For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಚಕ್ರವರ್ತಿ'ಯಲ್ಲಿ 'ಡೆಡ್ಲಿ' ಆದಿತ್ಯ ಪಾತ್ರ ಏನು.?

  By Suneetha
  |

  ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ಶೂಟಿಂಗ್ ಸದ್ದಿಲ್ಲದೇ, ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಚಾಲೆಂಜಿಂಗ್ ದರ್ಶನ್ 'ಜಗ್ಗುದಾದಾ' ಚಿತ್ರದ ನಂತರ ಮತ್ತೆ ಒಂದಾಗಿದ್ದಾರೆ.

  ನಿರ್ದೇಶಕ ಚಿಂತನ್ ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ದರ್ಶನ್ ಮತ್ತು ಸೃಜನ್ ಲೋಕೇಶ್ ಅವರು ರೆಟ್ರೋ ಲುಕ್ ನಲ್ಲಿ ಮಿಂಚಿದ್ದು, ಭೂಗತ ಲೋಕದ ಕಥೆಯನ್ನು ತೆರೆಯ ಮೇಲೆ ಚಿಂತನ್ ತೆರೆದಿಡಲಿದ್ದಾರೆ. ಅಂತೂ ದರ್ಶನ್ ಅವರು ಮತ್ತೆ ಲಾಂಗ್ ಹಿಡಿದು ಅಭಿಮಾನಿಗಳಿಗೆ ಕಿಕ್ ಏರಿಸಿದ್ದಾರೆ.['ಚಕ್ರವರ್ತಿ' ಆಗಲು ಲಾಂಗ್ ಹಿಡಿಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್]

  'ಸ್ನೇಹನಾ ಪ್ರೀತಿನಾ' ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಅಣಜಿ ನಾಗರಾಜ್ ಅವರು ಮಗದೊಮ್ಮೆ ದರ್ಶನ್ ಅವರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

  ಅಂದಹಾಗೆ ದರ್ಶನ್ ಮತ್ತು ಸೃಜನ್ ಲೋಕೇಶ್ ಜೊತೆಗೆ ನಟ ಆದಿತ್ಯ ಅವರು ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಆದಿತ್ಯ ಅವರ ಪಾತ್ರ ಏನು, ಅನ್ನೋದು ಯಾರಿಗೂ ತಿಳಿದಿರಲಿಲ್ಲ. ಇದೀಗ ಆದಿತ್ಯರ ಪಾತ್ರ ಬಹಿರಂಗಗೊಂಡಿದೆ, ಅದೇನೆಂಬುದನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

  ಮತ್ತೆ ಒಂದಾದ ಆದಿತ್ಯ-ದರ್ಶನ್

  ಮತ್ತೆ ಒಂದಾದ ಆದಿತ್ಯ-ದರ್ಶನ್

  ಕುಚಿಕು ಗೆಳೆಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು 'ಡೆಡ್ಲಿ' ಆದಿತ್ಯ ಅವರು 'ಸ್ನೇಹನಾ ಪ್ರೀತಿನಾ' ಚಿತ್ರದ ನಂತರ ಇದೀಗ ಮತ್ತೆ 'ಚಕ್ರವರ್ತಿ' ಚಿತ್ರದ ಮೂಲಕ ಒಂದಾಗಿದ್ದಾರೆ.[ಇಲ್ಲ್ ಕೇಳಿ, 'ಇದು' ದರ್ಶನ್ ಅವರ ಆಜ್ಞೆ ಯಾರೂ ಮೀರಬೇಡಿ]

  ಆದಿತ್ಯ ಪಾತ್ರ ಏನು.?

  ಆದಿತ್ಯ ಪಾತ್ರ ಏನು.?

  ದರ್ಶನ್ ಅವರ ಜೊತೆ ಆದಿತ್ಯ ಕಾಣಿಸಿಕೊಳ್ಳುತ್ತಾರೆ ಎಂದಾಗ, ಇವರು ಯಾವ ಪಾತ್ರ ಮಾಡಬಹುದು ಅಂತ ಅಭಿಮಾನಿಗಳಿಗೆ ಕುತೂಹಲ ಇತ್ತು. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದ್ದು, ನಟ ಆದಿತ್ಯ ಅವರು 'ಚಕ್ರವರ್ತಿ'ಯಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ.

  ಸಾಥ್ ಕೊಡ್ತಾರಾ, ಮಟ್ಟ ಹಾಕ್ತಾರಾ.?

  ಸಾಥ್ ಕೊಡ್ತಾರಾ, ಮಟ್ಟ ಹಾಕ್ತಾರಾ.?

  ಅಂದಹಾಗೆ ಆದಿತ್ಯ ಅವರು ಸೂಪರ್ ಕಾಪ್ ಆಗಿ ದರ್ಶನ್ ಅವರ ಭೂಗತ ಲೋಕದ ಚಟುವಟಿಕೆಗಳಿಗೆ ಸಾಥ್ ಕೊಡ್ತಾರಾ?, ಅಥವಾ ಮಟ್ಟ ಹಾಕ್ತಾರಾ.? ಅನ್ನೋದು ಸದ್ಯದ ಕುತೂಹಲ. ಆದಿತ್ಯ ಅವರು ಪೊಲೀಸ್ ಆಗಿ ಬಹು ಮುಖ್ಯ ಪಾತ್ರ ವಹಿಸಲಿದ್ದು, ಇವರ ಪಾತ್ರ ಕಥೆಗೆ ಟ್ವಿಸ್ಟ್ ನೀಡಲಿದೆ.

  ಸೆಟ್ ಸೇರಿಕೊಂಡ ಆದಿತ್ಯ

  ಸೆಟ್ ಸೇರಿಕೊಂಡ ಆದಿತ್ಯ

  ನಟ ಆದಿತ್ಯ ಅವರು ತಮ್ಮ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದ ಶೂಟಿಂಗ್ ಕೊನೆಗೊಳಿಸಿದ್ದು, ಈಗಾಗಲೇ ಮೈಸೂರಿನಲ್ಲಿ ಬೀಡು ಬಿಟ್ಟಿರುವ 'ಚಕ್ರವರ್ತಿ' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ನಿರ್ದೇಶಕ ಪಿ.ಎನ್ ಸತ್ಯ ಆಕ್ಷನ್-ಕಟ್ ಹೇಳಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ.['ಬೆಂಗಳೂರು ಅಂಡರ್ ವರ್ಲ್ಡ್‌' ಗೆ ಕಾಲಿಟ್ಟ 'ಡೆಡ್ಲಿ' ಆದಿತ್ಯ]

  ನಟಿ ದೀಪಾ ಸನ್ನಿಧಿ

  ನಟಿ ದೀಪಾ ಸನ್ನಿಧಿ

  ಈ ಚಿತ್ರದಲ್ಲಿ ನಟಿ ದೀಪಾ ಸನ್ನಿಧಿ ಅವರು ಶಾಂತಿ ಹೆಸರಿನ ಪಾತ್ರದ ಮೂಲಕ ದರ್ಶನ್ ಅವರ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. 'ಸಾರಥಿ' ಚಿತ್ರದ ನಂತರ ಮತ್ತೆ ದರ್ಶನ್ ಮತ್ತು ದೀಪಾ ಸನ್ನಿಧಿ ಅವರು ತೆರೆ ಹಂಚಿಕೊಂಡಿದ್ದಾರೆ.['ಚಕ್ರವರ್ತಿ' ಜೀವನದಲ್ಲಿ ಶಾಂತಿಯ 'ದರ್ಶನ']

  ವಿಲನ್ ಆದ ದಿನಕರ್

  ವಿಲನ್ ಆದ ದಿನಕರ್

  ಇಷ್ಟು ದಿನ ನಿರ್ದೇಶಕ-ನಿರ್ಮಾಪಕರಾಗಿದ್ದ ದಿನಕರ್ ತೂಗುದೀಪ ಅವರು ಮೊಟ್ಟ ಮೊದಲ ಬಾರಿಗೆ ಈ ಚಿತ್ರದ ಮೂಲಕ ದರ್ಶನ್ ಅವರಿಗೆ ಎದುರಾಗಿ ಕಾಣಿಸಿಕೊಂಡಿದ್ದು, ವಿಲನ್ ಪಾತ್ರ ವಹಿಸುತ್ತಿದ್ದಾರೆ.['ಚಕ್ರವರ್ತಿ' ದರ್ಶನ್ ದರ್ಬಾರ್ ನಲ್ಲಿ ಸಹೋದರ ದಿನಕರ್ ವಿಲನ್ ಗಿರಿ]

  English summary
  Kannada Actor Aditya, who will be acting in Kannada Movie 'Chakravarthy', will join the sets in Mysuru on Saturday (August 20th). And according to Chintan, the director of the film, the actor will be a playing a cop in this film. Kannada Actor Darshan and Actress Deepa Sannidhi in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X