»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲಗೈಗೆ ಗಾಯ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲಗೈಗೆ ಗಾಯ!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯ 'ಚಕ್ರವರ್ತಿ' ಚಿತ್ರವನ್ನ ಮುಗಿಸಿ ತಮ್ಮ 49ನೇ ಚಿತ್ರದ ಶೂಟಿಂಗ್ ತಯಾರಾಗುತ್ತಿರುವ ದರ್ಶನ್, ಈ ಮಧ್ಯೆ ತಮ್ಮ ಬಲಗೈಗೆ ಗಾಯ ಮಾಡಿಕೊಂಡಿದ್ದಾರೆ.['ಚಕ್ರವರ್ತಿ' ಚಿತ್ರೀಕರಣ ಮುಗಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]

ಇತ್ತೀಚೆಗೆ ಸೃಜನ್ ಲೋಕೇಶ್ ಸಾರಥ್ಯದ 'ಮಜಾ ಟಾಕೀಸ್', 200 ಎಪಿಸೋಡ್ ಗಳನ್ನ ಪೂರೈಸಿದ ಹಿನ್ನೆಲೆ 'ಡಬಲ್ ಸೆಂಚುರಿ' ಕಾರ್ಯಕ್ರಮವನ್ನ ಅಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ದರ್ಶನ್ ಅತಿಥಿಯಾಗಿದ್ದರು. ಈ ವೇಳೆ ಚಾಲೆಂಜಿಂಗ್ ಸ್ಟಾರ್ ಅವರ ಬಲಗೈಗೆ ಗಾಯವಾಗಿರುವುದು ಕಣ್ಣಿಗೆ ಬಿದ್ದಿದೆ.

'ಮಜಾ ಟಾಕೀಸ್'ಗೆ ದರ್ಶನ್ ಅತಿಥಿ

'ಮಜಾ ಟಾಕೀಸ್' 200 ಕಂತುಗಳನ್ನ ಪೂರೈಸಿದ ಹಿನ್ನಲೆ, 'ಡಬಲ್ ಸೆಂಚುರಿ' ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಚಕ್ರವರ್ತಿ ದರ್ಶನ್ ಅತಿಥಿಯಾಗಿ ಭಾಗವಹಿಸಿದ್ದರು.[2017ರಲ್ಲಿ ಕನ್ನಡದ 'ಬಿಗ್' ನಟರ ಭವಿಷ್ಯ ಹೇಗಿದೆ! ]

ದರ್ಶನ್ ಬಲಗೈಗೆ ಗಾಯ!

'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ದರ್ಶನ್, 'ಜಗ್ಗುದಾದ' ಚಿತ್ರದ ಜಬರ್ ದಸ್ತ್ ಹಾಡಿನ ಮೂಲಕ ಮಸ್ತ್ ಎಂಟ್ರಿ ಕೊಟ್ಟರು. ಈ ವೇಳೆ ದರ್ಶನ್ ಅವರ ಬಲಗೈಗೆ ಗಾಯವಾಗಿರುವುದು ಕಂಡು ಬಂತು.[ದರ್ಶನ್ '50'ನೇ ಚಿತ್ರ ಸ್ನೇಹಿತರಿಗೆ ಮೀಸಲು! ]

ಹೇಗಾಯಿತು ಪೆಟ್ಟು.?

ಪೆಟ್ಟು ಹೇಗೆ ಆಯಿತು, ಯಾವಾಗ ಆಯಿತು ಎಂಬುದರ ಬಗ್ಗೆ ನಿಖರ ಮಾಹಿತಿಯಿಲ್ಲ. ಆದ್ರೆ, ಸೃಜನ್ ಅವರು ಹೇಳಿದ ಪ್ರಕಾರ, ''ನಿನ್ನೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ'' ಎಂಬ ಮಾತು ಮಾತ್ರ ಗೊತ್ತಾಯಿತು.

ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭಾಗಿ

ಜನವರಿ 8 ರಂದು 'ಮಜಾ ಟಾಕೀಸ್'ನ 'ಡಬಲ್ ಸೆಂಚುರಿ' ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶಶಾಂಕ್, ನಟ ಜೆಕೆ, ಪಟ್ರೆ ಅಜಿತ್, ಹಿರಿಯ ನಟಿ ಜಯಂತಿ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವರು ಭಾಗಿಯಾಗಿದ್ದರು.[ 'ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!]

ಪ್ರಿಯಾಂಕಾ ಉಪೇಂದ್ರ ಭಾಗಿ

ನಟಿ ಪ್ರಿಯಾಂಕಾ ಉಪೇಂದ್ರ ಅವರು ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಭಾಗಿವಹಿಸಿದ್ದರು.[ಚಾಲೆಂಜಿಂಗ್ ಸ್ಟಾರ್ ಗಜ ಮತ್ತು ಟಾಕಿಂಗ್ ಸ್ಟಾರ್ ಸುಜ!]

ಗಿರಿಜಾ ಲೋಕೇಶ್ ಉಪಸ್ಥಿತಿ

ಸೃಜನ್ ಲೋಕೇಶ್ ಅವರ ತಾಯಿ ಗಿರಿಜಾ ಲೋಕೇಶ್ ಅವರು ಈ ವಿಶೇಷ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. 200 ಕಂತುಗಳು ಪೂರೈಸಿದ ಹಿನ್ನೆಲೆ 'ಮಜಾ ಟಾಕೀಸ್' ಆಡಿಯೋ ಸಿಡಿಯನ್ನ ಕೂಡ ಬಿಡುಗಡೆ ಮಾಡಲಾಯಿತು.

ಹಾಸ್ಯ ನಟ ಉಮೇಶ್ ಅವರಿಗೆ ಸನ್ಮಾನ

ಮಜಾ ಟಾಕೀಸ್ 200 ಕಂತುಗಳನ್ನ ಕಂಪ್ಲೀಟ್ ಮಾಡಿದ್ದ ವಿಶೇಷ ಸಂದರ್ಭದಲ್ಲಿ ಕನ್ನಡದ ಹಿರಿಯ ಹಾಸ್ಯ ನಟ ಉಮೇಶ್ ಅವರನ್ನ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನ ನಿರೀಕ್ಷಿಸಿ!

ಜನವರಿ 8 ರಂದು ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಈ ಅದ್ದೂರಿ ಕಾರ್ಯಕ್ರಮವನ್ನ ಅಯೋಜಿಸಲಾಗಿದ್ದು, ಆದಷ್ಟೂ ಬೇಗ ಟಿವಿಯಲ್ಲಿ ಪ್ರಸಾರವಾಗಲಿದೆ.['ಟಾಕಿಂಗ್ ಸ್ಟಾರ್' ಬರ್ತ್ ಡೇಗೆ 'ಚಾಲೆಂಜಿಂಗ್ ಸ್ಟಾರ್' ಸ್ಪೆಷಲ್ ಗೆಸ್ಟ್]

English summary
The challenging star Darshan is guest at the 200th episode of ‘Maja Talkies’ a reality comedy show in the leadership of Srujan Lokesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada