Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಚಿತಾ ರಾಮ್ ಗೆ ರಮೇಶ್ ಅರವಿಂದ್ ನಿರ್ದೇಶನ?
ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ, ನಿರ್ದೇಶಕ ರಮೇಶ್ ಅರವಿಂದ್ ಸದ್ಯ ವೀಕೆಂಡ್ ಮಿತ್ ರಮೇಶ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಅಪರೂಪಕ್ಕೆ ಒಮ್ಮೆ ಚಿತ್ರಮಂದಿರಗಳಲ್ಲೂ ಮಿಂಚುವ ರಮೇಶ್ ಅರವಿಂದ್ ಕಡೆಯಿಂದ ಈಗ ದೊಡ್ಡ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.
ರಮೇಶ್ ಅರವಿಂದ್ ಮತ್ತೆ ನಿರ್ದೇಶನ ಮಾಡಲು ಪ್ಲಾನ್ ಮಾಡುತ್ತಿದ್ದಾರಂತೆ. ಈಗಾಗಲೆ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆಯಂತೆ. ವಿಶೇಷ ಅಂದ್ರೆ ಈ ಬಾರಿ ರಮೇಶ್ ಅರವಿಂದ್ ನಿರ್ದೇಶನದ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಮಿಂಚಲಿದ್ದಾರಂತೆ. ಮೊದಲ ಬಾರಿಗೆ ರಮೇಶ್ ಅರವಿಂದ್, ರಚಿತಾ ರಾಮ್ ಗೆ ನಿರ್ದೇಶನ ಮಾಡುತ್ತಿದ್ದಾರೆ.
ರಮೇಶ್ ಅರವಿಂದ್ ನಿರ್ದೇಶನದ ಚಿತ್ರ ಅಂದ್ಮೇಲೆ ಚಿತ್ರಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಇಬ್ಬರ ಸಿನಿಮಾ ಯಾವಾಗ ಪ್ರಾರಂಭವಾಗಲಿದೆ ಗೊತ್ತಾ? ರಚಿತಾ ಮತ್ತು ರಮೇಶ್ ಅರವಿಂದ್ ಸಿನಿಮಾ ಹೇಗಿರಲಿದೆ? ಮುಂದೆ ಓದಿ..

ರಮೇಶ್ ನಿರ್ದೇಶನದಲ್ಲಿ ರಚಿತಾ ರಾಮ್
ರಮೇಶ್ ಅರವಿಂದ್ ಹೊಸ ಸಿನಿಮಾ ನಿರ್ದೇಶನ ಮಾಡಲು ಪ್ಲಾನ್ ಮಾಡಿದ್ದಾರೆ. ಅವರ ನಿರ್ದೇಶನದ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ವಿಶೇಷ ಅಂದ್ರೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಅದರಲ್ಲಿ ಒಬ್ಬರು ರಚಿತಾ ರಾಮ್. ಆದ್ರೆ ಇನ್ನೋರ್ವ ನಾಯಕಿ ಯಾರು ಎನ್ನುವುದು ಇನ್ನು ಫೈನಲ್ ಆಗಿಲ್ಲವಂತೆ.

ರಮೇಶ್ ಮಗಳಾಗಿ ಕಾಣಿಸಿಕೊಂಡಿದ್ದ ರಚಿತಾ
ರಚಿತಾ ರಾಮ್ ಮತ್ತು ರಮೇಶ್ ಅರವಿಂದ್ ಈ ಮೊದಲೆ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ರಮೇಶ್ ಅರವಿಂದ್ ಅಭಿನಯದ ನೂರನೆ ಸಿನಿಮಾ 'ಪುಷ್ಪಕ ವಿಮಾನ' ಚಿತ್ರದಲ್ಲಿ ರಚಿತಾ ರಾಮ್ ರಮೇಶ್ ಅರವಿಂದ್ ಮಗಳ ಪಾತ್ರದಲ್ಲಿ ಮಿಂಚಿದ್ದರು. ಡಿಂಪಲ್ ಕ್ವೀನ್ ಈ ಚಿತ್ರದಲ್ಲಿ ವಕೀಲೆಯಾಗಿ ಕಾಣಿಸಿಕೊಂಡಿದ್ದರು. ಆದ್ರೆ ರಚಿತಾ ಮತ್ತು ರಮೇಶ್ ಅರವಿಂದ್ ಒಂದೆ ಫ್ರೇಮ್ ನಲ್ಲಿ ಕಾಣಿಸಿಕೊಂಡಿರಲ್ಲಿಲ್ಲ.

