»   » ಜಾಮೀನಿನ ಮೇಲೆ 'ಮೆಂಟಲ್ ಮಂಜ' ಬಿಡುಗಡೆ

ಜಾಮೀನಿನ ಮೇಲೆ 'ಮೆಂಟಲ್ ಮಂಜ' ಬಿಡುಗಡೆ

Posted By:
Subscribe to Filmibeat Kannada
Arjun gets bail
ಮೆಂಟಲ್ ಮಂಜ ಖ್ಯಾತಿಯ ನಟ ಅರ್ಜುನ್ ಅಲಿಯಾಸ್ ಮಂಜೇಶ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ವರದಕ್ಷಿಣ ಕಿರುಕುಳ ಆರೋಪದ ಮೇಲೆ ನಟ ಅರ್ಜುನ್ ಅವರನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದರು.

ಗುರುವಾರ (ಆ.30) ವಿಚಾರಣೆ ನಡೆಸಿದ 7ನೇ ಎಸಿಎಂಎಂ ನ್ಯಾಯಾಲಯ ಅರ್ಜುನ್ ಗೆ ಜಾಮೀನು ನೀಡಿದೆ. ರು.1 ಲಕ್ಷ ಬಾಂಡು ಹಾಗೂ 15 ದಿನಗಳಿಗೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಹಾಗೆಯೇ ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದೂ ಎಂದೂ ನ್ಯಾಯಾಲಯ ಅರ್ಜುನ್ ಅವರಿಗೆ ಎಚ್ಚರಿಕೆ ನೀಡಿದೆ. ಅರ್ಜುನ್ ಪತ್ನಿ ಲತಾಶ್ರೀ ಅವರು ವರದಕ್ಷಿಣೆ ಕಿರುಕುಳ ತಾಳಲಾರದೆ ಪೀಣ್ಯಾ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಮಂಗಳವಾರ (ಆ.28) ರಾತ್ರಿ ಬಂಧಿಸಿದ್ದರು.

ಮಂಗಳವಾರ ರಾತ್ರಿ ತನ್ನ ಸಂಗಡಿಗರೊಂದಿಗೆ ಆಗಮಿಸಿದ ಅರ್ಜುನ್ ಬಾಗಲಗುಂಟೆ ಎಂಇಐ ಲೇಔಟ್ ನಲ್ಲಿರುವ ತನ್ನ ಪತ್ನಿ ಲಲಾಶ್ರೀ ಹಾಗೂ ಅವರ ಮನೆಯವರ ಮೇಲೆ ಗಲಾಟೆ ಮಾಡಿದ್ದ. ಇದಿಷ್ಟೇ ಅಲ್ಲದೆ ಮನೆಯ ಭದ್ರತಾ ಸಿಬ್ಬಂದಿಯ ಮೇಲೂ ಹಲ್ಲೆ ಮಾಡಿದ್ದಾಗಿ ದೂರು ನೀಡಿಲಾಗಿತ್ತು.

ಕನ್ನಡದಲ್ಲಿ ತಕ್ಕಮಟ್ಟಿಗೆ ತನ್ನ ಛಾಪು ಮೂಡಿಸಿದ್ದ ನಟ ಈತ. ಪ್ರೇಮ್ ನಗರ, ಜರ್ನಿ, ತಿಮ್ಮ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಸದ್ಯಕ್ಕೆ 'ಆಟೋ ಮಂಜ' ಎಂಬ ಚಿತ್ರದಲ್ಲೂ ಅಭಿನಯಿಸುತ್ತಿದ್ದು ಅದು ಇನ್ನೂ ಚಿತ್ರೀಕರಣ ಹಂತದಲ್ಲಿದೆ.

ಲತಾಶ್ರೀ ಆವರನ್ನು ಅರ್ಜುನ್ ಪ್ರೀತಿಸಿ ಮದುವೆಯಾಗಿದ್ದರು. ಈಕೆ ಅರ್ಜುನ್ ಅವರ ಸಂಬಂಧಿಕರು. ಇವರಿಬ್ಬರ ದಾಂಪತ್ಯ ಜೀವನದ ಫಲವಾಗಿ ಇವರಿಗೆ 3 ವರ್ಷದ ಮಗು ಕೂಡ ಇದೆ. (ಒನ್ ಇಂಡಿಯಾ ಸಿನಿ ಡೆಸ್ಕ್)

English summary
The 7th ACMM court on Thursday (30th August) granted conditional bail to Kannada film actor Arjun alias Manjesh (Mental Manja fame actor), who has been accused of assaulting his wife Lathasri.
Please Wait while comments are loading...