For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಸ್ಮಾರಕ ಪಕ್ಕದಲ್ಲಿ ಅಂಬರೀಶ್ ಅಂತ್ಯಕ್ರಿಯೆ ನಡೆಸಲು ತೀರ್ಮಾನ

  |
  Ambareesh, Kannada Actor Demise : ಡಾ ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಅಂತ್ಯಕ್ರಿಯೆಗೆ ನಿರ್ಧಾರ

  ಕರುನಾಡ ಕರ್ಣ, ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಂಬರೀಶ್ ನಿನ್ನೆ (ನವೆಂಬರ್ 24) ರಾತ್ರಿ 10.15 ಸುಮಾರಿಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾದರು.

  ಅಂಬರೀಶ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ರಾಕ್ ಲೈನ್ ವೆಂಕಟೇಶ್, ದ್ವಾರಕೀಶ್ ಸೇರಿದಂತೆ ಚಿತ್ರರಂಗದ ತಾರೆಯರು ವಿಕ್ರಂ ಆಸ್ಪತ್ರೆಗೆ ಭೇಟಿ ಕೊಟ್ಟರು.

  ಮಂಡ್ಯದ ಗಂಡು, ಕರುನಾಡ ಕರ್ಣ, ಸ್ಯಾಂಡಲ್ ವುಡ್ ನ ಜಲೀಲ ಅಂಬರೀಶ್ ಇನ್ನಿಲ್ಲ.!

  ಸದ್ಯಕ್ಕೆ ಅಂಬರೀಶ್ ಮೃತದೇಹ ಇನ್ನೂ ವಿಕ್ರಂ ಆಸ್ಪತ್ರೆಯಲ್ಲೇ ಇದ್ದು, ಭಾನುವಾರ (ನವೆಂಬರ್ 25) ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಮ್ ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

  ಮಂಡ್ಯ ಅಪಘಾತ ನೋಡಿ ಜೀವ ಬಿಟ್ಟರಾ ಅಂಬರೀಶಣ್ಣಾ.?

  ರಾಜ್ಯ ಸರ್ಕಾರ ಹೊರಡಿಸಿರುವ ಅಧಿಕೃತ ಪ್ರಕಟಣೆ ಪ್ರಕಾರ, ಭಾನುವಾರ ಇಡೀ ದಿನ ಕಂಠೀರವ ಸ್ಟೇಡಿಯಮ್ ನಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಮಂಡ್ಯದಿಂದ ಬರುವ ಅಭಿಮಾನಿಗಳಿಗೆ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

  ರೆಬೆಲ್ ಸ್ಟಾರ್ ಅಂಬರೀಶ್ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಕಣ್ಣೀರು

  ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಸ್ಮಾರಕ ಪಕ್ಕದಲ್ಲಿ ಅಂಬರೀಶ್ ಅಂತಿಮ ಸಂಸ್ಕಾರ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಕುಟುಂಬಸ್ಥರು ಮತ್ತು ಚಿತ್ರರಂಗದ ಒಪ್ಪಿಗೆ ಪಡೆದು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

  ಹುಟ್ಟೂರು ಮಂಡ್ಯದಲ್ಲಿ ನಡೆಯುತ್ತಾ ಅಂಬರೀಶ್ ಅಂತ್ಯಕ್ರಿಯೆ.?

  ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಬರೀಶ್ ಅಂತಿಮ ಸಂಸ್ಕಾರ ನಡೆಯಲಿದೆ. ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.

  English summary
  Kannada Actor Ambareesh final rites to be held at Kanteerava Studio, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X