ಡರ್ಟಿ ಪೋಲೀಸ್ ಆಗಿ ಟಾಲಿವುಡ್ ಗೆ ಕಾಲಿಟ್ಟ ನಟ ಚೇತನ್

ಸ್ಯಾಂಡಲ್ ವುಡ್ ನ ನಟ ಮತ್ತು ಸಾಮಾಜಿಕ ಹೋರಾಟಗಾರ ಆ ದಿನಗಳು ಚೇತನ್ ತೆಲುಗು ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ. ಸ್ಯಾಂಡಲ್ ವುಡ್ ಈಗಾಗಲೇ 8 ಸಿನಿಮಾಗಳನ್ನು ಮಾಡಿರುವ ಚೇತನ್ ಇದೀಗ ಚೊಚ್ಚಲ ತೆಲುಗು ಸಿನಿಮಾದ ತಯಾರಿಯಲ್ಲಿದ್ದಾರೆ.

ಸಾಯಿ ಕಾರ್ತಿಕ್ ಮತ್ತು ಶ್ರೀಕಾಂತ್ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಚಿತ್ರಕ್ಕೆ ಖ್ಯಾತ ಚಿತ್ರಕಥೆ ಬರಹಗಾರ ಚಕ್ರವರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ಕನ್ನಡದಲ್ಲೂ ತಯಾರಾಗುತ್ತಿದೆ. ತೆಲುಗು ಆವೃತ್ತಿಯನ್ನು ಈಗಾಗಲೇ ಪ್ರಾರಂಭ ಮಾಡಲಾಗಿದೆ. ಹೈದರಾಬಾದ್ ನಲ್ಲಿ ಈಗಾಗಲೆ ಮುಹೂರ್ತ ನೆರವೇರಿದೆ.

ಚಿತ್ರದಲ್ಲಿ ಚೇತನ್ ಡರ್ಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ಚೇತನ್ ಮಿಂಚುತ್ತಿದ್ದಾರೆ. ಕಥೆ ಕೇಳಿ ಸಖತ್ ಥ್ರಿಲ್ ಆದ ಚೇತನ್ ಈ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ಮುಹೂರ್ತ ನಡೆದಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.

 Kannada Actor Chethan Kumar to make his Telugu Debut

ಚೇತನ್ ಸದ್ಯ ರಣಂ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಇನ್ನು ಉಳಿದಂತೆ ಮಾರ್ಗ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ.

ಚೇತನ್ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ಸಾಮಾಜಿಕ ಹೋರಾಟದ ಮೂಲಕ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಚೇತನ್ ಸದಾ ಪೋಸ್ಟ್ ಗಳನ್ನು ಹಾಕುತ್ತಿರುತ್ತಾರೆ.

Recommended Video

Ragini Dwivedi ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ | Filmibeat Kannada

More from Filmibeat

English summary
Sandalwood Actor Chethan Kumar to make his Telugu Debut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X