ಅಭಿಮಾನಿಗಳ ಸಮ್ಮುಖದಲ್ಲಿ ಅಂಬರೀಶಣ್ಣ ಹುಟ್ಟುಹಬ್ಬ ಆಚರಣೆ
Recommended Video

ನಟ ರೆಬಲ್ ಸ್ಟಾರ್ ಅಂಬರೀಶ್ ಇಂದು ತಮ್ಮ 66ನೇ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳ ಜೊತೆಗೆ ಅಂಬಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ನಿನ್ನೆ ರಾತ್ರಿಯಿಂದಲೇ ಅವರ ಮನೆಯಲ್ಲಿ ಸಂಭ್ರಮ ಶುರು ಆಗಿದೆ.
ನಿನ್ನೆ ರಾತ್ರಿ ಅಂಬರೀಶ್ ಅವರ ಸಾಕಷ್ಟು ಅಭಿಮಾನಿಗಳು ಜೆಪಿ ನಗರದ ಅವರ ನಿವಾಸಕ್ಕೆ ಆಗಮಿಸಿದ್ದರು. ದೊಡ್ಡ ದೊಡ್ಡ ಕೇಕ್, ಹೂವಿನ ಹಾರ ತಂದು ತಮ್ಮ ಪ್ರೀತಿಯ ಅಂಬರೀಶಣ್ಣನ ಹುಟ್ಟುಹಬ್ಬವನ್ನು ಆಚರಿಸಿದರು. ಫ್ಯಾನ್ಸ್ ತಂದ ಕೇಕ್ ಕಟ್ ಮಾಡಿ, ಅವರ ಸೆಲ್ಫಿಗೆ ಫೋಸ್ ಕೊಟ್ಟು ಖುಷಿಯಿಂದ ಅಂಬಿ ಕಾಲ ಕಳೆದರು. ಇನ್ನು ಇಂದು ಕೂಡ ಅವರ ಹುಟ್ಟುಹಬ್ಬ ಆಚರಣೆ ಇದೇ ರೀತಿ ಮುಂದುವರೆದಿದೆ.

ಅಂಬರೀಶ್ ಅವರ ಈ ವರ್ಷದ ಹುಟ್ಟುಹಬ್ಬ ತುಂಬ ವಿಶೇಷತೆಗಳಿಂದ ಕೂಡಿದೆ. ಬರ್ತ್ ಡೇ ವಿಶೇಷವಾಗಿ ಅವರ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಬಹಳ ವರ್ಷಗಳ ನಂತರ ಅಂಬರೀಶ್ ಮತ್ತೆ ಹೀರೋ ಆಗಿದ್ದಾರೆ.
ಇವುಗಳ ಜೊತೆಗೆ ಅವರ ಅಂಬರೀಶ್ ಅವರ ಮಗ ಅಭಿಷೇಕ್ ಅವರ ಮೊದಲ ಸಿನಿಮಾ 'ಅಮರ್' ಚಿತ್ರ ಕೂಡ ನಿನ್ನೆ ಲಾಂಚ್ ಆಗಿದೆ. ಈ ವರ್ಷದ ಹುಟ್ಟುಹಬ್ಬ ಅಂಬರೀಶ್ ಮುಖದಲ್ಲಿ ನಗು ಮೂಡಿಸಿದೆ.


Click it and Unblock the Notifications











