»   » ದರ್ಶನ್ ಮುಂದಿನ ಸಿನಿಮಾ ಯಾವುದು ಗೊತ್ತಾ?

ದರ್ಶನ್ ಮುಂದಿನ ಸಿನಿಮಾ ಯಾವುದು ಗೊತ್ತಾ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಜಗ್ಗುದಾದಾ' ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ ಅಂತ ನಿಮಗೆಲ್ಲಾ ಗೊತ್ತು. ಇನ್ನು ಕೆಲವೇ ತಿಂಗಳುಗಳಲ್ಲಿ 'ಜಗ್ಗುದಾದಾ' ಸಿನಿಮಾ ಬಿಡುಗಡೆ ಆಗುತ್ತೆ. ಅದಕ್ಕೂ ಮುನ್ನ ಇದೇ ತಿಂಗಳು 'ವಿರಾಟ್' ನಿಮ್ಮೆದುರಿಗೆ ಬರುತ್ತೆ.

'ಜಗ್ಗುದಾದಾ' ಚಿತ್ರ ಮುಗಿದ್ಮೇಲೆ ದರ್ಶನ್ ಯಾವ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ? ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. 'ಜಗ್ಗುದಾದಾ' ಕಂಪ್ಲೀಟ್ ಆದ ಕೂಡಲೆ ದರ್ಶನ್ 'ಚಕ್ರವರ್ತಿ' ಆಗಲಿದ್ದಾರೆ. ['ಉತ್ತಮ ವಿಲನ್'ಗಳಿಗೆ ದರ್ಶನ್-ಸೃಜನ್ ನಮನ]

chingari

ಹೌದು, ದರ್ಶನ್ ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದ ಚಿಂತನ್ ಚೊಚ್ಚಲ ಬಾರಿ ನಿರ್ದೇಶನ ಮಾಡಲಿರುವ 'ಚಕ್ರವರ್ತಿ' ಚಿತ್ರಕ್ಕೆ ದರ್ಶನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಜಗ್ಗುದಾದಾ' ನಂತರ 'ಚಕ್ರವರ್ತಿ' ಶುರುಮಾಡಲು ದರ್ಶನ್ ಹೇಳಿದ್ದಾರಂತೆ. [ತಮಿಳು ರಿಮೇಕ್ ನಲ್ಲಿ ದರ್ಶನ್-ಯೋಗೇಶ್ ಜುಗಲ್ ಬಂದಿ?]

ಧನುರ್ಮಾಸ ಕಳೆದ ಕೂಡಲೆ 'ಚಕ್ರವರ್ತಿ' ಚಿತ್ರಕ್ಕೆ ಮುಹೂರ್ತ ಮುಗಿಸಲು ನಿರ್ಮಾಪಕ ಸತ್ಯಪ್ರಕಾಶ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಂದ್ಹಾಗೆ, ದರ್ಶನ್ ಅಭಿನಯದ 'ಸಾರಥಿ' ಚಿತ್ರವನ್ನು ಸತ್ಯಪ್ರಕಾಶ್ ನಿರ್ಮಾಣ ಮಾಡಿದ್ರು. 'ನವಗ್ರಹ', 'ಸಾರಥಿ', 'ಅಂಬರೀಶ' ಚಿತ್ರಗಳಿಗೆ ಚಿಂತನ್ ಸಂಭಾಷಣೆ ಬರೆದಿದ್ರು. ಈಗ 'ಚಕ್ರವರ್ತಿ' ಸಿನಿಮಾ ಮೂಲಕ ನಿರ್ದೇಶಕರಾಗಿ ಸಂಭಾಷಣೆಕಾರ ಚಿಂತನ್ ಬಡ್ತಿ ಪಡೆಯುತ್ತಿದ್ದಾರೆ.

English summary
Kannada Actor Darshan's next movie is titled as 'Chakravarthi', directed by Chintan, produced by Satya Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada