twitter
    For Quick Alerts
    ALLOW NOTIFICATIONS  
    For Daily Alerts

    'ಟಿಕ್ ಟಾಕ್' ಖಾತೆ ಡಿಲೀಟ್ ಮಾಡಿ ರಾಷ್ಟ್ರಪ್ರೇಮ ಹೊರಹಾಕಿದ ಡಿ ಬಾಸ್ ಫ್ಯಾನ್ಸ್

    |

    ರಾಷ್ಟ್ರದಲ್ಲಿ ಚೀನಾ ವಸ್ತುಗಳನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಮಂದಿ ಮುಂದಿ ಮುಂದಾಗಿದ್ದಾರೆ. ಚೀನಾ ವಸ್ತುಗಳನ್ನು, ಅಪ್ಲಿಕೇಷನ್ ಗಳನ್ನು ಬಳಸದಂತೆ ಸ್ವಯಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಚೀನಾ ವಸ್ತುಗಳನ್ನು ಬಳಸದ್ದಂತೆ ಚೀನಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೆ ಪ್ರಾರಂಭವಾಗಿದೆ.

    Recommended Video

    ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡುವ ನಿರ್ಧಾರಕ್ಕೆ ಬಂದ್ರು ದರ್ಶನ್ ಅಭಿಮಾನಿಗಳು|Darshan Fans Uninstalled TikTok

    ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಹ ಚೀನಾ ವಸ್ತುವನ್ನು ಮತ್ತು ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಹೌದು, ಡಿ ಫ್ಯಾನ್ಸ್ ಈಗ ಟಿಕ್ ಟಾಕ್ ನಲ್ಲಿದ್ದ ಡಿ ಖಾತೆಯನ್ನು ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿದ್ದಾರೆ. ಮುಂದೆ ಓದಿ..

    'ಆ' ಸಿನಿಮಾ ಬಗ್ಗೆ ಈಗ ಮಾತು ಬೇಡ: ದರ್ಶನ್'ಆ' ಸಿನಿಮಾ ಬಗ್ಗೆ ಈಗ ಮಾತು ಬೇಡ: ದರ್ಶನ್

    ಹೆಚ್ಚು ಫಾಲೋವರ್ಸ್ ಹೊಂದಿದ್ದ ಟಿಕ್ ಟಾಕ್ ಖಾತೆ ಡಿಲೀಟ್

    ಹೆಚ್ಚು ಫಾಲೋವರ್ಸ್ ಹೊಂದಿದ್ದ ಟಿಕ್ ಟಾಕ್ ಖಾತೆ ಡಿಲೀಟ್

    'ಡಿ' ಖಾತೆ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದ ಖಾತೆ ಇದಾಗಿತ್ತು. ಸುಮಾರು 23 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಈ ಖಾತೆ ಹೊಂದಿತ್ತು. ಡಿ ಟೀಮ್ ಯಿಂದ ಸಾಕಷ್ಟು ವಿಡಿಯೋಗಳು ಶೇರ್ ಆಗಿತ್ತು. ಅಲ್ಲದೆ ಲಕ್ಷಗಟ್ಟಲೆ ಲೈಕ್ಸ್ ಗಳನ್ನು ಡಿ ಖಾತೆ ಗಿಟ್ಟಿಸಿಕೊಳ್ಳುತ್ತಿತ್ತು. ಆದರೀಗ ಡಿ ಖಾತೆ ಡಿಲೀಟ್ ಮಾಡಲಾಗಿದೆ. ಈ ಮೂಲಕ ಚೀನಾ ವಸ್ತುಗಳನ್ನು, ಅಪ್ಲಿಕೇಷನ್ ಅನ್ನು ಬಳಸದ್ದಂತೆ ಸಂದೇಶ ನೀಡಿದ್ದಾರೆ.

    ಹೀಗಾಗುತ್ತೆ ಅನ್ನೋದು ಗೊತ್ತಿದ್ರೆ ವೀರ ಮದಕರಿ ನಾಯಕ ಸಿನಿಮಾ ಮಾಡ್ತಿರಲಿಲ್ಲ: ರಾಕ್‌ಲೈನ್

    ಟಿಕ್ ಟಾಕ್ ನಲ್ಲಿ ದಾಖಲೆ ನಿರ್ಮಿಸಿದ್ದ ಡಿ ಬಾಸ್ ಹ್ಯಾಶ್ ಟ್ಯಾಗ್

    ಟಿಕ್ ಟಾಕ್ ನಲ್ಲಿ ದಾಖಲೆ ನಿರ್ಮಿಸಿದ್ದ ಡಿ ಬಾಸ್ ಹ್ಯಾಶ್ ಟ್ಯಾಗ್

    ದರ್ಶನ್ ಅಥವಾ ಡಿ ಬಾಸ್ ಹೆಸರು ಎಲ್ಲಿ ನೋಡಿದ್ರು ಟ್ರೆಂಡಿಂಗ್ ನಲ್ಲಿ ಇರುತ್ತೆ. ಟಿಕ್ ಟಾಕ್ ನಲ್ಲಿಯೂ ದರ್ಶನ್ ಹೆಸರು ದಾಖಲೆ ನಿರ್ಮಿಸಿತ್ತು. ಇತ್ತೀಚಿಗೆ ಟಿಕ್ ಟಾಕ್ ನಲ್ಲಿ ಅತೀ ಹೆಚ್ಚು ಬಳಕೆಯಾದ ಹ್ಯಾಶ್ ಟ್ಯಾಗ್ ಅಂದರೆ ದರ್ಶನ್ ಅವರದ್ದು ಎನ್ನುವ ಸುದ್ದಿ ವೈರಲ್ ಆಗಿತ್ತು. ದರ್ಶನ್ ಸಿನಿಮಾದ ಡೈಲಾಗ್, ಹಾಡುಗಳುಗಳನ್ನು ಹೆಚ್ಚಾಗಿ ಬಳಸಿಕೊಂಡು ಅಪ್ ಲೋಡ್ ಮಾಡುತ್ತಾರೆ. ಡಿ ಬಾಸ್ ಹ್ಯಾಶ್ ಟ್ಯಾಗ್ 3 ಬಿಲಿಯನ್ ಗೂ ಹೆಚ್ಚು ಬಾರಿ ಬಳಸಲಾಗಿತ್ತು.

    ದರ್ಶನ್ ಫ್ಯಾನ್ಸ್ ಸಂದೇಶ

    ದರ್ಶನ್ ಫ್ಯಾನ್ಸ್ ಸಂದೇಶ

    "ಟಿಕ್ ಟಾಕ್ ಅಪ್ಲಿಕೇಷನ್ ಅಲ್ಲಿ ಇದ್ದ ನಮ್ಮ ತೂಗುದೀಪ 'ಡಿ' ಟೀಮ್ ಖಾತೆಯನ್ನು ಪರಮನೆಂಟ್ ಆಗಿ ಡಿಲೀಟ್ ಮಾಡಲಾಗಿದೆ ಚೀನಾದ ಅಪ್ಲಿಕೇಷನ್ ಗಳನ್ನ ಮೊಬೈಲಿನಿಂದ ಕಿತ್ತು ಬಿಸಾಕೋಣ. ಟಿಕ್ ಟಾಕ್ ಸೇರಿದಂತೆ ಹಲವು ಅಪ್ಲಿಕೇಷನ್ ಗಳನ್ನು ಅನ್ ಇನ್ಸ್ಟಾಲ್ ಮಾಡಿದ್ದೇವೆ ಇದು ಚೀನಾದ ವಿರುದ್ಧದ ನಮ್ಮ ಹೋರಾಟ. ನೀವೂ ಮಾಡಿ ಒತ್ತಾಯಿಸ್ತಿಲ್ಲ." ಎಂದು ಹೇಳಿದ್ದಾರೆ.

    ಐಎಫ್ಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಚೀನಾ ಆಪ್ ಡಿಲೀಟ್ ಅಭಿಯಾನ

    ಚೀನಾ ಆಪ್ ಡಿಲೀಟ್ ಅಭಿಯಾನ

    ಭಾರತೀಯ ಸೈನಿಕರ ಮೇಲೆ ಚೀನಾ ನಡೆಸಿರುವ ದಾಳಿ ಖಂಡಿಸಿ, ಚೀನಾದ ಆಪ್ ಗಳು ಮತ್ತು ವಸ್ತುಗಳಿಗೆ ನಿಷೇಧ ಹೇರಲಾಗುತ್ತಿದೆ. ಅದರಲ್ಲೂ ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಚೀನಾ ಆಪ್ ಟಿಕ್ ಟಾಕ್ ಅನ್ನು ಸ್ವಯಂಪ್ರೇರಿತರಾಗಿ ಅನೇಕರು ಅನ್ ಇನ್ಸ್ಟಾಲ್ ಮಾಡಿ ರಾಷ್ಟ್ರ ಭಕ್ತಿ ಮೆರೆಯುತ್ತಿದ್ದಾರೆ.

    ದರ್ಶನ್ ಫ್ಯಾನ್ಸ್ ಕೆಲಸಕ್ಕೆ ಮೆಚ್ಚುಗೆ

    ದರ್ಶನ್ ಫ್ಯಾನ್ಸ್ ಕೆಲಸಕ್ಕೆ ಮೆಚ್ಚುಗೆ

    ದರ್ಶನ್ ಅಭಿಮಾನಿಗಳ ಕೆಲಸಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದರ್ಶನ್ ಫ್ಯಾನ್ಸ್ ಈ ಕೆಲಸ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಟಿಕ್ ಟಾಕ್ ಡಿಲೀಟ್ ಮಾಡಿ ಸ್ಕ್ರೀನ್ ಶಾಟ್ ಅನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

    English summary
    Kannada actor Darshan Fans delete Tik Tok and all china App.
    Saturday, June 20, 2020, 14:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X