»   » ತಮಿಳಿನಲ್ಲಿ ಡೆಡ್ಲಿ ಆದಿತ್ಯನ ಹೊಸ ಅವತಾರ

ತಮಿಳಿನಲ್ಲಿ ಡೆಡ್ಲಿ ಆದಿತ್ಯನ ಹೊಸ ಅವತಾರ

Posted By:
Subscribe to Filmibeat Kannada

ರಕ್ತದಲ್ಲೇ ಕಲೆ ಇದ್ರೂ, ಬೆನ್ನಿಗೆ ಅಪ್ಪನ ಹೆಸರಿದ್ರೂ, ಇಂಡಸ್ಟ್ರೀಗೆ ಎಂಟ್ರಿಕೊಟ್ಟು ಹತ್ತತ್ರ ಹತ್ತು ವರ್ಷಗಳಾದ್ರೂ, ಏನೇ ಪ್ರಯತ್ನ ಮಾಡಿದ್ರೂ ನಟ ಆದಿತ್ಯಗೆ ಒಂದೊಳ್ಳೆ ಬ್ರೇಕ್ ಮಾತ್ರ ಸಿಗ್ಲಿಲ್ಲ. 'ಡೆಡ್ಲಿ ಸೋಮ' ಹಿಟ್ ಆದ್ಮೇಲೆ ಆದಿತ್ಯ ಒಂದಷ್ಟು ಸಿನಿಮಾಗಳನ್ನ ಮಾಡಿದರೂ, ಯಾವುದೂ ಕ್ಲಿಕ್ ಆಗ್ಲಿಲ್ಲ.

ರಾಧಿಕಾ ಕುಮಾರಸ್ವಾಮಿ ಜೊತೆ 'ಸ್ವೀಟಿ...ನನ್ ಜೋಡಿ' ಅಂತ ಡ್ಯುಯೆಟ್ ಹಾಡಿದರೂ, ಆದಿತ್ಯಗೆ ಅದೃಷ್ಟ ಖುಲಾಯಿಸಲಿಲ್ಲ. ಅಪ್ಪ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ರೆಬೆಲ್' ಸಿನಿಮಾ ಇನ್ನೂ ಡಬ್ಬಾದಲ್ಲೇ ಇದೆ.

Kannada Actor Aditya turns Villain in Simbu's Vaalu

ಇಷ್ಟೆಲ್ಲಾ ಇದ್ದರೂ, ನಟ ಆದಿತ್ಯ ಸದ್ದಿಲ್ಲದೇ ಕಾಲಿವುಡ್ ನಲ್ಲಿ ಒಂದು ಸುತ್ತು ಹಾಕಿ ಬಂದಿದ್ದಾರೆ. ಇಷ್ಟು ದಿನ ಹೀರೋ ಆಗಿ ಮಿಂಚಿದ್ದ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಈಗ ವಿಲನ್ ಆಗಿದ್ದಾರೆ. ಕಾಲಿವುಡ್ ನಟ ಸಿಂಬು ಅಭಿನಯದ 'ವಾಲು' ಚಿತ್ರದಲ್ಲಿ ಆದಿತ್ಯ ಖೇಡಿ ಪಾತ್ರ ಮಾಡಿದ್ದಾರೆ. [ತಮಿಳು ಕಡೆ 'ವಾಲಿ'ದ ರಾಕಿಂಗ್ ಸ್ಟಾರ್ ಯಶ್]

ತಮಿಳು ಸ್ಟೈಲ್ ನಲ್ಲಿ ಲುಂಗಿ ತೊಟ್ಟು ಆದಿತ್ಯ 'ವಾಲು' ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಅಲ್ಲದೇ ಡೇರಿಂಗ್ ಸ್ಟಂಟ್ಸ್ ಕೂಡ ಮಾಡಿದ್ದಾರೆ. ಕನ್ನಡದಲ್ಲಿ 'ರೈಸಿಂಗ್ ಸ್ಟಾರ್' ಅಂತ ಗುರುತಿಸಿಕೊಳ್ಳುತ್ತಿದ್ದ ಆದಿತ್ಯಗೆ ತಮಿಳಿನಲ್ಲಿ ಹೀರೋ ಕೈಲಿ ಒದೆ ತಿನ್ನುವಂತದ್ದು ಏನಾಗಿತ್ತು ಅಂದ್ರೆ ಪಾತ್ರ ಚೆನ್ನಾಗಿದೆ ಅಂತ ಉತ್ತರ ಕೊಡುತ್ತಾರೆ.

Kannada Actor Aditya turns Villain in Simbu's Vaalu

ಸದ್ಯಕ್ಕೆ 'ವಾಲು' ಚಿತ್ರದಲ್ಲಿ ಆದಿತ್ಯ ರದ್ದು ನೆಗೆಟಿವ್ ಕ್ಯಾರೆಕ್ಟರ್ ಅನ್ನುವುದನ್ನ ಬಿಟ್ಟರೆ ಹೆಚ್ಚಿನ ಮಾಹಿತಿ ಇಲ್ಲ. ಹೇಳಿ ಕೇಳಿ ರಾಜೇಂದ್ರ ಸಿಂಗ್ ಬಾಬುಗೆ ಕಾಲಿವುಡ್ ನಲ್ಲಿ ಸ್ನೇಹಿತರ ದಂಡು ದೊಡ್ಡದಿರುವ ಕಾರಣ ಆದಿತ್ಯಗೆ ಈ ಅವಕಾಶ ಒಲಿದು ಬಂದಿದೆ ಅನ್ನುತ್ತಿವೆ ಮೂಲಗಳು.

ಸಿಂಬು ಮತ್ತು ಹನ್ಸಿಕಾ ಮೋಟ್ವಾನಿ ಅಭಿನಯಿಸಿರುವ 'ವಾಲು' ಚಿತ್ರಕ್ಕೆ ಯುವ ಪ್ರತಿಭೆ ವಿಜಯ್ ಚಂದರ್ ಆಕ್ಷನ್ ಕಟ್ ಹೇಳಿದ್ದಾರೆ. ಸೂಪರ್ ಸಾಂಗ್ಸ್ ನಿಂದ ಈಗಾಗಲೇ ಜನಪ್ರಿಯತೆ ಪಡೆದಿರುವ 'ವಾಲು' ಸಿನಿಮಾ ಮಾರ್ಚ್ ನಲ್ಲಿ ತೆರೆಗೆ ಬರಲಿದೆ. [ಎದೆಗಾರಿಕೆ ಚಿತ್ರ ಕಂಡ ವರ್ಮಾ ಅಚ್ಚರಿ]

Kannada Actor Aditya turns Villain in Simbu's Vaalu

ಸ್ಯಾಂಡಲ್ ವುಡ್ ನಲ್ಲಿ ಎದ್ದು ನಿಲ್ಲದ ಆದಿತ್ಯ, ಕಾಲಿವುಡ್ ನಲ್ಲಿ ಆರ್ಭಟಿಸುವುದಕ್ಕೆ ಮನಸ್ಸು ಮಾಡಿದ್ದಾರೆ. ನಾಯಕನಾಗಿದ್ದ ಆದಿತ್ಯ ತಮಿಳಿನಲ್ಲಿ ಖೇಡಿಯಾದ್ಮೇಲೆ ಜನ ಹೇಗೆ ಸ್ವೀಕರಿಸುತ್ತಾರೆ ಅನ್ನುವುದು ಸದ್ಯದ ಪ್ರಶ್ನೆ.

English summary
Kannada Actor Aditya of 'Deadly Soma' fame turns Villain in Kollywood. Aditya is seen potraying Villain character in Simbu starrer 'Vaalu' directed by debutant Vijay Chandar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada