    |

    ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಕಾರ್ಯಕ್ರಮಗಳ ಪ್ರಸಾರ ಆರಂಭವಾಗಿದೆ. ತೆಲುಗು, ತಮಿಳು ಸಿನಿಮಾಗಳ ಕನ್ನಡ ಅವರಣಿಕೆಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿವೆ. ಟಿಆರ್‌ಪಿ ರೇಟಿಂಗ್‌ಗಳೂ ಚೆನ್ನಾಗಿ ಬಂದಿವೆ. ಅದರ ಜತೆಯಲ್ಲಿ ಕಿರುತೆರೆ ಧಾರಾವಾಹಿಗಳೂ ಕನ್ನಡಕ್ಕೆ ಡಬ್ ಆಗುತ್ತಿವೆ. 'ಮಾಲ್ಗುಡಿ ಡೇಸ್' ಮತ್ತು 'ಮಹಾಭಾರತ' ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಸೋಮವಾರದಿಂದ ಪ್ರಸಾರವಾಗುತ್ತಿವೆ.

    Recommended Video

    Love Mocktail behind the scenes also has tears | Darling krishna | Milana Nagraj

    ಡಬ್ಬಿಂಗ್ ತಡೆಯುವ ಪ್ರಯತ್ನಗಳು ಕಾನೂನಿಗೆ ವಿರುದ್ಧ ಎಂದು ಈಗಾಗಲೇ ನ್ಯಾಯಾಲಯ ಹೇಳಿದೆ. ಆದರೆ ಕನ್ನಡದಲ್ಲಿ ಡಬ್ಬಿಂಗ್ ತಡೆಯುವ ಚಟುವಟಿಕೆಗಳು ನಡೆವುದು ನಿಂತಿಲ್ಲ ಎಂದು ಡಬ್ಬಿಂಗ್ ಪರ ಹೋರಾಟಗಾರರು ಆರೋಪಿಸುತ್ತಿದ್ದಾರೆ. ಈ ನಡುವೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತೊಮ್ಮೆ ಡಬ್ಬಿಂಗ್ ವಿರುದ್ಧ ಗುಡುಗಿದ್ದಾರೆ. ಮುಂದೆ ಓದಿ...

    ಡಬ್ ಮಾಡೋದು ಒಳ್ಳೇದಲ್ಲ!

    ತಮಿಳು ಫಿಲಂ ಕನ್ನಡಕ್ಕೆ ಡಬ್ ಆಗುವುದ ಸರಿಯಲ್ಲ. ಕನ್ನಡ ಭಾಷೆ ನಾಡಿಗೆ ಅಗೌರವ ಆಗುತ್ತೆ. ಈ ನೀತಿಯನ್ನು ನಾವು ಪ್ರಾಮಾಣಿಕವಾಗಿ ಒಪ್ಪುತ್ತಿಲ್ಲ. ಇದು ಒಳ್ಳೆ ಸೂಚನೆಯಲ್ಲ. ಎಚ್ಚರಿಕೆ ಕೊಡುತ್ತಿದ್ದೇವೆ. ಡಬ್ ಮಾಡಲು ಹೋಗಬೇಡಿ. ಒಳ್ಳೆಯದಲ್ಲ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಡಬ್ಬಿಂಗ್ ಹೋರಾಟಕ್ಕೆ ಮತ್ತೊಂದು ಜಯ: ಕನ್ನಡದಲ್ಲಿ 'ಮಹಾಭಾರತ' ಪ್ರಸಾರ ಖಚಿತಡಬ್ಬಿಂಗ್ ಹೋರಾಟಕ್ಕೆ ಮತ್ತೊಂದು ಜಯ: ಕನ್ನಡದಲ್ಲಿ 'ಮಹಾಭಾರತ' ಪ್ರಸಾರ ಖಚಿತ

    ಕೋರ್ಟ್ ಆದೇಶದ ಉಲ್ಲಂಘನೆ

    ಕೋರ್ಟ್ ಆದೇಶದ ಉಲ್ಲಂಘನೆ

    ವಾಟಾಳ್ ನಾಗರಾಜ್ ಅವರ ಎಚ್ಚರಿಕೆಗೆ ಡಬ್ಬಿಂಗ್ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವಿರೋಧದ ಮೂಲಕ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಅವರು ಮತ್ತೆ ಏನಾದರೂ ಪ್ರಯತ್ನಿಸಿದರೆ ಕೋರ್ಟ್ ಆದೇಶದ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರತಿ ಎಚ್ಚರಿಕೆ ನೀಡಲಾಗಿದೆ.

    ಕನ್ನಡತನ ಏನು ಮಾಡ್ತಿತ್ತು?

    ಕನ್ನಡತನ ಏನು ಮಾಡ್ತಿತ್ತು?

    ಕನ್ನಡ ಚಾನೆಲ್ ಒಂದರಲ್ಲಿ ಇಡೀ ಒಂದು ವಾರ ಇಂಗ್ಲಿಷ್ ಚಿತ್ರಗಳು ಪ್ರಸಾರವಾಗುವಾಗ ನೀವು ಏನ್ ಮಾಡ್ತಿದ್ರಿ? ಆವಾಗ ನಿಮ್ಮ ಕನ್ನಡತನ ಏನ್ ಮಾಡ್ತಾ ಇತ್ತು ಸಾರ್? ಅದನ್ನೇ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದಾಕ್ಷಣ ದಿಢೀರನೆ ಎದ್ದು ಕುಂತುಬಿಟ್ಟಿತೆ? ಯಾವುದು ಕನ್ನಡಪರ ಅಂತ ನಿಮ್ಗೆ ಹೇಳುವಷ್ಟು ನಾವು ದೊಡ್ಡವರಲ್ಲ- ಶುಕಮುನಿ

    'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರ: ದಿನಾಂಕ ಮತ್ತು ಸಮಯದ ವಿವರ'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರ: ದಿನಾಂಕ ಮತ್ತು ಸಮಯದ ವಿವರ

    ಕನ್ನಡಿಗರಿಗೆ ಬಿಟ್ಟಿದ್ದು

    ಕನ್ನಡಿಗರಿಗೆ ಬಿಟ್ಟಿದ್ದು

    ಮತ್ತೊಂದು ಸಲ ದಂಡ ಕಟ್ಟೋದಕ್ಕೆ ಸಿದ್ಧರಾಗಿ. ಡಬ್ಬಿಂಗ್ ಬೇಕೋ ಬೇಡ್ವೋ ನಿರ್ದರಿಸೋರು ನೀವಲ್ಲ, ಕನ್ನಡಿಗರು. ಡಬ್ಬಿಂಗ್ ಚಿತ್ರ ನೋಡೋದು ಬಿಡೋದು ಕನ್ನಡಿಗರಿಗೆ ಬಿಟ್ಟದ್ದು. ಡಬ್ಬಿಂಗ್ ಚಿತ್ರ ತಡೆಯೋದು ಕಾನೂನು ವಿರುದ್ಧ- ನವೀನ್

    ಪರಭಾಷಿಗರೂ ನೋಡಲಿ

    ಪರಭಾಷಿಗರೂ ನೋಡಲಿ

    ನಾಗರಾಜ್ ಅವರೇ, ಸೀಮಿತ ಕೆಲವೇ ಕೇಂದ್ರಗಳಲ್ಲಿ ಪರಭಾಷೆ ಬಿಡುಗಡೆ ಎಂಬ ನಿಯಮಾವಳಿ ಎಲ್ಲಿ ಹೋಯಿತು? ಬಾಹುಬಲಿ ಚಿತ್ರ ಕರ್ನಾಟಕದಲ್ಲಿ ತೆಲುಗು, ತಮಿಳ್, ಮಲಯಾಳಿ, ಹಿಂದಿ ಜನರು ತಮ್ಮ ಭಾಷೆಯಲ್ಲಿ ನೋಡಿದರೆ ಕನ್ನಡಿಗರು ಕನ್ನಡ ಭಾಷೆಯಲ್ಲಿ ಯಾಕೆ ನೋಡಬಾರದು? ಕನ್ನಡಿಗರು ಅಷ್ಟೇಯಲ್ಲ, ಪರಭಾಷಿಗರು ಕನ್ನಡದಲ್ಲಿ ನೋಡಲಿ... ಅದುವೇ ಕನ್ನಡ ಪರ- ಅನಂತ

    ಹಿಂದಿ ಟೆಲಿವಿಷನ್‌ನಲ್ಲಿಯೂ ದಾಖಲೆ ನಿರ್ಮಿಸಿದ ಕನ್ನಡದ ಕೆಜಿಎಫ್-1ಹಿಂದಿ ಟೆಲಿವಿಷನ್‌ನಲ್ಲಿಯೂ ದಾಖಲೆ ನಿರ್ಮಿಸಿದ ಕನ್ನಡದ ಕೆಜಿಎಫ್-1

    ಆಗ ನೀವು ಏನೂ ಹೇಳಿಲ್ಲ

    ಆಗ ನೀವು ಏನೂ ಹೇಳಿಲ್ಲ

    ಇಲ್ಲ ಸರ್ ಡಬ್ಬಿಂಗ್ ಸಿನಿಮಾ ಇನ್ನೂ ಹೆಚ್ಹೆಚ್ಚಾಗಿ ಬರಬೇಕು. ಚಿತ್ರವನ್ನು ಕನ್ನಡ ಭಾಷೆಯಲ್ಲಿ ನೋಡುವುದು ತಪ್ಪಾ? ಇದೇ ಫಿಲಂ ತಮಿಳಿನಲ್ಲಿ ಇಡೀ ಬೆಂಗಳೂರಲ್ಲಿ ರಿಲೀಸ್ ಆದಾಗ ನೀವು ಏನು ಹೇಳಲಿಲ್ಲ! ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಭಾಷೆಯ ಬೆಳವಣಿಗೆ ಆಗುತ್ತದೆ. ಮೊದಲು ತಮಿಳು/ತೆಲುಗು/ಮಲೆಯಾಳಂ ಫಿಲಂಗಳನ್ನು ಇಲ್ಲಿ ರಿಲೀಸ್ ಆಗದಂತೆ ತಡೆಯಿರಿ!- ರಾಘವೇಂದ್ರ ಎಸ್ ರಾವ್

    ನಂಬರ್ ಒನ್ ಆಗಿದೆ

    ನಂಬರ್ ಒನ್ ಆಗಿದೆ

    ಯಾರ್ರೀ ನೀವೂ? ಕನ್ನಡಿಗರೆ ಒಪ್ಪಿಕೊಂಡು ಸಿನೆಮಾವನ್ನು ನೋಡಿ ಚಾನೆಲ್ ಅನ್ನು ನಂಬರ್ ಒಂದನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ.. ಇದರ ಮಧ್ಯೆ ಮಾತಾಡೊಕೆ ನೀವ್ಯಾರು?.. ತಮಿಳು, ತೆಲುಗು ಸಿನೆಮಾವನ್ನು ನೇರವಾಗಿ 300+ ಥಿಯೇಟರ್ ಅಲ್ಲಿ ಪ್ರಸಾರ ಮಾಡಿದಾಗ ತೆಪ್ಪಗೆ ಇತ್ತಿರ.. ಇದು ಕನ್ನಡಿಗರ ಆಯ್ಕೆ ಇಷ್ಟ ಇದ್ದರೆ ನೋಡ್ತಾರೆ- ಪ್ರಕಾಶ್ ನಾಯ್ಕ್

    ಡಬ್ಬಿಂಗ್ ಒಂದು ಸಾಧನ

    ಡಬ್ಬಿಂಗ್ ಒಂದು ಸಾಧನ

    ನಿಮ್ಮ ಹೇಳಿಕೆನೇ ಸ್ಪಷ್ಟವಾಗಿಲ್ಲಾ ಸರ್ ತಮಿಳು ಸಿನಿಮಾ ಡಬ್ ಆಗಬಾರದಾ ಅಥವಾ ಬೇರೆ ಭಾಷೆ ಡಬ್ ಆಗಲಿ ಎನ್ನುವುದು ನಿಮ್ಮ ಅರ್ಥನಾ? ದ್ವಂರ್ಥ ಹೇಳಿಕೆಯಿಂದ ವೈಯಕ್ತಿಕವಾಗಿ ಗೌರವ ಕಳೆದುಕೊಳ್ತೀರ. ಹುಚ್ಚಾಟ ಮಾಡ್ಬೇಡಿ CCI ಮತ್ತೆ ಉಗ್ರವಾಗಿ ದಂಡಿಸಬಹುದು. ಕನ್ನಡ ಆಧುನಿಕ ಜಗತ್ತಿನ ಬೇರೆ ಭಾಷೆಗಳೊಂದಿಗೆ ಸಮಾನಾಂತರ ಸ್ಥಾನ ಕಾಯ್ದುಕೊಳ್ಳಲು ಡಬ್ಬಿಂಗ್ ಒಂದು ಸಾಧನ- ಚಂದ್ರಶೇಖರ ಗೌಡ

    English summary
    Pro Kannada activist Vatal Nagaraj opposed telecasting Dubbing movies in television again.
    Sunday, May 10, 2020, 13:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X