For Quick Alerts
  ALLOW NOTIFICATIONS  
  For Daily Alerts

  ಪ್ರಚಾರದ ನಡುವೆಯೂ ಅಣ್ಣಾವ್ರರನ್ನ ಮರೆಯದ ಚಾಲೆಂಜಿಂಗ್ ಸ್ಟಾರ್

  |

  ಇವತ್ತು ಡಾ ರಾಜ್ ಕುಮಾರ್ ಅವರ 13ನೇ ಪುಣ್ಯ ಸ್ಮರಣೆ. ರಾಜ್ ಕುಮಾರ್ ಕಳೆದುಕೊಂಡು 13 ವರ್ಷಗಳಾದರು ಅಭಿಮಾನಿಗಳ ಪ್ರೀತಿ ಕಿಂಚಿತ್ತು ಕಮ್ಮಿ ಆಗಿಲ್ಲ. ಪ್ರತಿ ವರ್ಷದಂದೆ ಈ ವರ್ಷವು ಸಹ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸ್ಮಾರಕದ ಬಳಿ ತೆರೆಳಿ ಪೂಜೆ ಸಲ್ಲಿಸಿ ಮೇರು ನಟನನ್ನು ನೆನಪಿಸಿಕೊಂಡಿದ್ದಾರೆ.

  ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

  ಇಂದು ಬೆಳಗ್ಗೆ ರಾಜ್ ಕುಮಾರ್ ಕುಟುಂಬದವರು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪಾಜಿ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಏಪ್ರಿಲ್ ತಿಂಗಳು ಅಂದ್ರೆನೇ ರಾಜ್ ಕುಮಾರ್ ತಿಂಗಳು ಅಂತ ಕರೆಯಲಾಗುತ್ತೆ. ಕನ್ನಡದ ಈ ಖ್ಯಾತ ನಟ ಹುಟ್ಟಿದ್ದು ಮತ್ತು ನಿಧನರಾಗಿದ್ದು ಏಪ್ರಿಲ್ ತಿಂಗಳಿನಲ್ಲೇ. ಇಂತಹ ವಿಶೇಷ ದಿನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಡಾ.ರಾಜ್ ಅವರನ್ನು ಸ್ಮರಿಸಿದ್ದಾರೆ.

  ಡಾ.ರಾಜ್ ನಿಧನದ ದಿನ ಸುದ್ದಿ ಪತ್ರಿಕೆಗಳಲ್ಲಿ ಕಂಡು ಬಂದ ಶೀರ್ಷಿಕೆಗಳು

  "ಕಲೆಯನ್ನೇ ಉಸಿರಾಗಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಆಲದ ಮರದ ನೆರಳಿನಂತೆ ನೆರವಾದ ಅಣ್ಣಾವ್ರ ಪುಣ್ಯ ತಿಥಿ ಇಂದು. ಸದಾ ನಮ್ಮೊಂದಿಗೆ ಡಾ.ರಾಜ್ ಕುಮಾರ್" ಎಂದು ದಚ್ಚು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

  ಸದ್ಯ ಮಂಡ್ಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇರುವ ದರ್ಶನ್ ಪ್ರಚಾರದ ನಡುವೆಯು ಡಾ.ರಾಜ್ ಕುಮಾರ್ ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ. ರಾಜ್ ಕುಮಾರ್ ಕುಟುಂಬದ ಜೊತೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಈಗ ಅದೇ ಸಂಬಂಧವನ್ನು ದರ್ಶನ್ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ.

  English summary
  kannada actor darshan Recalled Dr. Rajkumar. For Dr. Rajkumar remembrance of 13th death anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X