Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್-ಯಶ್ ಸ್ಫೂರ್ತಿಯಿಂದ ಅಭಿಮಾನಿಗಳಲ್ಲಿ ಮನವಿ ಮಾಡಿದ ಅಭಿಷೇಕ್ ಅಂಬರೀಶ್
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಅಭಿಷೇಕ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಮುಂದಿನ ತಿಂಗಳು ಆಕ್ಟೋಬರ್ 3ಕ್ಕೆ ಅಭಿಷೇಕ್ ಹುಟ್ಟುಹಬ್ಬ. ಈಗಾಗಲೆ ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಅಭಿಷೇಕ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೂರದ ಊರುಗಳಿಂದ ಬರುವ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಇಲ್ಲಿವರೆಗೂ ಬರುವುದು ಬೇಡ. ಅಲ್ಲೆ ನಿಮ್ಮ ನಿಮ್ಮ ಊರಿನಲ್ಲಿಯೆ ಅಂಬರೀಶ್ ಹೆಸರಿನಲ್ಲಿ ಗಿಡ ನೆಟ್ಟು ಗೌರವ ಸಲ್ಲಿಸಿ ಅದೆ ಹುಟ್ಟುಹಬ್ಬ ಆಚರಿಸಿದಂತೆ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಂಬಿ
ಪುತ್ರನ
ಎರಡನೇ
ಸಿನಿಮಾಗೆ
'ಆರೆಂಜ್'
ನಿರ್ದೇಶಕನ
ಸಾರಥ್ಯ?
"ಇದು ನನ್ನ ಒಂದು ಸಣ್ಣ ಮನವಿ. ನನ್ನ ತಂದೆಗೆ ಎಷ್ಟು ಕೊಟ್ಟಿದ್ದೀರೋ ನನಗೂ ಅಷ್ಟೆ ಪ್ರೀತಿ ಕೊಟ್ಟು ಇಲ್ಲೀವರೆಗೂ ಬೆಳೆಸುತ್ತಾ ಬಂದಿದ್ದೀರಿ. ಚಿಕ್ಕಂದಿನಿಂದ ಇಲ್ಲಿಯವರೆಗೆ ಪ್ರತೀ ವರ್ಷ ತಮ್ಮ ತಮ್ಮ ಊರುಗಳಿಂದ ನನ್ನ ಹುಟ್ಟುಹಬ್ಬಕ್ಕೆ ಬಂದು, ಆಶೀರ್ವಾದ ಮಾಡಿ ಹಾರೈಸಿದ್ದೀರಿ. ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಮ್ಮ ಕುಟುಂಬ ಸದಾ ಚಿರಋಣಿ. ಆದರೆ ಈ ವರ್ಷ ನನ್ನ ತಂದೆ ದಿವಂಗತರಾಗಿರುವುದರಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಬದಲು, ನಾವೆಲ್ಲರೂ ನಮ್ಮ ನಮ್ಮ ಊರುಗಳಲ್ಲಿ ಅಥವಾ ನಮ್ಮ ನಿವಾಸಗಳ ಹತ್ತಿರ ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ಗಿಡ ನೆಟ್ಟು ಗೌರವ ಸಲ್ಲಿಸೋಣ. ಇದರ ಮೂಲಕ ಅವರ ನೆನಪು ನಮ್ಮೊಂದಿಗೆ ಸದಾ ಇರಲಿ. ಇದು ತಮ್ಮಲ್ಲಿ ವಿನಂತಿ" ಎಂದು ಕೇಳಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನೇಕ ನಟರು ಸಹ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಈಗ ಅದೆ ಸಾಲಿಗೆ ನಟ ಅಭಿಷೇಕ್ ಅಂಬರೀಶ್ ಕೂಡ ಸೇರಿದ್ದಾರೆ. ವಿಶೇಷ ಅಂದ್ರೆ ಈ ಪೋಸ್ಟ್ ಹಾಕುವ ಜೊತೆಗೆ "ಇದು ತನ್ನ ಸಹೋದರರಾದ ದರ್ಶನ್ ಮತ್ತು ಸುದೀಪ್ ಅವರಿಂದ ಸ್ಫೂರ್ತಿ ಪಡೆದು ಈ ನಿರ್ಧಾರ ಕೈಗೊಂಡಿದ್ದೀನಿ" ಎಂದು ಬರೆದುಕೊಂಡಿದ್ದಾರೆ.