For Quick Alerts
  ALLOW NOTIFICATIONS  
  For Daily Alerts

  'ಪ್ರೇಮಕಥೆ'ಗೆ ಚಿಕ್ಕಣ್ಣನಿಂದ ಒಂದು ಶೋಕ ಗೀತೆ

  By Suneetha
  |

  ಕಾಮಿಡಿ ನಟ ಚಿಕ್ಕಣ್ಣ ಅವರು ತಮ್ಮ ನಟನೆಯ ಮೂಲಕ ಮಾತ್ರವಲ್ಲದೇ ಗಾಯನದ ಮೂಲಕ ಕೂಡ ಇತ್ತೀಚೆಗೆ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಈ ಮೊದಲು 'ಶಾರ್ಪ್ ಶೂಟರ್' ಚಿತ್ರದ ಹಾಡೊಂದಕ್ಕೆ ನಟ ದಿಗಂತ್ ಅವರ ಜೊತೆ ಒಂದು ಹಾಡನ್ನು ಹಾಡಿದ್ದರು. ಆದರೆ ಅದ್ಯಾಕೋ ಅಷ್ಟಾಗಿ ವರ್ಕೌಟ್ ಆಗಿರಲಿಲ್ಲ.

  ಇದೀಗ ಮತ್ತೆ ಚಿಕ್ಕಣ್ಣ ತಮ್ಮ ಧ್ವನಿಯ ಮೂಲಕ ಕಮಾಲ್ ಮಾಡಲು ಹೊರಟಿದ್ದಾರೆ. ಅಂದಹಾಗೆ ಒಬ್ಬ ಕಾಮಿಡಿ ನಟ ಹಾಡುತ್ತಾರೆ, ಅಂದ್ರೆ ಅದು ಕಾಮಿಡಿ ಹಾಡೇ ಆಗಿರಬಹುದು ಅಂತ ನೀವು ಊಹೆ ಮಾಡಬಹುದು.['ನನ್ನ ನಿನ್ನ ಪ್ರೇಮಕಥೆ'ಗೆ ಪ್ರೇಮ ಪತ್ರ ಬರೆಯಿರಿ ಲಕ್ಷ ಬಹುಮಾನ ಗೆಲ್ಲಿ]

  ಆದರೆ ಅದು ತಪ್ಪು, ಚಿಕ್ಕಣ್ಣ ಅವರು ಈ ಬಾರಿ ಪ್ಯಾಥೋ ಸಾಂಗ್ ಒಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ. ನಟ ವಿಜಯ ರಾಘವೇಂದ್ರ ಮತ್ತು ನಟಿ ನಿಧಿ ಸುಬ್ಬಯ್ಯ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ನನ್ನ ನಿನ್ನ ಪ್ರೇಮ ಕಥೆ' ಚಿತ್ರದ ಶೋಕ ಗೀತೆ ಒಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ.

  ಇನ್ನು ಚಿಕ್ಕಣ್ಣ ಅವರು ಮಾತ್ರವಲ್ಲದೇ ನಟ ಉಪೇಂದ್ರ ಮತ್ತು ಪುನೀತ್ ರಾಜ್ ಕುಮಾರ್ ಅವರು ಕೂಡ ಹಾಡಿಗೆ ಧ್ವನಿಯಾಗಿದ್ದಾರೆ. ಪುನೀತ್ ಅವರು 'ನಾಗರಕಟ್ಟೆ ಶಂಕರ್ ನಾಗ್ ಆರ್ಕೇಸ್ಟ್ರಾ' ಎಂಬ ಹಾಡನ್ನು ಹಾಡಿದರೆ, ಉಪ್ಪಿ ಅವರು 'ಓಡು ಓಡು ಓಡು ಹೊಂಟೀವ್ರಿ' ಎಂಬ ಹಾಡಿಗೆ ಧ್ವನಿಯಾಗಿದ್ದಾರೆ. ಜೊತೆಗೆ ವಿಜಯ ರಾಘವೇಂದ್ರ ಅವರು ಕೂಡ ರೋಮ್ಯಾಂಟಿಕ್ ಹಾಡಿಗೆ ತಮ್ಮ ವಾಯ್ಸ್ ನೀಡಿದ್ದಾರೆ.['ನನ್ನ ನಿನ್ನ ಪ್ರೇಮಕಥೆ'ಯಲ್ಲಿ ಉಪ್ಪಿ ಮತ್ತು ಪುನೀತ್ ರ ಕಮಾಲ್]

  ಶಿವು ಜಮಖಂಡಿ ಅವರ ಚೊಚ್ಚಲ ನಿರ್ದೇಶನ ಈ ಚಿತ್ರಕ್ಕೆ, ಹಾಡುಗಳನ್ನು ಅವರೇ ಬರೆದಿದ್ದಾರೆ. ಇಡೀ ಚಿತ್ರದಲ್ಲಿ ಉತ್ತರ ಕರ್ನಾಟಕದ ಕಥೆ ಇರುವುದರಿಂದ ಅಲ್ಲಿನ ಭಾಷೆ ಮತ್ತು ಅಲ್ಲಿನ ಸ್ಥಳದಲ್ಲೇ ಚಿತ್ರೀಕರಣ ನಡೆಸಲಾಗಿದೆ.[ದಿನವೊಂದಕ್ಕೆ ಅತಿ ಹೆಚ್ಚು ಗಳಿಸುವ ಕನ್ನಡ ನಟರಿವರು]

  ಇನ್ನು ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ಎರಡನೇ ವಾರದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Kannada Actor Chikkanna has sung a song in Kannada Actor Vijay Raghavendra, Kannada Actress Nidhi Subbaiah starrer upcoming Kannada Movie 'Nanna Ninna Prema Kathe'. The movie is directed by Shivu Jamkhandi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X