»   » ಹೆಸರಿಗೆ ಮಸಿ ಬಳಿದವರಿಗೆ ಟ್ವಿಟ್ಟರ್ ನಲ್ಲಿ ದರ್ಶನ್ ಟಾಂಗ್

ಹೆಸರಿಗೆ ಮಸಿ ಬಳಿದವರಿಗೆ ಟ್ವಿಟ್ಟರ್ ನಲ್ಲಿ ದರ್ಶನ್ ಟಾಂಗ್

Posted By:
Subscribe to Filmibeat Kannada

ಕಡೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೌನ ಮುರಿದಿದ್ದಾರೆ. ತಮ್ಮ ತೋಟದ ಮನೆಯ ಕೆಲಸಕ್ಕಿದ ಮಹೇಶ್ ಅನಾರೋಗ್ಯದ ವಿಚಾರವಾಗಿ, ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪದ ಬಗ್ಗೆ ದರ್ಶನ್ ಬಾಯಿ ಬಿಟ್ಟಿದ್ದಾರೆ.

ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ದರ್ಶನ್, ಟ್ವೀಟ್ ಮಾಡುವ ಮೂಲಕ ತಮ್ಮನ್ನ ಫಾಲೋ ಮಾಡುವ ಅಭಿಮಾನಿಗಳ ಮುಂದೆ 'ದಾಸ' ದರ್ಶನ್ ಮನಬಿಚ್ಚಿ ಮಾತನಾಡಿದ್ದಾರೆ. ಮುಂದೆ ಓದಿ......

ಅಭಿಮಾನಿಗಳ ಮುಂದೆ ಸತ್ಯ 'ದರ್ಶನ'

''ಎಲ್ಲರಿಗೂ ನಾನು ಒಂದು ವಿಷಯವನ್ನ ಹೇಳಬೇಕು. ಅದನ್ನ ತಪ್ಪಾಗಿ ಅರ್ಥೈಸಬೇಡಿ. ಆಗಿರುವ ಘಟನೆಯ ಬಗ್ಗೆ ನನ್ನ ಅಭಿಮಾನಿಗಳಿಗೆ ನಾನು ಸತ್ಯವನ್ನ ತಿಳಿಸಬೇಕಿದೆ''.

ದರ್ಶನ್ ವಿರುದ್ಧ ನಡೀತಿದೆ ಮಸಲತ್ತು!

''ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನಕ್ಕೆ ಕೈಹಾಕಿರುವವರು ಅದನ್ನ ಮುಂದುವರಿಸಲಿ.''

''ದೇವರು ತಕ್ಕ ಉತ್ತರ ಕೊಡುತ್ತಾನೆ''

''ಕಾಲ ಮತ್ತು ದೇವರು ಅದಕ್ಕೆ ತಕ್ಕ ಉತ್ತರ ನೀಡುತ್ತಾನೆ. ಸತ್ಯದ ಪರ ನಿಂತಿರುವ ಎಲ್ಲರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು''.

ಮಸಿ ಬಳಿದವರಿಗೆ ಟ್ವಿಟ್ಟರ್ ನಲ್ಲಿ ದರ್ಶನ್ ಟಾಂಗ್

''ನನ್ನ ಅಭಿಮಾನಿಗಳನ್ನ ಹೊರತುಪಡಿಸಿ ಇನ್ಯಾರಿಗೂ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. 'ಐರಾವತ' ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ - ನಿಮ್ಮ ಪ್ರೀತಿಯ ದಾಸ ದರ್ಶನ್'' ಅಂತ ದರ್ಶನ್ ಕೆಲವೇ ಗಂಟೆಗಳ ಹಿಂದೆ ಟ್ವೀಟ್ ಮಾಡಿದ್ದಾರೆ.

ವಿವಾದಕ್ಕೆ ಹೈಕೋರ್ಟ್ ಮಧ್ಯಪ್ರವೇಶ

ಅಸಲಿಗೆ, ತೋಟದ ಕೆಲಸಗಾರ ಮಹೇಶ್ ಮತ್ತು ಕುಟುಂಬ ಮಾಡಿದ ಆರೋಪಕ್ಕೆ ಹೈಕೋರ್ಟ್ ಇಂದು ಸ್ವಯಂ ಪ್ರೇರಿತ ದೂರು ದಾಖಲಿಸಿದೆ. ವಿಷಯ ಸ್ವಲ್ಪ ಸೀರಿಯಸ್ ಆಗಿರುವ ಕಾರಣ, ಇಲ್ಲಿಯವರೆಗೂ ತಣ್ಣಗಿದ್ದ ದರ್ಶನ್ ಇದೀಗ ಟ್ವಿಟ್ಟರ್ ಮುಖಾಂತರ ಎಲ್ಲರಿಗೂ ಉತ್ತರ ನೀಡಿದ್ದಾರೆ.

ಇಷ್ಟಕ್ಕೂ ವಿವಾದ ಏನು?

ಕಳೆದ ಐದು ವರ್ಷಗಳಿಂದ ಮಹೇಶ್ ಮತ್ತು ಕುಟುಂಬ ದರ್ಶನ್ ಒಡೆತನದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ, ತೋಟದ ಕೆಲಸ ಮಾಡುವ ಹೊತ್ತಲ್ಲಿ ಮಹೇಶ ತನ್ನ ಬಲಗಣ್ಣನ್ನ ಕಳೆದುಕೊಂಡಿದ್ದಾನೆ. ಎತ್ತಿನ ಕೊಂಬು ಮಹೇಶನ ಕಣ್ಣಿಗೆ ತಾಗಿ, ಮಿದುಳಿನ ನರಗಳಿಗೂ ಗಾಯವಾಗಿದ್ದರಿಂದ ಮಹೇಶನಿಗೆ ಲಕ್ವ ಹೊಡೆದಿದೆ. ಚಿಕಿತ್ಸೆ ಸಹಾಯಕ್ಕಾಗಿ ಮಹೇಶನ ಕುಟುಂಬ ದರ್ಶನ್ ಬಳಿ ಸಹಾಯ ಕೇಳಿದಾಗ ನಿರ್ಲಕ್ಷ್ಯ ವಹಿಸಿದ್ದಾರೆ ಅನ್ನುವ ಆರೋಪ ಕೇಳಿಬಂದಿದೆ. [ದರ್ಶನ್ ತೋಟದ ಮನೆಯಲ್ಲಿ ಆಗಿದ್ದೇನು? ಫುಲ್ ಸ್ಟೋರಿ]

ದರ್ಶನ್ ಹೆಸರಿಗೆ ಮಸಿ ಬಳಿಯುತ್ತಿರುವವರು ಯಾರು?

ಈಗಾಗಲೇ ದರ್ಶನ್ ಅಭಿಮಾನಿಗಳ ಬಳಗ 'ಡಿ' ಕಂಪನಿ ಹೇಳಿದಂತೆ ಈ ವಿಚಾರದಲ್ಲಿ ದರ್ಶನ್ ಹೆಸರಿಗೆ ಕಳಂಕ ತರುವ ಹುನ್ನಾರ ನಡೆಯುತ್ತಿದೆ. ದರ್ಶನ್ ಟ್ವೀಟ್ ಗಳನ್ನ ಸೂಕ್ಷ್ಮವಾಗಿ ಗಮನಿಸಿದರೆ, ನಿಮ್ಮೆಲ್ಲರ ಪ್ರೀತಿಯ 'ದಾಸ' ಹೇಳಿರುವುದು ಅದನ್ನೆ. ಹಾಗಾದ್ರೆ, ದರ್ಶನ್ ವಿರುದ್ಧ ಮಸಲತ್ತು ಮಾಡುತ್ತಿರುವವರು ಯಾರು? ಅದಕ್ಕೆ ಕಾಲವೇ ಉತ್ತರಿಸಬೇಕು. (ಫಿಲ್ಮಿಬೀಟ್ ಕನ್ನಡ)

English summary
Finally, Kannada Actor Darshan reacts on his Farm Worker Mahesh's Controversy. The Actor has taken his Twitter Account to react on this issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada