twitter
    For Quick Alerts
    ALLOW NOTIFICATIONS  
    For Daily Alerts

    ಮೇರು ನಟ ಅನಂತ್ ನಾಗ್ ಹುಟ್ಟುಹಬ್ಬ ಸಂಭ್ರಮ

    |
    <ul id="pagination-digg"><li class="next"><a href="/news/actor-anant-nag-birthday-kannada-movies-067791.html">Next »</a></li></ul>

    ಕನ್ನಡದ ಹೆಮ್ಮೆಯ ಹಿರಿಯ ನಟ ಅನಂತನಾಗ್ ಅನಂತಾನಂತ ಸಾಧ್ಯತೆಗಳನ್ನು ಸಾಕಾರಗೊಳಿಸಿದ ಮೇರು ಕಲಾವಿದರು. ಇಂದು (ಸೆಪ್ಟೆಂಬರ್ 04) ಅನಂತನಾಗ್ ಅವರ ಜನ್ಮದಿನ. ಅನಂತ್ ನಾಗ್ ಜನಿಸಿದ್ದು ಸೆಪ್ಟೆಂಬರ್ 4, 1948 ರಂದು ಉತ್ತರಕನ್ನಡದ ನಾಗರಕಟ್ಟೆಯಲ್ಲಿ. 'ಸದಾನಂದ ನಾಗರಕಟ್ಟೆ' ಹಾಗೂ 'ಆನಂದಿ' ದಂಪತಿಗಳ ಮಗನಾದ ಅನಂತ್ ನಾಗ್ ಅವರು ಪ್ರಾರಂಭಿಕ ಓದನ್ನು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ ಹಾಗೂ ನಂತರ ಉತ್ತರ ಕನ್ನಡದ ಚಿತ್ರಾಪುರದ ಮಠದಲ್ಲಿ ಮಾಡಿದರು.

    ಹೆಚ್ಚಿನ ಓದಿಗೆ ಮುಂಬೈಗೆ ಪ್ರಯಾಣ ಬೆಳೆಸಿದ ಅನಂತ್ ನಾಗ್, ಮರಾಠಿ ರಂಗಭೂಮಿಯಲ್ಲಿ ಎಂಟು ವರ್ಷಗಳ ಕಾಲ ನಟಸಿದವರು. 'ಶ್ಯಾಂ ಬೆನೆಗಲ್' ಅವರ 'ಅಂಕುರ್' ಚಿತ್ರದಿಂದ ಚಿತ್ರರಂಗಕ್ಕೆ ಬಂದ ಅನಂತ್ ನಾಗ್, ನಂತರ 'ನಿಶಾಂತ್', 'ಕಲಿಯುಗ್', 'ಗೆಹ್ರಾಯಿ', 'ಭೂಮಿಕಾ', 'ಮಂಗಳಸೂತ್ರ್'. 'ಯುವ', 'ಕೊಂಡುರಾ', 'ಉತ್ಸವ್' ಹೀಗೆ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಪಾತ್ರಗಳಿಗೆ ಅನಂತ್ ನಾಗ್ ಬಿಟ್ಟರೆ ಬೇರೊಬ್ಬರು ಸಾಧ್ಯವೇ ಇಲ್ಲ ಎಂಬ ಮಾತು ಎಲ್ಲೆಡೆ ಜನಜನಿತ.

    1973ರಲ್ಲಿ ಪಿವಿ ನಂಜರಾಜ ಅರಸ್ ಅವರ 'ಸಂಕಲ್ಪ' ಚಿತ್ರದ ಮೂಲಕ ಅನಂತ ನಾಗ್ ಕನ್ನಡ ಚಿತ್ರರಂಗದಲ್ಲಿ ನಟಿಸಲು ಪ್ರಾರಂಭಿಸಿದರು. 1975ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ನಿರ್ದೇಶನದ 'ಹಂಸಗೀತೆ' ಚಿತ್ರದ ಮೂಲಕ ಅನಂತ್ ಕನ್ನಡದ ಅಮೂಲ್ಯ ಆಸ್ತಿಯಾಗಿ ಉಳಿದುಕೊಂಡರು. ನಂತರ ಬಂದ ದೊರೈ ಭಗವಾನ್ ನಿರ್ದೇಶನದ 'ಬಯಲುದಾರಿ' ಚಿತ್ರ ಅನಂತ್ ನಾಗ್ ಅವರನ್ನು ಕನ್ನಡದ ಮೇರು ನಟರನ್ನಾಗಿ ಮಾಡಿತು.

    ಅಲ್ಲಿಂದ ಮುಂದೆ ಅನಂತ್ ನಾಗ್ ಎನ್ನುವ ಹೆಸರು ಕರ್ನಾಟಕದ ಮನೆಮನೆಗಳಲ್ಲೂ, ಕನ್ನಡಿದರ ಮನಮನದಲ್ಲೂ ಪ್ರತಿಷ್ಠಾಪನೆಗೊಂಡಿತು. ಯಾವುದೇ ಫ್ರೇಂಗೂ ನಿಲುಕದ ಅನಂತ್ ನಾಗ್ ಕಾಲ, ದೇಶ ಹಾಗೂ ಭಾಷೆಗಳನ್ನು ಮೀರಿದ ಕಲಾವಿದರಾಗಿ ಬೆಳೆದರು. 'ಸಂಕಲ್ಪ'ದಿಂದ ಪ್ರಾರಂಭವಾದ ಅವರ ಕನ್ನಡ ಚಿತ್ರಗಳ ಯಾತ್ರೆ ಇಂದಿಗೂ ಅಮೋಘವಾಗಿ ಮುಂದುವರಿದಿದೆ.

    ಅನಂತ್ ಚಿತ್ರಗಳನ್ನು ಎಷ್ಟೆಂದು ಹೆಸರಿಸುವುದು, ಹೇಗೆಂದು ಹೇಳುವುದು? 'ಹಂಸಗೀತೆ', 'ಕನ್ನೇಶ್ವರ ರಾಮ', 'ಬರ', 'ಅವಸ್ಥೆ', 'ಉದ್ಭವ', 'ಮಿಂಚಿನ ಓಟ', 'ಆಕ್ಸಿಡೆಂಟ್', 'ಬೆಳದಿಂಗಳ ಬಾಲೆ', 'ಮತದಾನ', 'ಮೌನಿ', 'ಅನುರೂಪ', 'ರಾಮಾಪುರದ ರಾವಣ', 'ಸಿಂಹಾಸನ', 'ಅನ್ವೇಷಣೆ', 'ಮಾಲ್ಗುಡಿ ಡೇಸ್' ಮುಂತಾದ ಚಿತ್ರಗಳ ಜೊತೆಗೆ 'ನಾ ನಿನ್ನ ಬಿಡಲಾರೆ" ಯಂತಹ ವಿಭಿನ್ನ ಪಾತ್ರಗಳಿರುವ ಚಿತ್ರಗಳಿಗೂ ಅನಂತ್ ಜೀವ ತುಂಬಿದ್ದಾರೆ.

    ಅನಂತ್ ನಾಗ್ ಹಾಗೂ ಲಕ್ಷ್ಮೀ ಜೋಡಿಯಂತೂ ಕನ್ನಡದ ಜನಪ್ರಿಯ ಜೋಡಿಗಳಲ್ಲೊಂದು. ಬೆಂಕಿಯ ಬಲೆ', 'ಚಂದನದ ಗೊಂಬೆ', 'ಇಬ್ಬನಿ ಕರಗಿತು', ಮುದುಡಿದ ತಾವರೆ ಅರಳಿತು', 'ಮಕ್ಕಳಿರಲವ್ವ ಮನೆತುಂಬ', 'ನೋಡಿ ಸ್ವಾಮಿ ನಾವಿರೋದು ಹೀಗೆ', 'ನಾ ನಿನ್ನ ಬಿಡಲಾರೆ', 'ಧೈರ್ಯಲಕ್ಷ್ಮಿ', 'ಬಿಡುಗಡೆಯ ಬೇಡಿ' ಮುಂತಾದ ಚಿತ್ರಗಳಲ್ಲಿ ಈ ಜೋಡಿ ಮಾಡಿದ ಮೋಡಿಯನ್ನು ಯಾರೂ ಎಂದಿಗೂ ಮರೆಯಲಾರರು. ಮುಂದಿನ ಪುಟ ನೋಡಿ...

    <ul id="pagination-digg"><li class="next"><a href="/news/actor-anant-nag-birthday-kannada-movies-067791.html">Next »</a></li></ul>

    English summary
    Anant Nagarkatte (born September 4, 1948) popularly known as Anant Nag is an actor and politician from Karnataka, India. He is considered to be one of the all time greatest actors in the Kannada film industry with a vast number of commercially successful movies. Today, he is celebrating his Birthday. &#13; &#13;
    Tuesday, September 4, 2012, 12:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X