twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ಸಂಸ್ಕಾರಕ್ಕೆ ಶರಣು ಎಂದ ಕನ್ನಡ ಪರ ಹೋರಾಟಗಾರರು

    |

    ಡಬ್ಬಿಂಗ್ ಬೇಡವೇ ಬೇಡ ಎನ್ನುವ ಕಾಲವೊಂದಿತ್ತು. ಬಳಿಕ ಡಬ್ಬಿಂಗ್ ಬೇಕೋ, ಬೇಡ್ವೋ ಎಂಬ ಚರ್ಚೆ ಶುರು ಆಯ್ತು. ಡಬ್ಬಿಂಗ್ ಬಂದ್ರೆ ಕನ್ನಡ ಸಂಸ್ಕೃತಿ ಹಾಳಾಗುತ್ತೆ ಅಂತ ಅನೇಕರು ದನಿ ಎತ್ತಿದರು. ಡಬ್ಬಿಂಗ್ ನಿಂದ ಕನ್ನಡಕ್ಕೆ ಒಳಿತಾಗುತ್ತೆ ಅಂತ ಕೆಲವರು ವಾದ ಕೂಡ ಮಾಡಿದರು.

    ಡಬ್ಬಿಂಗ್ ಪರ-ವಿರೋಧದ ಕುರಿತಾದ ಚರ್ಚೆ ಏನೇ ಇದ್ದರೂ, ಸದ್ಯ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತ್ರ ಡಬ್ಬಿಂಗ್ ಪರ ನಿಂತಿದ್ದಾರೆ. ಇತ್ತೀಚೆಗಷ್ಟೇ ಅವರು ನಟಿಸಿದ್ದ ತೆಲುಗು ಚಿತ್ರ 'ಸೈರಾ ನರಸಿಂಹ ರೆಡ್ಡಿ' ಕನ್ನಡದಲ್ಲಿ ಡಬ್ ಆಗಿ ತೆರೆಗೆ ಬಂದಿತ್ತು.

    ಅಂಬಿ ಬಯೋಪಿಕ್ ನಲ್ಲಿ ಸುದೀಪ್: ಕಿಚ್ಚ ಹೇಳಿದ್ದೇನು?ಅಂಬಿ ಬಯೋಪಿಕ್ ನಲ್ಲಿ ಸುದೀಪ್: ಕಿಚ್ಚ ಹೇಳಿದ್ದೇನು?

    ವಿಶೇಷ ಅಂದ್ರೆ, ಕನ್ನಡಕ್ಕೆ ಡಬ್ ಆದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು. ಸುದೀಪ್ ರವರ ಈ ನಡೆಯನ್ನ ಅಭಿನಂದಿಸಲು ಕನ್ನಡ ಪರ ಹೋರಾಟಗಾರರು, ಕನ್ನಡ ಸಂಘಟನೆಗಳ ಪ್ರಮುಖರು ಕಿಚ್ಚನ ಮನೆಗೆ ಹೋಗಿದ್ದರು.

    Kannada Activists lauds Kiccha Sudeep for supporting Dubbing

    ಕೆಜಿಎಫ್, ಬಾಹುಬಲಿ ಗಳಿಕೆ ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ಸುದೀಪ್ಕೆಜಿಎಫ್, ಬಾಹುಬಲಿ ಗಳಿಕೆ ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ಸುದೀಪ್

    ಆಗ ಸುದೀಪ್ ಎಲ್ಲರಿಗೂ 'ಮಂಕುತಿಮ್ಮನ ಕಗ್ಗ' ಮತ್ತು ''ಪ್ರೀತಿಯಿಂದ ಕಿಚ್ಚ ಸುದೀಪ್'' ಎಂದು ಪ್ರಿಂಟ್ ಆಗಿರುವ ಲೇಖನಿಯನ್ನ ಉಡುಗೊರೆಯಾಗಿ ನೀಡಿ ಕಳುಹಿಸಿದ್ದಾರೆ. ಸುದೀಪ್ ರವರ ಈ ಸಂಸ್ಕಾರ-ಅಭಿರುಚಿಗೆ ಕಂಡು ಕನ್ನಡ ಪರ ಹೋರಾಟಗಾರರು ಶರಣಾಗಿದ್ದಾರೆ. ಅಂದ್ಹಾಗೆ ಸುದೀಪ್ ರವರ ಈ ನಡೆಗೆ ನೀವೇನಂತೀರಿ.?

    English summary
    Kannada Activists lauds Kiccha Sudeep for supporting Dubbing.
    Tuesday, October 15, 2019, 16:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X