ನಿರ್ದೇಶನದ ಜೊತೆಗೆ ಅಭಿನಯ
ರಮೇಶ್ ಅರವಿಂದ್ ನಿರ್ದೇಶನದ ಜೊತೆಗೆ ಅಭಿನಯ ಕೂಡ ಮಾಡುತ್ತಿದ್ದಾರೆ. ಬಾಲಿವುಡ್ ನ 'ಕ್ವೀನ್' ಚಿತ್ರವನ್ನು ಕನ್ನಡದಲ್ಲಿ 'ಬಟರ್ ಫ್ಲೈ' ಹೆಸರಿನಲ್ಲಿ ನಿರ್ದೇಶನ ಮಾಡಿದ್ದ ರಮೇಶ್ ಅರವಿಂದ್ ಮತ್ಯಾವ ಸಿನಿಮಾವನ್ನು ಕೈಗೆತ್ತಿಕೊಂಡಿರಲಿಲ್ಲ. 'ಬರಟ್ ಫ್ಲೈ' ಸಿನಿಮಾ ರಿಲೀಸ್ ಗೂ ಮೊದಲೆ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಜೊತೆಗೆ ಅವರ ನಿರ್ದೇಶನದ ಸಿನಿಮಾದಲ್ಲಿ ರಮೇಶ್ ಅವರು ಬಣ್ಣ ಹಚ್ಚುತ್ತಿರುವುದು ವಿಶೇಷ.

ಶಿವಾಜಿ ಸೂರತ್ಕಲ್ ಮತ್ತು ಭೈರಾದೇವಿ
ರಮೇಶ್ ಅರವಿಂದ್ ಅಭಿನಯದ 'ಭೈರಾದೇವಿ' ಸಿನಿಮಾದ ಚಿತ್ರೀಕರಣ ಈಗಾಗಲೆ ಮುಕ್ತಾಯವಾಗಿದೆ. ಸದ್ಯ 'ಶಿವಾಜಿ ಸೂರತ್ಕಲ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಕೂಡ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಇದರ ಜೊತೆಗೆ ರಮೇಶ್ ಅರವಿಂದ್ ಕಿರುತೆರೆಯ ಪ್ರಸಿದ್ಧ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯು ಹೊಸ ಸಿನಿಮಾ ಪ್ಲಾನ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ.

ರಚಿತಾ ಬಳಿ ಇವೆ ಮೂರು-ನಾಲ್ಕು ಸಿನಿಮಾಗಳು
ರಚಿತಾ ರಾಮ್ ಸದ್ಯ ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾದಲ್ಲೂ ನಾಯಕಿಯಾಗಿ ಮಿಂಚಿದ್ದಾರೆ. ಐ ಲವ್ ಯೂ ಚಿತ್ರದ ರಿಲೀಸ್ ಗೆ ಕಾಯುತ್ತಿದ್ದಾರೆ. ಇನ್ನು 'ರುಸ್ತುಂ' ಚಿತ್ರದಲ್ಲಿ ರಚಿತಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಚಿತಾ ಬಳಿ ಇರುವ ಪ್ರಾಜೆಕ್ಟ್ ಮುಗಿಯುತ್ತಿದಂತೆ ರಮೇಶ್ ಅರವಿಂದ್ ಅವರ ಚಿತ್ರಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ.