For Quick Alerts
  ALLOW NOTIFICATIONS  
  For Daily Alerts

  ನಟ ಅನಿಲ್ ಕುಮಾರ್ ಸಾವಿಗೆ ಯಾರು ಕಾರಣ?

  By Rajendra
  |

  ಕನ್ನಡ ಚಿತ್ರರಂಗದಲ್ಲಿ ಬೆಳಗಬೇಕಿದ್ದ ಉದಯೋನ್ಮುಖ ನಟ ಅನಿಲ್ ಕುಮಾರ್ (32) ಬೈಕ್ ಆಕ್ಸಿಡೆಂಟ್ ನಲ್ಲಿ ಮೃತಪಟ್ಟಿದ್ದಾರೆ. ಅತಿವೇಗವಾಗಿ ಚಾಲನೆ ಮಾಡುತ್ತಿದ್ದದ್ದೇ ಆತನ ಸಾವಿಗೆ ಕಾರಣ ಎನ್ನಲಾಗಿದೆ. ಐಷಾರಾಮಿ ಬಿಎಂಡಬ್ಲ್ಯು ಬೈಕ್ ನಲ್ಲಿ 150 ಕಿ.ಮೀಗೂ ವೇಗವಾಗಿ ಆತ ಚಾಲನೆ ಮಾಡುತ್ತಿದ್ದ ಎನ್ನುತ್ತವೆ ಮೂಲಗಳು.

  ಆದರೆ ಅವರ ತಂದೆ ಬಲರಾಮ್ ಅವರು ಹೇಳುವುದೇನೆಂದರೆ, ತನ್ನ ಮಗನ ಸಾವಿಗೆ ರಸ್ತೆಯಲ್ಲಿ ಬಿದ್ದಿದ್ದ ಕೇಬಲ್ ವೈರ್ ಕಾರಣ ಎನ್ನುತ್ತಾರೆ. ಈ ಕೇಬಲ್ ವೈರ್ ಚಕ್ರಕ್ಕೆ ಸಿಲುಕಿ ದ್ವಿಚಕ್ರ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಹೊಡೆದ ರಭಸಕ್ಕೆ ಅನಿಲ್ ತೀವ್ರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆ ಸೇರಿಸಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ.

  ಸುಮಾರು ರು.28 ಲಕ್ಷ ಬೆಲೆ ಬಾಳುವ ಬಿಎಂಡಬ್ಲ್ಯು ಬೈಕ್ ಚಾಲನೆ ಮಾಡಬೇಕಾದರೆ ವಿಶೇಷ ಹೆಲ್ಮೆಟ್, ಶೂಸ್ ಹಾಗೂ ಜಾಕೆಟ್ ನೀಡಲಾಗಿರುತ್ತದೆ. ಆದರೆ ಅನಿಲ್ ಇದ್ಯಾವುದನ್ನೂ ಧರಿಸಿರಲಿಲ್ಲ ಎನ್ನಲಾಗಿದೆ. ಅಂದಹಾಗೆ ಅನಿಲ್ ಅವರು 'ಶಿವಾನಿ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು.

  ಮಂಗಳವಾರ (ಅ.1) ತಡರಾತ್ರಿ ಕೆ.ಆರ್.ಪುರಂನಿಂದ ಹಿಂತಿರುಗುತ್ತಿರಬೇಕಾದರೆ ಮಲ್ಲೇಶ್ವರಂ 17 ಕ್ರಾಸ್ ಬಳಿ ಅಪಘಾತಕ್ಕೀಡಾಗಿದ್ದಾರೆ. ನವರತ್ನ ಅಪಾರ್ಟ್ ಮೆಂಟ್ ಬಳಿ ಫುಟ್ ಪಾತ್ ಗೆ ಹೊಡೆದು ಮರಕ್ಕೆ ಅಪ್ಪಳಿಸಿದೆ ಬೈಕ್. ಮಲ್ಲೇಶ್ವರಂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿದ್ದ ಈ ನಟ ಸ್ಯಾಂಡಲ್ ವುಡ್ ನಲ್ಲಿ ಬೆಳೆಯುವ ಕನಸು ಕಂಡಿದ್ದ. ಆದರೆ ತಂದೆತಾಯಿ ಇಷ್ಟೆಲ್ಲಾ ಬೆಲೆ ಬಾಳುವ ವಾಹನ ಕೊಡಿಸಿದ್ದೇ ತಪ್ಪಾಯಿತಾ? ಅತಿವೇಗವೇ ಸಾವಿಗೆ ಕಾರಣವಾ? ಸುರಕ್ಷತಾ ಸಾಧನಗಳನ್ನು ಬಳಸದೆ ಇದ್ದದ್ದು ಕಾರಣವೇ? ಈ ರೀತಿಯ ಪ್ರಶ್ನೆಗಳು ಸದ್ಯಕ್ಕೆ ಪ್ರಜ್ಞಾವಂತರನ್ನು ಕಾಡುತ್ತಿವೆ.

  English summary
  An actor -turned -realtor Anil Kumar was killed on the spot when his motorcycle hit a kerbstone in Malleswaram on Wednesday morning. Anil Kumar had played the lead role in Shivani, a Kannada film released in 2007.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X